Advertisement

4ನೇ ಹಂತದ ಮತದಾನಕ್ಕೆ ಸಿದ್ಧತೆ; ನಾಳೆ ಒಂಬತ್ತು ಜಿಲ್ಲೆಗಳ 59 ಕ್ಷೇತ್ರಗಳಿಗೆ ಹಕ್ಕು ಚಲಾವಣೆ

12:43 AM Feb 22, 2022 | Team Udayavani |

ರಾಯ್‌ಬರೇಲಿ/ಲಕ್ನೋ: ಉತ್ತರ ಪ್ರದೇಶದಲ್ಲಿ ಫೆ.23ರಂದು ನಾಲ್ಕನೇ ಹಂತದ ಮತದಾನ ನಡೆಯಲಿದೆ. ಅದಕ್ಕಾಗಿ ಸೋಮವಾರ ಬಹಿರಂಗ ಪ್ರಚಾರ ಮುಕ್ತಾಯವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌, ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರಿ ಪ್ರಿಯಾಂಕಾ ವಾದ್ರಾ, ಬಿಎಸ್‌ಪಿ ನಾಯಕಿ ಮಾಯಾವತಿ ಸೇರಿದಂತೆ ಪ್ರಮುಖರು ವಿವಿಧ ಸ್ಥಳಗಳಲ್ಲಿ ಪ್ರಚಾರ ನಡೆಸಿದ್ದಾರೆ. ಒಟ್ಟು ಏಳು ಹಂತಗಳ ಚುನಾವಣೆ ಪೈಕಿ, ಈಗಾಗಲೇ ಮೂರು ಹಂತಗಳು ಮುಕ್ತಾಯವಾಗಿವೆ.

Advertisement

ಫಿಲಿಭಿತ್‌, ಲಖೀಂಪುರ್‌ಖೇರಿ, ಸೀತಾಪುರ, ಹರ್ದೊಯ್‌, ಉನ್ನಾವೋ, ಲಕ್ನೋ, ರಾಯ್‌ಬರೇಲಿ, ಬಂದಾ ಮತ್ತು ಫ‌ತೇಪುರ ಜಿಲ್ಲೆಗಳಲ್ಲಿರುವ 59 ಕ್ಷೇತ್ರಗಳಿಗೆ ಮತದಾನ ನಡೆಯ ಲಿದೆ. ಒಟ್ಟು 624 ಮಂದಿ ಕಣದಲ್ಲಿದ್ದಾರೆ. ಅದಕ್ಕಾಗಿ ಪ್ರಚಾರ ಸೋಮವಾರ ಮುಕ್ತಾಯವಾಗಿದೆ. 2017 ರಲ್ಲಿ ನಡೆದಿದ್ದ ಮತದಾನದಲ್ಲಿ 59 ಕ್ಷೇತ್ರಗಳ ಪೈಕಿ 51ರಲ್ಲಿ ಬಿಜೆಪಿ ಗೆದ್ದಿತ್ತು. ಎಸ್‌ಪಿಗೆ 4, ಬಿಎಸ್‌ಪಿಗೆ 3, ಅಪ್ನಾ ದಳ (ಸೋನೆಲಾಲ್‌) ಪಕ್ಷಕ್ಕೆ 1 ಸ್ಥಾನ ಸಿಕ್ಕಿತ್ತು.

ದುರ್ಬಲಗೊಳಿಸಲು ಯತ್ನ: ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಕುಂಠಿತಗೊಳಿಸಲು ಮುಂದಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಫಿಲಿಭೀತ್‌ನಲ್ಲಿ ಆಯೋಜಿಸಲಾಗಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಎರಡೂ ಪಕ್ಷಗಳ ನಾಯಕರು ಉಗ್ರ ಕೃತ್ಯದಲ್ಲಿ ತೊಡಗಿದವರ ಬಿಡುಗಡೆ ಮಾಡಲು ಒತ್ತಾಯ ಮಾಡುತ್ತಿ ದ್ದರು ಎಂದು ದೂರಿದ್ದಾರೆ. ಲಕ್ನೋ ಮತ್ತು ಸಂಕಟ ಮೋಚನ ದೇಗುಲ ಸ್ಫೋಟದಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡುವ ಬಗ್ಗೆ ಎಸ್‌ಪಿ ತನ್ನ ಪ್ರಣಾಳಿಕೆಯಲ್ಲಿ ವಾಗ್ಧಾನ ಮಾಡಿದೆ ಎಂದು ಆರೋಪಿಸಿದ್ದಾರೆ.

ಮಲತಾಯಿ ಧೋರಣೆ; ಸೋನಿಯಾ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಏನೊಂದೂ ಕೆಲಸ ಮಾಡಿಲ್ಲವೆಂದು ಕಾಂಗ್ರೆ ಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿ ದ್ದಾರೆ. ರಾಯ್‌ಬರೇಲಿ ಕ್ಷೇತ್ರಕ್ಕೆ ಬಿಜೆಪಿ ಮಲತಾಯಿ ಧೋರಣೆ ತೋರಿದೆ ಎಂದೂ ದೂರಿದ್ದಾರೆ.

ವರ್ಚುವಲ್‌ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಅವರು ಪ್ರಚಾರ ನಡೆಸಿದ್ದಾರೆ. ಅಂದ ಹಾಗೆ ಐದು ರಾಜ್ಯಗಳ ಚುನಾವಣೆಯಲ್ಲಿ ಇದು ಸೋನಿಯಾ ಅವರ ಮೊದಲ ಚುನಾವಣ ಪ್ರಚಾರವೂ ಹೌದು. ಕೇಂದ್ರ ಮತ್ತು ರಾಜ್ಯ ಸರಕಾರ ಕೊರೊನಾ ಸೋಂಕಿನ ನಿರ್ವಹಣೆಯಲ್ಲಿಯೂವಿಫ‌ಲವಾಗಿದೆ. ಬಿಜೆಪಿ ಸರಕಾರ ಜನರನ್ನು ವಿಭಜಿಸುವ ಕೆಲಸವನ್ನು ಮಾತ್ರ ಮಾಡಿದೆ ಎಂದು ಟೀಕಿಸಿದ್ದಾರೆ.

Advertisement

ರಾಯ್‌ಬರೇಲಿ ಕ್ಷೇತ್ರಕ್ಕೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಜಾರಿ ತರಲು ಉದ್ದೇಶಿಸಿದ್ದರೂ ಅದನ್ನು ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಸರಕಾರಗಳು ಜಾರಿಯಾಗದಂತೆ ತಡೆದಿವೆ ಎಂದು ಆರೋಪಿಸಿದರು.

ಮಣಿಪುರ ಸಂಸ್ಕೃತಿ ರಕ್ಷಿಸುತ್ತೇವೆ: ರಾಹುಲ್‌
ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮರೆತ ಮಣಿಪುರದ ಸಂಸ್ಕೃತಿ, ಇತಿ ಹಾಸ, ಭಾಷೆಯನ್ನು ಕಾಂಗ್ರೆಸ್‌ ರಕ್ಷಿಸಲಿದೆ. ಹೀಗೆಂದು ವಯನಾಡ್‌ ಸಂಸದ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ. ಇಂಫಾಲ್‌ನಲ್ಲಿ ಆಯೋ ಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯವನ್ನು ಅಕ್ಕಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದಲ್ಲದೆ ರಾಜ್ಯದಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲು ನೀಡುವ ಬಗ್ಗೆಯೂ ಅವರು ವಾಗ್ಧಾನ ಮಾಡಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ತಮ್ಮ ನಿಲುವು ಹೇರುವುದಕ್ಕಾಗಿಯೇ ರಾಜ್ಯ ಪ್ರವೇಶ ಮಾಡಿವೆ ಎಂದು ದೂರಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧದ ಅಲೆ ಹೆಚ್ಚಾಗಿಯೇ ಇದೆ. ಶೀಘ್ರದಲ್ಲಿಯೇ ಅದಕ್ಕೆ 440 ವೋಲ್ಟ್ನ ಕರೆಂಟ್‌ ಅಪ್ಪಳಿಸಲಿದೆ. ಗೆಲ್ಲುವ ಉದ್ದೇಶದಿಂದ ಯೋಗಿ ಆದಿತ್ಯನಾಥ್‌ ಪ್ರಧಾನಿಯವರನ್ನು ಕರೆಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ಪ್ಯಾಕರ್ಸ್‌ ಆ್ಯಂಡ್‌ ಮೂವರ್ಸ್‌ ಆಗಿದ್ದಾರೆ.
-ಅಖಿಲೇಶ್ ಯಾದವ್‌,
ಉ.ಪ್ರ. ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next