Advertisement
ನಿಜ್ಜರ್ ವಿಚಾರವಾಗಿ ಕೆನಡಾ ಮತ್ತು ಭಾರತದ ನಡುವೆ ಮೂಡಿರುವ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಯುವ ಮೊದಲೇ ಕೆನಡಾದ ಈ ನಡೆ ಉಭಯ ರಾಷ್ಟ್ರಗಳ ನಡುವೆ ಮತ್ತೂಂದು ಕಂದಕ ಮೂಡಿಸುವ ಸಾಧ್ಯತೆ ಇದೆ.
ಭಾರತದ ಮೇಲಿನ ಕೆನಡಾದ ಆರೋಪವನ್ನು ಭಾರತ ತಿರಸ್ಕರಿಸಿದೆ. ಭಾರತದ ಕುರಿತು ಜಗತ್ತಿನ ರಾಷ್ಟ್ರಗಳು ಹೊಂದಿರುವ ಅಭಿಪ್ರಾಯವನ್ನು ಬದಲಿಸಿ, ಭಾರತದ ವರ್ಚಸ್ಸಿನ ಮೇಲೆ ದಾಳಿ ನಡೆಸಲು ಕೆನಡಾ ಈ ರೀತಿಯ ಹೊಸ ಕಾರ್ಯತಂತ್ರ ರೂಪಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ಹೇಳಿದ್ದಾರೆ. ಜತೆಗೆ ಈ ಹಿಂದೆಯೂ ಭಾರತದ ಮೇಲೆ ಜಾಗತಿಕ ಅಭಿಪ್ರಾಯ ಬದಲಿಸಲು ಪ್ರಯತ್ನಿಸಿದ್ದಾಗಿ ಕೆನಡಾದ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದರು. ಈಗಲೂ ಅಂಥದ್ದೇ ಪ್ರಯತ್ನ ಮಾಡಿದ್ದಾರೆ ಎಂದೂ ಹೇಳಿದ್ದಾರೆ. ಜತೆಗೆ ನೇರವಾಗಿ ಕೆನಡಾಗೆ ಚಾಟಿ ಬೀಸಿ, “ನೀವು ಮೊದಲಿಗೆ ನಮ್ಮ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತೀರಿ. ನಾವು ಅದನ್ನು ವಿರೋಧಿಸಿದಾಗ ನಮ್ಮ ವಿರುದ್ಧ ಇಂಥ ದೊಡ್ಡಮಟ್ಟದ ಆರೋಪ ಹೊರಿಸುತ್ತೀರಿ, ಇದು ಸರಿ ಅಲ್ಲ’ ಎಂದು ಜೈಸ್ವಾಲ್ ಹೇಳಿದ್ದಾರೆ.