Advertisement

ಕ್ಯಾಂಪ್ಕೋ: ದಾಖಲೆಯ 1,740 ಕೋ. ರೂ. ವ್ಯವಹಾರ

09:20 AM May 09, 2018 | Team Udayavani |

ಕಾಸರಗೋಡು: ಬೆಳೆಗಾರರ ಹೆಮ್ಮೆಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ 2017-18ನೇ ಸಾಲಿನಲ್ಲಿ 1,740 ಕೋ. ರೂ.ಗಳ ವ್ಯವಹಾರ ನಡೆಸುವ ಮೂಲಕ ತನ್ನ 45 ವರ್ಷಗಳ ಸದಸ್ಯ ಕೃಷಿಕರ ಸೇವೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಅವರು ಕಾಸರಗೋಡು ಪ್ರಸ್‌ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಈ ಸಹಕಾರಿ ಸಂಸ್ಥೆಯು 1,453.11 ಕೋ. ರೂ. ಮೌಲ್ಯದ 52,450.11 ಮೆ. ಟನ್‌ ಅಡಿಕೆಯನ್ನು ಖರೀದಿಸಿದೆ. ಇದರಲ್ಲಿ 717.75 ಕೋ. ರೂ. ಮೌಲ್ಯದ 20,955.92 ಮೆ. ಟನ್‌ ಕೆಂಪಡಿಕೆ ಮತ್ತು 735.35 ಕೋ. ರೂ. ಮೌಲ್ಯದ 31,494.19 ಮೆ.ಟನ್‌ ಬಿಳಿ ಅಡಿಕೆ ಒಳಗೊಂಡಿದೆ. 1,472.45 ಕೋ. ರೂ. ಮೌಲ್ಯದ 50,588.67 ಮೆ. ಟನ್‌ ಅಡಿಕೆಯನ್ನು ಮಾರಾಟ ಮಾಡಿದೆ. ಇದು 686.68 ಕೋ. ರೂ. ಮೌಲ್ಯದ 20,527.71 ಮೆ. ಟನ್‌ ಕೆಂಪಡಿಕೆ ಮತ್ತು 785.76 ಕೋ. ರೂ.  ಮೌಲ್ಯದ 30,060.95 ಮೆ. ಟನ್‌ ಬಿಳಿ ಅಡಿಕೆಯನ್ನು ಒಳಗೊಂಡಿದೆ.
ಚಾಕಲೇಟು ಚಾಕಲೇಟು ಕಾರ್ಖಾನೆಯ ಒಟ್ಟು ಉತ್ಪಾದನೆಯ ಪ್ರಮಾಣ 13,685 ಮೆ.ಟನ್‌ ಆಗಿದ್ದು, ಇದರಲ್ಲಿ 8,089 ಮೆ. ಟನ್‌ ಕ್ಯಾಂಪ್ಕೋ ಬ್ರ್ಯಾಂಡಿನದ್ದಾಗಿದೆ. 181 ಕೋ. ರೂ. ಮೌಲ್ಯದ ಚಾಕಲೇಟು ಮಾರಾಟವಾಗಿದ್ದು, ಇದರಲ್ಲಿ 20 ಕೋ. ರೂ. ಮೌಲ್ಯದ 1,291 ಮೆ. ಟನ್‌ ರಫ್ತು ಒಳಗೊಂಡಿದೆ. ಕೇಂದ್ರ ಸರಕಾರದ ವಾಣಿಜ್ಯ ಸಚಿವಾಲಯ ಆಶ್ರಯದ ಭಾರತೀಯ ರಫ್ತು ಸಂಸ್ಥೆಗಳ ಫೆಡರೇಶನ್‌ (ಎಫ್‌ಐಇಒ- ಫಿಯೋ) ಪ್ರತೀ ವರ್ಷ ನೀಡುತ್ತಿರುವ ವಲಯ ಶ್ರೇಷ್ಠ ರಫ್ತುಪ್ರಶಸ್ತಿಯನ್ನು ಕಳೆದ ಸಾಲಿನಲ್ಲಿ ಕ್ಯಾಂಪ್ಕೋ ಪಡೆದುಕೊಂಡಿದೆ. ಕ್ಯಾಂಪ್ಕೋ ಸತತವಾಗಿ ನಾಲ್ಕನೇ ಬಾರಿ ಈ ಪ್ರಶಸ್ತಿಯನ್ನು ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.

ಸೌಲಭ್ಯ ಸೌಧ: ಪುತ್ತೂರಿನ ಚಾಕಲೇಟು ಕಾರ್ಖಾನೆಯ ಆವರಣದಲ್ಲಿ ಸುಮಾರು 13 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಅಂತಸ್ತುಗಳುಳ್ಳ ‘ಸೌಲಭ್ಯ ಸೌಧ’ ಕಳೆದ ಜ. 21ರಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರಿಂದ ಲೋಕಾರ್ಪಣೆಗೊಂಡಿದೆ. ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ದೇಶೀಯ ಆಹಾರ ಭದ್ರತೆ ಮತ್ತು ಸುರಕ್ಷತೆಯ ಮಾನದಂಡಗಳಿಗೆ ಅನುಸಾರವಾಗಿ ಈ ಸೌಧ ನಿರ್ಮಾಣಗೊಂಡಿದೆ. ಈ ಸಹಕಾರಿ ಸಂಸ್ಥೆಯು 17.52 ಕೋ. ರೂ. ಮೌಲ್ಯದ 3,775.82 ಮೆ. ಟನ್‌ ಕೊಕ್ಕೋ ಹಸಿಬೀಜ ಮತ್ತು 38.35 ಕೋ. ರೂ. ಮೌಲ್ಯದ 2,190.12 ಮೆ. ಟನ್‌ ಕೊಕ್ಕೊ, ಒಣಬೀಜವನ್ನು ಖರೀದಿಸಿದೆ. ಒಟ್ಟು 3,483.26 ಮೆ.ಟನ್‌ ಒಣಬೀಜವನ್ನು ಕಾರ್ಖಾನೆಯಲ್ಲಿ ಬಳಸಲಾಗಿದೆ ಎಂದರು.

ರಬ್ಬರ್‌
ಪ್ರಸಕ್ತ ಸಾಲಿನಲ್ಲಿ ಸಹಕಾರಿ ಸಂಸ್ಥೆಯು 48.87 ಕೋ. ರೂ. ಮೌಲ್ಯದ 3,898.29 ಮೆ. ಟನ್‌ ರಬ್ಬರನ್ನು ಖರೀ ದಿಸಿದೆ ಮತ್ತು 49.85 ಕೋ. ರೂ. ಮೌಲ್ಯದ 3,912.34 ಮೆ.ಟನ್‌ ರಬ್ಬರನ್ನು ಮಾರಾಟ ಮಾಡಿದೆ ಎಂದು ವಿವರಿಸಿದರು. ಉಪಾಧ್ಯಕ್ಷರಾದ ಶಂಕರನಾರಾ ಯಣ ಭಟ್‌ ಖಂಡಿಗೆ ಮತ್ತು ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಬಿ. ಶಿವಕೃಷ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next