Advertisement
ತೀವ್ರ ಪೈಪೋಟಿಯಿಂದ ಕೂಡಿದ ಸೆಮಿಫೈನಲ್ ಸೆಣಸಾಟದಲ್ಲಿ ಸ್ಟೆಫನಸ್ ಸಿಸಿಪಸ್ 7-6 (6), 3-6, 6-3 ಅಂತರದಿಂದ ಮೆಡ್ವೆಡೇವ್ ವಿರುದ್ಧ ಮೇಲುಗೈ ಸಾಧಿಸಿದರು. ಮೊದಲ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ ಗೆದ್ದ ಸಿಸಿಪಸ್, ದ್ವಿತೀಯ ಸೆಟ್ ಕಳೆದುಕೊಂಡರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಗ್ರೀಕ್ ಆಟಗಾರನ ಕೈ ಮೇಲಾಯಿತು. ಇದು ಮೆಡ್ವೆಡೇವ್ ವಿರುದ್ಧ ಆಡಿದ 10 ಪಂದ್ಯಗಳಲ್ಲಿ ಸಿಸಿಪಸ್ ಸಾಧಿಸಿದ ಕೇವಲ ಮೂರನೇ ಗೆಲುವು. ಮೊದಲ ಸಿನ್ಸಿನಾಟಿ ಫೈನಲ್. ಹಾಗೆಯೇ ಈ ವರ್ಷದ 5ನೇ ಪ್ರಶಸ್ತಿ ಸೆಣಸಾಟ.
ವನಿತಾ ಫೈನಲ್‌ನಲ್ಲಿ ಪೆಟ್ರಾ ಕ್ವಿಟೋವಾ ಮತ್ತು ಕ್ಯಾರೋಲಿನ್ ಗಾರ್ಸಿಯಾ ಎದುರಾಗಲಿದ್ದಾರೆ. ಇವರಲ್ಲಿ ಗಾರ್ಸಿಯಾ ಅರ್ಹತಾ ಸುತ್ತನ್ನು ಆಡಿಬಂದವರು. ಹಾಗೆಯೇ ಅರ್ಹತಾ ಸುತ್ತಿನ ಮೂಲಕ ಡಬ್ಲ್ಯುಟಿಎ-1000 ಕೂಟದ ಫೈನಲ್‌ಗೆ ಲಗ್ಗೆಯಿರಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
Related Articles
Advertisement
ಮಳೆಯಿಂದ ಎರಡು ಸಲ ಅಡಚಣೆಗೊಳಾದ ಮತ್ತೂಂದು ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ 6-2, 4-6, 6-1ರಿಂದ ಬೆಲರೂಸ್‌ನ 6ನೇ ಶ್ರೇಯಾಂಕಿತ ಆಟಗಾರ್ತಿ ಅರಿನಾ ಸಬಲೆಂಕಾಗೆ ಸೋಲುಣಿಸಿದರು.
ಫೈನಲ್ ಹಾದಿಯಲ್ಲಿ ಕ್ಯಾರೋಲಿನ್ ಗಾರ್ಸಿಯಾ ಮೂರು ಮಂದಿ ಟಾಪ್-10 ಆಟಗಾರ್ತಿಯರನ್ನು ಮಣಿಸಿದ್ದರು. ಇವರಿಗೆ ಶರಣಾದವರೆಂದರೆ ಮರಿಯಾ ಸಕ್ಕರಿ (4), ಅರಿನಾ ಸಬಲೆಂಕಾ (7) ಮತ್ತು ಜೆಸ್ಸಿಕಾ ಪೆಗುಲಾ (8).