ಮೈಸೂರು: 25 ವರ್ಷ ಪೊಲೀಸ್ ಕೆಲಸ ಮಾಡಿದ್ದೇನೆ. ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ. ಗೃಹ ಇಲಾಖೆಯನ್ನು ಖಂಡಿತ ನಿಭಾಯಿಸುವ ಶಕ್ತಿಯಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಗೃಹ ಖಾತೆ ಬಗ್ಗೆ ಚಿಂತನೆ ಮಾಡಿಲ್ಲ. ಅದನ್ನು ನೀಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಆರಗ ಜ್ಞಾನೇಂದ್ರ ಕೂಡ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಮೊಸರಲ್ಲಿ ಕುಲ್ಲು ಹುಡುಕುವ ಕೆಲಸ ಬೇಡ ಎಂದರು.
ರಾಜ್ಯದಲ್ಲಿ ಶಾಂತಿ ಕೆಡಿಸಲು ಅವರೇ ಪ್ರಯತ್ನ ಮಾಡುತ್ತಿದ್ದಾರೆ. ಹುಬ್ಬಳ್ಳಿ ಗಲಭೆಯಲ್ಲಿ ಪೋಸ್ಟ್ ಹಾಕಿದವನನ್ನು ಬಂಧಿಸಲಾಗಿದೆ. ಆತನನ್ನು ವಶಕ್ಕೆ ಕೊಡಿ ಎಂದು ಸಾವಿರಾರು ಜನ ಸೇರಿ ಗೂಂಡಾವರ್ತನೆ ಮಾಡಿದ್ದು ಸರಿಯೇ? ಅವರು ಆ ಮಟ್ಟಕ್ಕೆ ಹೋದರೆ ಇದು ಭಾರತವೋ ಅಥವಾ ತಾಲೀಬಾನ್ ರಾಜ್ಯವೋ ಎಂದು ಕೇಳಬೇಕಾಗುತ್ತದೆ. ಕಾನೂನು ಯಾರೂ ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದರು.
ಇದನ್ನೂ ಓದಿ:ಉರ್ದು ಶಾಲೆ ಮುಚ್ಚುವ ಪ್ರಶ್ನೆಯೇ ಇಲ್ಲ: ಸಚಿವ ಬಿ.ಸಿ.ನಾಗೇಶ್
ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರ ಕೇಳಿ ಶಾಕ್ ಆಗಿದೆ. ಇದು ನಿಜಕ್ಕೂ ದುರಂತ. ಪೊಲೀಸ್ ಆಗಲು ಪ್ರತಿಭೆ ಪ್ರಾಮಾಣಿಕತೆ ದಕ್ಷತೆ ಬೇಕು. ದುಡ್ಡಿನಿಂದ ಬಂದರೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗುವುದಿಲ್ಲ. ಇದರಿಂದಜನ ಸಾಮಾನ್ಯರಿಗೆ ಹೇಗೆ ನ್ಯಾಯ ಸಿಗುತ್ತದೆ? ನಾನು ಪೊಲೀಸ್ ಪರೀಕ್ಷೆ ಬರೆದಾಗ ಈ ರೀತಿ ಇರಲಿಲ್ಲ. ಯಾರು ಶಾಮೀಲಾಗಿದ್ದಾರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.