Advertisement

ಕ್ಯಾಮೆರಾ ಕಣ್ಗಾವಲಲ್ಲಿ ಯಲಹಂಕ

11:48 AM Jan 26, 2017 | |

ಯಲಹಂಕ: ಯಲಹಂಕ ಕ್ಷೇತ್ರದ ಬಿಬಿಎಂಪಿ ವಾರ್ಡ್‌ಗಳ ವ್ಯಾಪ್ತಿಯ 400 ಆಯಕಟ್ಟಿನ ಸ್ಥಗಳಲ್ಲಿ ಸಿಸಿಕ್ಯಾಮರಾ ಅಳವಡಿಸಲಾಗುತ್ತಿದೆ. ಕೋಗಿಲು ವೃತ್ತದಲ್ಲಿ ಸಿಸಿಕ್ಯಾಮರಾ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಧ್ಯಮಗಳಿಗೆ ಈ ಬಗ್ಗೆ ವಿವರಣೆ ನೀಡಿದ ಶಾಸಕ ವಿಶ್ವನಾಥ್‌ “ಪೊಲೀಸ್‌ ಇಲಾಖೆ ಸೂಚಿಸುವ ಕಡೆಯಲ್ಲಿ ಕ್ಯಾಮರಾ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

Advertisement

ಇವು ಹೈ ಡೆಫಿನೇಷನ್‌  ಕ್ಯಾಮರಾಗಳಾಗಿದ್ದು, ರಾತ್ರಿ ವೇಳೆಯಲ್ಲೂ ಸ್ವಷ್ಟವಾಗಿ ಅರ್ದ ಕಿ.ಮೀ.ದೂರದವರೆಗೂ ಚಿತ್ರ ಸೆರೆಹಿಡಿಯುತ್ತದೆ. ಅಲ್ಲದೆ, 360ಡಿಗ್ರಿ ತಿರುಗುವ ಮೂಲಕ ಎಲ್ಲಾ ಕಡೆಗಳ ಚಿತ್ರಗಳನ್ನು  ಸೆರೆಹಿಡಿಯಬಲ್ಲದು. ವಾಚ್‌ಡಾಗ್‌ ರೀತಿಯಲ್ಲಿ 24ಗಂಟೆ ಕೆಲಸ ಮಾಡಬಲ್ಲದು. ಕ್ಯಾಮೆರಾ ಅಳವಡಿಕೆಗೆ 40 ಲಕ್ಷ ರೂ ಅನುದಾನ ಮೀಸಲಿಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಬಿಬಿಎಂಪಿ ಪ್ರಾಯೋಜಿತರನ್ನು ತೊಡಗಿಸಲಾಗುವುದು,” ಎಂದು ಹೇಳಿದರು.

“ಕ್ಯಾಮೆರಾ ಅಳವಡಿಕೆಯಿಂದ ದುಷ್ಕೃತ್ಯ, ಕಳ್ಳತನ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಸಂದರ್ಭದಲ್ಲಿ ಮಹತ್ವದ ಸಾಕ್ಷ್ಯ ಲಭ್ಯವಾಗಲಿದೆ. ರಾತ್ರಿ ಕಸ ಎಸೆಯುವುದು, ಲಾರಿಗಳಲ್ಲಿ ಕಸ ಸುರಿಯುವುದು, ಅನೈತಿಕ ಚಟುವಟಿಕೆ ಕಡಿವಾಣ ಹಾಕಲು ಇದರಿಂದ ಸಹಕಾರಿಯಾಗಲಿದೆ. ಯಲಹಂಕವನ್ನು ಅಪರಾಧರಹಿತ ಸ್ವಚ್ಚವಾದ ಸುಂದರ ನಗರವನ್ನಾಗಿ ಮಾಡಲಾಗುವುದು,” ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ ಬಿಜೆಪಿ ಯುವಮೋರ್ಚಾ ಸದಸ್ಯ ಕಡತನಮಲೆ ಸತ್ತಿಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next