Advertisement

ಮೀನುಗಾರಿಕೆ ಬಂದರಿಗೆ ಕೆಮರಾ ಕಣ್ಗಾವಲು!

09:45 PM Nov 22, 2021 | Team Udayavani |

ಮಹಾನಗರ: ಸದಾ ಜನನಿಬಿಡ ಪ್ರದೇಶವಾದ ಮಂಗಳೂರಿನ ಮೀನುಗಾರಿಕೆ ಬಂದರಿನ ಕಾರ್ಯ ಚಟು ವಟಿಕೆಯ ಮೇಲೆ ವಿಶೇಷ ನಿಗಾ ವಹಿಸುವ ಉದ್ದೇಶದಿಂದ ಹೈ ಕ್ವಾಲಿಟಿ ಸಿಸಿ ಕೆಮರಾ ಕೆಲವೇ ದಿನಗಳಲ್ಲಿ ಅಳವಡಿಕೆಯಾಗಲಿದೆ.

Advertisement

ಮೀನುಗಾರಿಕೆ-ಬಂದರು ಇಲಾಖೆಯ ನೇತೃತ್ವದಲ್ಲಿ ಸಿಸಿ ಕೆಮರಾ ಅಳವಡಿಕೆ ನಡೆಯ ಲಿದ್ದು, ಕಿಯೋನಿಕ್ಸ್‌ನಿಂದ ಈ ಕುರಿತಾದ ಪೂರಕ ಮಾಹಿತಿಗಳನ್ನು ಪಡೆಯಲಾಗಿದೆ. ದರ ಪಟ್ಟಿಯನ್ನು ಪಡೆದು ಕೆಲವೇ ದಿನಗಳಲ್ಲಿ ಸಿಸಿ ಕೆಮರಾ ಅಳವಡಿಕೆ ನಡೆಯಲಿದೆ.

ಮಂಗಳೂರು ಮೀನುಗಾರಿಕೆ ಬಂದರಿ ನಲ್ಲಿ ನಿತ್ಯ ಸಾವಿರಾರು ಮಂದಿ ಉದ್ಯೋಗ, ಖರೀದಿ ವ್ಯವಹಾರ ಸಂಬಂಧ ಆಗಮಿ ಸುತ್ತಾರೆ. ಭದ್ರತೆಯ ದೃಷ್ಟಿಯಿಂದ ಇದೆಲ್ಲದರ ಬಗ್ಗೆ ಇಲಾಖೆಗೆ ನಿಗಾ ವಹಿಸುವುದು ಸದ್ಯ ಕಷ್ಟ ಸಾಧ್ಯ. ಜತೆಗೆ ನಿತ್ಯ ನೂರಾರು ಮೀನು ಗಾರಿಕೆ ದೋಣಿಗಳು ಸಮುದ್ರಕ್ಕೆ ತೆರಳು ತ್ತಿದ್ದು, ಈ ಮೂಲಕ ಸಾವಿರಾರು ಮೀನು ಗಾರರು ಕಾರ್ಯಚಟುವಟಿಕೆ ನಡೆಸು ತ್ತಿದ್ದಾರೆ. ಈ ಎಲ್ಲ ಚಟುವಟಿಕೆ ಮೇಲೆ ಸಿಸಿಟಿವಿ ಮೂಲಕ ನಿಗಾ ವಹಿಸಲು ಇಲಾಖೆ ತೀರ್ಮಾನಿಸಿದೆ.

28 ಸಿಸಿ ಕೆಮರಾ ಅಳವಡಿಕೆ
ಮೀನುಗಾರಿಕೆ ಬಂದರಿನಲ್ಲಿ ಸದ್ಯ ಸಿಸಿಟಿವಿ ಇದ್ದರೂ ಅದು ಪೂರ್ಣ ಮಟ್ಟದಲ್ಲಿ ಬಳಕೆಯಲ್ಲಿಲ್ಲ. ಹೀಗಾಗಿ ಹೈ ಕ್ವಾಲಿಟಿ ಕೆಮರಾ ಅಳವಡಿಕೆಗೆ ನಿರ್ಧರಿಸಲಾಗಿದೆ. ಒಟ್ಟು 28 ಸಿಸಿ ಕೆಮರಾಗಳನ್ನು ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಒಂದೊಂದು ಕೆಮರಾವು ಸುಮಾರು 2 ಕಿ.ಮೀ. ದೂರದವರೆಗಿನ ದೃಶ್ಯವನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿರಲಿದೆ. ಮೀನುಗಾರಿಕೆ ದಕ್ಕೆಯಿಂದ ಅಳಿವೆಬಾಗಿಲಿನಲ್ಲಿ ಬೋಟ್‌ಗಳ ಆಗಮನ ಹಾಗೂ ನಿರ್ಗಮನದ ಬಗ್ಗೆಯೂ ಕಣ್ಣಿಡುವಷ್ಟು ಸಾಮರ್ಥ್ಯದ ಹೈ ಕ್ವಾಲಿಟಿ ಕೆಮರಾ ಇದಾಗಿರಲಿದೆ. ಮಳೆಗಾಲ, ರಾತ್ರಿ ಸಮಯ ಸಹಿತ ಎಲ್ಲ ಸಂದರ್ಭಕ್ಕೂ ತಕ್ಕುದಾದ ದೃಶ್ಯಗಳನ್ನು ಸೆರೆಹಿಡಿಯಬಹುದಾದ ಸಿಸಿಟಿವಿಗಳನ್ನು ಇಲ್ಲಿಗೆ ಅಳವಡಿಸಲಾಗುತ್ತದೆ.

ಸಿಸಿ ಕೆಮರಾ ಅಳವಡಿಕೆಗೆ ಕ್ರಮ
ಮಂಗಳೂರು ಸಹಿತ ರಾಜ್ಯದ ಮೂರು ಜಿಲ್ಲೆಗಳ 9 ಮೀನುಗಾರಿಕೆ ಬಂದರುಗಳ ಕಾರ್ಯಚಟುವಟಿಕೆಯ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಹೈ ಕ್ವಾಲಿಟಿ ಸಿಸಿ ಕೆಮರಾ ಅಳವಡಿಕೆಗೆ ನಿರ್ಧರಿಸಲಾಗಿದೆ. ಕೆಲವೇ ದಿನದಲ್ಲಿ ಎಲ್ಲ ಬಂದರುಗಳಲ್ಲಿ ಇದನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
-ತಿಪ್ಪೇಸ್ವಾಮಿ, ಅಪರ ನಿರ್ದೇಶಕರು, ಮೀನುಗಾರಿಕೆ-ಬಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next