Advertisement

ಕೈ ಕೋಟೆಯಲ್ಲಿ ಸಮಾನಾಸಕ್ತರ ಗೆಲುವು ಸಾಧ್ಯವೇ?

12:38 PM Mar 24, 2019 | Lakshmi GovindaRaju |

ಕ್ಷೇತ್ರದ ವಸ್ತುಸ್ಥಿತಿ: ವಿಧಾನಸಭಾ ಚುನಾವಣೆಯಲ್ಲಿ ಕಳೆದ ಮೂರು ಬಾರಿಯೂ (2008,13,18) ಶಾಸಕ ಎನ್‌.ಎ.ಹ್ಯಾರೀಸ್‌ ಕೈ ಹಿಡಿಯುವ ಮೂಲಕ ಕಾಂಗ್ರೆಸ್‌ ಅನ್ನು ಈ ಕ್ಷೇತ್ರದ ಮತದಾರರು ಬೆಂಬಲಿಸಿದ್ದಾರೆ. ಆದರೆ, ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳ ಕುರಿತು ಸಮಾನ ಆಸಕ್ತಿ ಹೊಂದಿದ್ದಾರೆ ಎಂದು ಕಳೆದ ಚುನಾವಣೆಯ ಅಂಕಿ ಅಂಶಗಳು ಹೇಳುತ್ತವೆ.

Advertisement

2014ರ ಚುನಾವಣೆಯಲ್ಲಿ ಪೈಪೋಟಿಯಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗೆ ಈ ಕೇತ್ರದಲ್ಲಿ ಮತಚಲಾವಣೆಯಾಗಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಒಟ್ಟು 1,10,489 (ಶೇ.55.33) ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಹರ್ಷದ್‌ ಪರ 49,831 (ಶೇ.45.5) ಮತಗಳು, ಸದ್ಯ ಲೋಕಸಭಾ ಸದಸ್ಯರಾಗಿರುವ ಪಿ.ಸಿ.ಮೋಹನ್‌ ಪರ 50,341 (ಶೇ.45.9) ಮತಗಳು ಚಲಾವಣೆಯಾಗಿವೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 7 ಬಿಬಿಎಂಪಿ ವಾರ್ಡ್‌ಗಳಿದ್ದು, ಈ ಪೈಕಿ ಪ್ರಸ್ತುತ 4 ರಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು, 2ರಲ್ಲಿ ಕಾಂಗ್ರೆಸ್‌, ಒಂದರಲ್ಲಿ ಪಕ್ಷೇತರ ಕಾರ್ಪೊರೇಟರ್‌ಗಳಿದ್ದಾರೆ. ಆದರೆ, 2014ರ ಲೊಕಸಭಾ ಚುನಾವಣೆ ವೇಳೆ 4 ಕಾಂಗ್ರೆಸ್‌, 2 ಬಿಜೆಪಿ, 1 ಪಕ್ಷೇತರ ಕಾರ್ಪೊರೇಟರ್‌ಗಳಿದ್ದರು. ಈ ಮೂಲಕ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ ಎಂದು ಅಂಕಿ ಅಂಶ ಹೇಳುತ್ತವೆ.

ಬ್ರಿಟಿಷರ ಕಾಲದ ಕಟ್ಟಡ, ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆಯಂತಹ ಪ್ರತಿಷ್ಠಿತ ರಸ್ತೆಗಳ ಜತೆಯಲ್ಲಿಯೇ ಈಜೀಪುರ, ಆನೇಪಾಳ್ಯ, ಜೋಗುಪಾಳ್ಯದಂತಹ ಕೊಳಚೆ ಪ್ರದೇಶಗಳನ್ನು ಹೊಂದಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜತೆ ಮುಸ್ಲಿಂ, ಕ್ರಿಶ್ಚಿಯನ್‌ ಸಮುದಾಯದ 70 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತಗಳಿದ್ದು, ಈ ಮತದಾರು ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಒಟ್ಟಾರೆ ನೀಡಿದ ಅನುದಾನ 0.7 ಕೋಟಿ
-ಜೋಗುಪಾಳ್ಯದಲ್ಲಿ 20 ಲಕ್ಷ ಅನುದಾನದಲ್ಲಿ ಯೋಗ ಕೇಂದ್ರ ನಿರ್ಮಾಣ.
-34 ಲಕ್ಷ ಅನುದಾನದಲ್ಲಿ ಗುಂಡಪ್ಪ ಉದ್ಯಾನ ಬಳಿ ಒಳಾಂಗಣ ಬ್ಯಾಂಡ್ಮಿಟನ್‌ ಕ್ರೀಡಾಂಗಣ.
-15 ಲಕ್ಷ ಅನುದಾನದಲ್ಲಿ ದೊಮ್ಮಲೂರು ವಾರ್ಡ್‌ನ ಪರಮಹಂಸ ಯೋಗಾನಂದ ಉದ್ಯಾನದಲ್ಲಿ ಜಿಮ್‌ ಉಪಕರಣ ಅಳವಡಿಕೆ.

Advertisement

ನಿರೀಕ್ಷೆಗಳು
-ಕ್ಷೇತ್ರದ ಬಹುದಿನ ಸಮಸ್ಯೆಯಾಗಿರುವ ಕೊಳಚೆ ಪ್ರದೇಶಗಳನ್ನ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ.
-ಸಮುದಾಯ ಭವನ, ಸ್ಪಚ್ಛಭಾರತ್‌ ಯೋಜನೆಯಡಿ ಕ್ಷೇತ್ರದ ವಿವಿಧೆಡೆ ಶೌಚಾಲಯ ನಿರ್ಮಾಣ.
-ಈ ಬಾರಿ ತೀರಾ ಕಡಿಮೆ ಅನುದಾನ ನೀಡಿದ್ದು, ಹೆಚ್ಚಿನ ಅನುದಾನ ನಿರೀಕ್ಷೆ.

-7 ವಾರ್ಡ್‌ಗಳು
-4 ಬಿಜೆಪಿ
-2 ಕಾಂಗ್ರೆಸ್‌
-1 ಇತರೆ

-3,47,664- ಜನಸಂಖ್ಯೆ
-2,13,951- ಮತದಾರರ ಸಂಖ್ಯೆ
-1,09,300- ಪುರುಷರು
-1,04,651- ಮಹಿಳೆಯರು

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು – 1,10,489 (ಶೇ.55.33)
-50,341 (ಶೇ.45.9)- ಬಿಜೆಪಿ ಪಡೆದ ಮತಗಳು
-49,831 (ಶೇ.45.5)- ಕಾಂಗ್ರೆಸ್‌ ಪಡೆದ ಮತಗಳು
-5,227 (ಶೇ.4.8) – ಆಮ್‌ ಆದ್ಮಿ ಪಡೆದ ಮತಗಳು

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಕಾಂಗ್ರೆಸ್‌ ಶಾಸಕ (ಎನ್‌.ಎ.ಹ್ಯಾರೀಸ್‌)
-ಪಾಲಿಕೆಯಲ್ಲಿ 2- ಬಿಜೆಪಿ ಸದಸ್ಯರು
-4 ಕಾಂಗ್ರೆಸ್‌ ಸದಸ್ಯರು
-1 ಇತರೆ

ಮಾಹಿತಿ: ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next