ನವದೆಹಲಿ: ಕೆನಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ. ಮೃತ ವಿದ್ಯಾರ್ಥಿಯನ್ನು ಕಾರ್ತಿಕ್ ಸೈನಿ (20) ಎಂದು ಹೇಳಲಾಗಿದೆ.
ಘಟನೆ ಬುಧವಾರ ಸಂಜೆ 4:30 ರ ಸುಮಾರಿಗೆ ಯೋಂಗ್ ಸ್ಟ್ರೀಟ್ ಮತ್ತು ಸೇಂಟ್ ಕ್ಲೇರ್ ಅವೆನ್ಯೂ ರಸ್ತೆಯಲ್ಲಿ ಸಂಭವಿಸಿದ್ದು. ಕಾರ್ತಿಕ್ ಸೈಕಲ್ ನಲ್ಲಿ ರಸ್ತೆ ದಾಟುವ ವೇಳೆ ಟ್ರಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ಸಂಸ್ಥೆ ಹೇಳಿದೆ.
2021ರ ಆಗಸ್ಟ್ನಲ್ಲಿ ಭಾರತದಿಂದ ಕೆನಡಾಕ್ಕೆ ತೆರಳಿದ್ದರು. ಕಾರ್ತಿಕ್ ಅವರ ಕುಟುಂಬವು ಹರಿಯಾಣದ ಕರ್ನಾಲ್ನಲ್ಲಿ ನೆಲೆಸಿದೆ ಎಂದು ತಿಳಿದು ಬಂದಿದೆ.
ಕಾರ್ತಿಕ್ ಶೆರಿಡನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆತನ ಸಾವಿಗೆ ಕಾಲೇಜು ಸಂತಾಪ ವ್ಯಕ್ತಪಡಿಸಿದೆ. ಕಾರ್ತಿಕ್ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Related Articles
ಇದನ್ನೂ ಓದಿ : ಕಕ್ಕಿಂಜೆ ಗ್ರಾಮದ ಬಳಿ ಸಾಟಲೈಟ್ ಕರೆ, ಸ್ಪೋಟದ ಸದ್ದು ಪ್ರಕರಣ: ದ.ಕ. ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ