Advertisement
ಪ್ರಧಾನ್ ಮಂತ್ರಿ ಜನ ಧನ್ ಖಾತೆ ಎಂದರೆ ಏನು..?
Related Articles
Advertisement
ಪ್ರಧಾನ್ ಮಂತ್ರಿ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಖಾತೆಯಲ್ಲಿ, ಖಾತೆದಾರರಿಗೆ ಒಟ್ಟು 1.30 ಲಕ್ಷ ರೂ. ಸಿಗಲಿದೆ. ಇದಲ್ಲದೆ ಅಪಘಾತ ವಿಮೆ ಕೂಡ ಇದರಲ್ಲಿ ಲಭ್ಯವಿದೆ. ಖಾತೆದಾರರಿಗೆ 1,00,000 ರೂ.ಗಳ ಅಪಘಾತ ವಿಮೆ ಮತ್ತು 30,000 ರೂ.ಗಳ ಜನರಲ್ ಇನ್ಶುರೆನ್ಸ್ ಸಿಗಲಿದ್ದು, ಒಂದು ವೇಳೆ, ಖಾತೆದಾರರಿಗೆ ಅಪಘಾತವಾದರೆ, 30,000 ರೂ. ಸಿಗಲಿದೆ. ಅಪಘಾತದಲ್ಲಿ ಖಾತೆದಾರನ ಸಾವು ಸಂಭವಿಸಿದರೆ, ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಖಾತೆಗೆ ಬರಲಿದೆ.
ಪ್ರಧಾನ್ ಮಂತ್ರಿ ಜನ ಧನ್ ಖಾತೆ ತೆರೆಯುವುದು ಹೇಗೆ..?
ಜನ ಧನ್ ಖಾತೆಯನ್ನು ತೆರೆಯಲು ಹತ್ತಿರದ ಬ್ಯಾಂಕ್ ಗೆ ಹೋಗಿ ಫಾರ್ಮ್ ನನ್ನು ಭರ್ತಿ ಮಾಡಬೇಕು. ಈ ಫಾರ್ಮ್ ನಲ್ಲಿಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ಉದ್ಯೋಗ, ಮತ್ತು ವಾರ್ಷಿಕ ಆದಾಯ ಮತ್ತು ಅವಲಂಬಿತರ ಸಂಖ್ಯೆ, ಎಸ್‌ಎಸ್‌ಎ ಕೋಡ್ ಅಥವಾ ವಾರ್ಡ್ ಸಂಖ್ಯೆ, ಗ್ರಾಮ ಕೋಡ್ ಅಥವಾ ಟೌನ್ ಕೋಡ್ ಮುಂತಾದ ವಿವರವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. 10 ವರ್ಷಕ್ಕಿಂತ ,ಮೇಲ್ಪಟ್ಟ ಭಾರತೀಯ ನಾಗರೀಕರ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದು.
ಖಾತೆ ತೆರೆಯಲು ಏನೆಲ್ಲಾ ಬೇಕು..?
ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ವೋಟರ್ ಐಡಿ, ನರೆಗಾ ಜಾಬ್ ಕಾರ್ಡ್, ಗೆಜೆಟೆಡ್ ಆಫೀಸರ್ ಮೂಲಕ ಜಾರಿ ಮಾಡಲಾದ ಲೆಟರ್, ಈ ದಾಖಲೆಗಳು ಜನಧನ ಖಾತೆ ತೆರಯವ ಸಂದರ್ಭದಲ್ಲಿ ಅಗತ್ಯವಿರುತ್ತದೆ.
ಇದನ್ನೂ ಓದಿ : ಮಲ್ಯ, ನೀರವ್ ಮೋದಿ,ಚೋಕ್ಸಿಗೆ ಸಂಬಂಧಿಸಿದ 18,170.02 ಕೋಟಿ ಮೌಲ್ಯದ ಸ್ವತ್ತುಗಳ ಮುಟ್ಟುಗೋಲು!