Advertisement
ಆದರ್ಶ ಸೂಪರ್ ಸ್ಪೆಷಾಲಿಟಿ ಸೆಂಟರ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಾಡೋಜ ಡಾ| ಜಿ. ಶಂಕರ್ ಅವರ ಹುಟ್ಟಹಬ್ಬದ ಪ್ರಯುಕ್ತ ಅ. 5ರಂದು ಆದರ್ಶ ಆಸ್ಪತ್ರೆಯಲ್ಲಿ ನಡೆದ ಕಿಡ್ನಿ ವೈಫಲ್ಯ, ಕ್ಯಾನ್ಸರ್ ರೋಗಿಗಳಿಗೆ ಧನ ಸಹಾಯ ವಿತರಣೆ ಹಾಗೂ ಆದರ್ಶ ಆಸ್ಪತ್ರೆಯ ಇಂಟರ್‌ವೆನ್ಶನ್ ನ್ಯೂರೋ ಸರ್ಜರಿ ವಿಭಾಗ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡವರ ಬಗ್ಗೆ ಕಾಳಜಿ ವಹಿಸಿ ಟ್ರಸ್ಟ್ ವತಿಯಿಂದ ಅನೇಕ ಬಡ ರೋಗಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಆದರ್ಶ ಆಸ್ಪತ್ರೆಯ 34 ಮಂದಿ ಕಿಡ್ನಿ ವೈಫಲ್ಯ ಮತ್ತು ಕ್ಯಾನ್ಸರ್ ಪೀಡಿತ ಪ್ರತಿಯೊಬ್ಬರಿಗೆ ತಲಾ 25,000 ರೂ. ಆರ್ಥಿಕ ಸಹಾಯ ವಿತರಿಸಲಾಗುತ್ತದೆ. ವಿವಿಧ ಆಸ್ಪತ್ರೆಗಳ 800 ರೋಗಿಗಳಿಗೆ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯ ನೀಡಲಾಗಿದೆ ಎಂದು ಹೇಳಿದರು. ಆದರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಪ್ರೊ| ಎ. ರಾಜಾ ಮಾತನಾಡಿ, ಇಂಟರ್‌ವೆನ್ಶನ್ ನ್ಯೂರೋ ಸರ್ಜರಿ ವಿಭಾಗದಿಂದ ಮಿದುಳಿನ ರಕ್ತನಾಳದ ಊತ, ಅಶುದ್ಧ ರಕ್ತ ನಾಳಗಳ ಸಮಸ್ಯೆ, ಮಿದುಳಿನ ಗೆಡ್ಡೆ, ಬೆನ್ನುಹುರಿ ಸಮಸ್ಯೆ ಮೊದಲಾದ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತ¤ದೆ. ಪಾರ್ಶ್ವವಾಯು ಉಂಟಾದರೆ ಆ ರೋಗಿ 6 ತಾಸಿನ ಒಳಗೆ ಆಸ್ಪತ್ರೆ ತಲುಪಿದರೆ ಕಾಲಿನ ರಕ್ತ ನಾಳದ ಮೂಲಕ ಕ್ಯಾಥೆಟರ್ ತೂರಿಸಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಭಾಗಕ್ಕೆ ಚುಚ್ಚುಮದ್ದು ನೀಡಿ ಶೀಘ್ರ ಗುಣಮುಖರಾಗುವಂತೆ ಮಾಡಲಾಗುತ್ತದೆ. ರೋಗಿಗೆ ಚಿಕಿತ್ಸೆ ನೀಡುವುದರ ಜತೆಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾಗುತ್ತದೆ ಎಂದರು.
Related Articles
ನ್ಯೂರೋ ಸರ್ಜನ್ ಡಾ| ಜಸ್‌ಪ್ರೀತ್ ಸಿಂಗ್, ಡಾ| ಪ್ರಶಾಂತ್ ಶೆಟ್ಟಿ, ಡಾ| ಮೋಹನ್‌ದಾಸ್ ಶೆಟ್ಟಿ, ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ ಉಪಸ್ಥಿತರಿದ್ದರು. ಆಸ್ಪತ್ರೆಯ ನಿರ್ದೇಶಕ ಡಾ| ಜಿ. ಚಂದ್ರಶೇಖರ್ ಪ್ರಸ್ತಾವನಗೈದು, ಸ್ವಾಗತಿಸಿದರು. ಡಿಯಾಗೋ ಕ್ವಾಡ್ರಸ್ ನಿರೂಪಿಸಿದರು.
Advertisement
ಕಿಡ್ನಿ ಕಾಯಿಲೆಯ ರೋಗಿಗಳಿಗೆ ಡಯಾಲಿಸಿಸ್‌ಗೆ ಪ್ರತೀ ತಿಂಗಳು 20,000 ರೂ. ಬೇಕಾಗುತ್ತದೆ. ಹೀಗಾಗಿ ಬಡವರು ತಮ್ಮ ಮನೆ, ಆಸ್ತಿ ಮಾರಾಟ ಮಾಡಿ ಚಿಕಿತ್ಸೆ ವೆಚ್ಚ ಭರಿಸುತ್ತಾರೆ. ಡಾ| ಜಿ. ಶಂಕರ್ ಟ್ರಸ್ಟ್ ವತಿಯಿಂದ ನೀಡುವ ಆರ್ಥಿಕ ಸಹಕಾರ ಬಡವರಿಗೆ ಅನುಕೂಲ ವಾಗುತ್ತದೆ. 1 ಲಕ್ಷಕ್ಕಿಂತಲೂ ಅಧಿಕ ಬಡವರಿಗೆ ಟ್ರಸ್ಟ್ ವತಿಯಿಂದ ವಿಮಾ ಕಾರ್ಡ್ ಕೂಡ ನೀಡಲಾಗಿದೆ. ಆದರ್ಶ ಆಸ್ಪತ್ರೆ ಬಡರೋಗಿಗಳ ಆರ್ಥಿಕ ಸಹಕಾರಕ್ಕೆ ಕೈಜೋಡಿಸಿದೆ.- ಡಾ| ಚಂದ್ರಶೇಖರ್, ಆದರ್ಶ ಆಸ್ಪತ್ರೆ ನಿರ್ದೇಶಕ