Advertisement

“ಮೃತರ ಹೆಸರಿನಲ್ಲಿರುವ ಜಮೀನಿನ ಖಾತೆ ಬದಲಾವಣೆಗೆ ಅಭಿಯಾನ’

11:20 PM Dec 18, 2019 | mahesh |

ಮಹಾನಗರ: ಕುಟುಂಬದ ಹಿರಿಯರು ನಿಧನ ಹೊಂದಿದ ಸಂದರ್ಭದಲ್ಲಿ ಅವರ ಹೆಸರಿನಲ್ಲೇ ಇರುವ ಜಮೀನಿನ ಖಾತೆಯನ್ನು ಬದಲಾಯಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌ ತಿಳಿಸಿದರು.

Advertisement

ಬುಧವಾರ ನಗರದ ಸರಕಾರಿ ನೌಕರರ ಸಭಾಂಗಣದಲ್ಲಿ ನಡೆದ ದಲಿತ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು. ಮಂಗಳೂರು ತಾಲೂಕಿ ನಲ್ಲಿ 82,000 ಮಂದಿಯ ಜಮೀನು ನಿಧನ ಹೊಂದಿದ ಹಿರಿಯರ ಹೆಸರಿನಲ್ಲಿವೆ. ಅದನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದರು.

ಪರಿಶಿಷ್ಟ ಜಾತಿ-ಪಂಗಡದವರಿಗೆ ಸೇರಿ ದ ಜಮೀನನ್ನು ಅನ್ಯ ಜಾತಿಯವರಿಗೆ ಮಾರಾಟ ಮಾಡಲು ಅವಕಾಶವಿಲ್ಲ. ಆದರೆ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಅಂತಹ 1100 ಪ್ರಕರಣಗಳನ್ನು ಗುರುತಿಸಲಾಗಿದ್ದು, ಅವುಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ತಂತ್ರಾಂಶದಲ್ಲಿ ಪರಭಾರೆ ನಿಷೇಧ ಕ್ರಮ ಅನುಸರಿಸಲಾಗುತ್ತಿದೆ ಎಂದು ವಿವರಿಸಿದರು.

ಪ.ಜಾತಿ-ಪಂಗಡದವರಿಗೆ ಜಾತಿ, ಆದಾಯ ಹಾಗೂ ವಾಸ್ತವ್ಯ ಪ್ರಮಾಣ ಪತ್ರಗಳನ್ನು ಕೇವಲ ಪಡಿತರ ಚೀಟಿ ಆಧಾರದಲ್ಲಿ ತತ್‌ಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ. ಆದ್ದರಿಂದ ನಗರ ಪ್ರದೇಶದ ಅರ್ಹ ಫ‌ಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.

ಹಾಸ್ಟೆಲ್‌ ವ್ಯವಸ್ಥೆಬೇಕು
ಗ್ರಾಮೀಣ ಭಾಗದ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗ‌ಳಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ದಲಿತ ಮುಖಂಡ ಎಸ್‌. ಪಿ. ಆನಂದ ಹೇಳಿದರು. ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದರೆ ಪ್ರತ್ಯೇಕ ಬಾಡಿಗೆ ಕಟ್ಟಡ ಪಡೆದು ಹಾಸ್ಟೆಲ್‌ ವ್ಯವಸ್ಥೆ ಮಾಡುವ ಬಗ್ಗೆ ಇಲಾಖೆಯಿಂದ ಸೂಚನೆ ಬಂದಿದೆ. ಆದರೆ ಅವರಿಗೆ ಊಟ ಒಂದೇ ಹಾಸ್ಟೆಲ್‌ನಲ್ಲಿ ಕಲ್ಪಿಸಲು ತಿಳಿಸಲಾಗಿದೆ. ಸನಿಹದಲ್ಲಿ ಎಲ್ಲೂ ಸೂಕ್ತ ಕಟ್ಟಡ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ ಹೇಳಿದರು.

Advertisement

ಕಾವೂರಿನಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಾಗ ಮೀಸಲಿಡಲಾಗಿದೆ. ಇದಕ್ಕೆ ಆವರಣ ಗೋಡೆ ಹಾಗೂ ವರ್ಷ ದೊಳಗೆ ಸುಸಜ್ಜಿತ ಭವನ ನಿರ್ಮಾಣ ಮಾಡಬೇಕು. ಬಿಜೈ ಮಾರುಕಟ್ಟೆಯಲ್ಲಿ ದಲಿತರ ಹೆಸರಿನಲ್ಲಿ ಪಡೆಯುತ್ತಿರುವ ಅಂಗಡಿ ಕೋಣೆಗಳಲ್ಲಿ ಬೇರೆಯವರು ವ್ಯಾಪಾರ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಮೀಸಲು ನಿಧಿ ದುರುಪಯೋಗ ಮಾಡುವವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಅಶೋಕ್‌ ಕೊಂಚಾಡಿ ಒತ್ತಾಯಿಸಿದರು.

ಪ್ರಮುಖ ಬೇಡಿಕೆಗಳು
ದೌರ್ಜನ್ಯಕ್ಕೊಳಗಾದವರಿಗೆ ನೀಡ ಲಾಗುವ ಪರಿಹಾರ ಶೀಘ್ರವಾಗಿ ವಿತ ರಿಸಬೇಕು, ಕೊಡಿಯಾಲಬೈಲ್‌ನ ಕುದುಲ್‌ ರಂಗರಾವ್‌ ಹಾಸ್ಟೆಲ್‌ ಶೀಘ್ರ ಮರು ನಿರ್ಮಾಣ ಮಾಡಬೇಕು, ಜಿಲ್ಲಾ ಅಂಬೇಡ್ಕರ್‌ ಭವನ ಶೀಘ್ರ ಉದ್ಘಾಟಿ ಸಬೇಕು, ಡಿಸಿ ಮನ್ನಾ ಜಾಗ ಶೀಘ್ರ ಮಂಜೂರು ಮಾಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next