ಮುಂಬಯಿ: ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ಏರ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಟಾಟಾ ಸನ್ಸ್ ಸಂಸ್ಥೆ ನೇಮಿಸಿದೆ.
ವಿಲ್ಸನ್ ಸಿಂಗಾಪುರ್ ಏರ್ಲೈನ್ಸ್ (SIA) ನ ಸಂಪೂರ್ಣ ಸ್ವಾಮ್ಯದ ಕಡಿಮೆ ವೆಚ್ಚದ ಅಂಗಸಂಸ್ಥೆಯಾದ ಸ್ಕೂಟ್‌ನ ಸಿಇಒ ಆಗಿದ್ದಾರೆ. ಏರ್ ಇಂಡಿಯಾ ಮಂಡಳಿಯು ಅಗತ್ಯ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟು ವಿಲ್ಸನ್ ಅವರ ನೇಮಕಾತಿಯನ್ನು ಅನುಮೋದಿಸಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಕ್ಯಾಂಪ್ಬೆಲ್ ವಿಲ್ಸನ್ ಅವರು ವೈಮಾನಿಕ ಉದ್ಯಮದಲ್ಲಿ 26 ವರ್ಷಗಳ ಅನುಭವವನ್ನು ಹೊಂದಿದ್ದು, 1996 ರಲ್ಲಿ ನ್ಯೂಜಿಲೆಂಡ್ ನ ಲ್ಲಿ ಸಿಂಗಾಪುರ್ ಏರ್ಲೈನ್ಸ್ ನ ಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಪ್ರಾರಂಭಿಸಿದರು. ನಂತರ ಅವರು ವಿಲ್ಸನ್ ಸಿಂಗಾಪುರ್ ಏರ್‌ಲೈನ್ಸ್ ಗಾಗಿ ಹಾಂಗ್ ಕಾಂಗ್, ಕೆನಡಾ, ಜಪಾನ್‌ನಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಸಿಂಗಾಪುರಕ್ಕೆ ಹಿಂತಿರುಗುವ ಮೊದಲು ಸ್ಕೂಟ್‌ನ ಸಂಸ್ಥಾಪಕ ಸಿಇಒ ಆಗಿ ಅವರು 2016 ರವರೆಗೆ ಮುನ್ನಡೆಸಿದ್ದರು.
ಫೆಬ್ರವರಿಯಲ್ಲಿ, ಟಾಟಾ ಸನ್ಸ್ ಟರ್ಕಿಯ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಆಗಿ ನೇಮಕ ಮಾಡುವುದಾಗಿ ಘೋಷಿಸಿತ್ತು. ಆದಾಗ್ಯೂ, ಭಾರತಕ್ಕೆ ಸಂಬಂಧಿಸಿದ ಅವರ ಅಭಿಪ್ರಾಯಗಳ ವಿವಾದಗಳ ನಡುವೆ ಅವರು ಸ್ಥಾನವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು.