Advertisement

ಒಲಿಂಪಿಕ್ಸ್‌ ಬಹಿಷ್ಕಾರ: ಈಗ ಕೆನಡಾ ಸರದಿ

06:51 PM Dec 09, 2021 | Team Udayavani |

ಟೊರಾಂಟೊ: ಬೀಜಿಂಗ್‌ನಲ್ಲಿ ನಡೆಯಲಿರುವ ಮುಂದಿನ ವರ್ಷದ ಚಳಿಗಾಲದ ಒಲಿಂಪಿಕ್ಸ್‌ಗೆ “ರಾಜತಾಂತ್ರಿಕ ಬಹಿಷ್ಕಾರ’ ಹಾಕುವ ರಾಷ್ಟ್ರಗಳ ಸಾಲಿಗೆ ಈಗ ಕೆನಡಾ ಕೂಡ ಸೇರ್ಪಡೆಯಾಗಿದೆ. ಮಾನವ ಹಕ್ಕುಗಳ ದಮನದ ಕಾರಣ ಬಹಿಷ್ಕಾರ ನಿಲುವನ್ನು ಕೈಗೊಳ್ಳುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ತಿಳಿಸಿದ್ದಾರೆ.

Advertisement

ಚಳಿಗಾಲದ ಒಲಿಂಪಿಕ್ಸ್‌ ಮುಂದಿನ ವರ್ಷದ ಫೆಬ್ರವರಿ ಚೀನ ರಾಜಧಾನಿಯಲ್ಲಿ ನಡೆಯಲಿದೆ. ಬೀಜಿಂಗ್‌ ಕೂಟಕ್ಕೆ ರಾಜತಾಂತ್ರಿಕ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯ ಈಗಾಗಲೇ ಪ್ರಕಟಿಸಿವೆ. ಇದೀಗ ಕೆನಡಾ ಕೂಡ ಇದೇ ಹಾದಿ ಹಿಡಿದಿದೆ. ಇನ್ನೊಂದೆಡೆ “ಬಹಿಷ್ಕಾರ ಕ್ರಮಕ್ಕೆ ತಕ್ಕ ಉತ್ತರ ನೀಡಲಾಗುವುದು’ ಎಂದು ಚೀನ ಕೂಡ ಅಮೆರಿಕ ಬಣದ ರಾಷ್ಟ್ರಗಳಿಗೆ ಎಚ್ಚರಿಸಿದೆ.

“ಚೀನ ಸರಕಾರದಿಂದ ಪದೇಪದೆ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವುದರಿಂದ ನಾವು ತೀವ್ರ ಕಳವಳಗೊಂಡಿದ್ದೇವೆ’ ಎಂದು ಕೆನಡಾ ಪ್ರಧಾನಿ ಟ್ರಾಡೊ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next