ರಿಯೋ ಡಿ ಜನೈರೊ: ಬ್ರಿಟನ್‌ನ ಕ್ಯಾಮರಾನ್ ನೂರಿ ವಿಶ್ವದ ನಂ.2 ಆಟಗಾರ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು 3 ಸೆಟ್‌ಗಳ ಹೋರಾಟದಲ್ಲಿ ಮಣಿಸಿ “ರಿಯೋ ಓಪನ್ ಟೆನಿಸ್’ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದರೊಂದಿಗೆ ಒಂದು ವಾರದ ಹಿಂದಷ್ಟೇ ಬ್ಯೂನಸ್ ಐರಿಸ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.
ಮೊದಲ ಸೆಟ್ ಹಿನ್ನಡೆಯ ಬಳಿಕ ತಿರುಗಿ ಬಿದ್ದ ಕ್ಯಾಮರಾನ್ ನೂರಿ 5-7, 6-4, 7-5 ಅಂತರದ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದು ಕ್ಯಾಮರಾನ್ ನೂರಿ ಗೆದ್ದ 5ನೇ ಎಟಿಪಿ ಪ್ರಶಸ್ತಿ. ಈ ವರ್ಷದ ಮೊದಲ ಟ್ರೋಫಿ.
ಯುಎಸ್ ಓಪನ್ ಚಾಂಪಿಯನ್ ಆಗಿರುವ ಕಾರ್ಲೋಸ್ ಅಲ್ಕರಾಜ್ ಪಂದ್ಯದ ನಡುವೆ ಬಲಗಾಲಿನ ನೋವಿಗೆ ಸಿಲುಕಿದ ಕಾರಣ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು.