Advertisement

ಸ್ಮಾರ್ಟ್‌ಫೋನ್‌ನಲ್ಲಿ  ಕೆಮರಾ ಕಮಾಲ್‌

07:19 AM Mar 08, 2019 | |

ಹೊಸ ಮೊಬೈಲ್‌ ಎಂದಾಕ್ಷಣ ಜನರು ಕೇಳ್ಳೋ ಮೊದಲ ಪ್ರಶ್ನೆ ಕೆಮರಾ ಹೇಗಿದೆ..? ಇದಕ್ಕೆ ಕಾರಣ ಮೊಬೈಲ್‌ ಇಂದು ಮಾತನಾಡುವುದಕ್ಕೆ ಮಾತ್ರ ಬಳಸುತ್ತಿಲ್ಲ. ಅದರಲ್ಲಿನ ಕೆಮೆರಾ ಗ್ರಾಹಕರ ಪ್ರಮುಖ ಆದ್ಯತೆಗಳಲ್ಲೊಂದು. ಮೊಬೈಲ್‌ ಖರೀದಿದಾರರು ಬಹುತೇಕ ಕೆಮರಾ ಹೇಗಿದೆ? ಎಷ್ಟು ಮೆಗಾಪಿಕ್ಸೆಲ್‌ ಇದೆ? ಸೆಲ್ಫಿ ಚೆನ್ನಾಗಿ ಬರುತ್ತಾ ಎಂದೇ ವಿಚಾರಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಜನರು ಭಾಗಿಯಾದಂತೆ ಮೊಬೈಲ್‌ ಚಿತ್ರಗಳು, ಮೊಬೈಲ್‌ ವಿಡಿಯೋಗಳು ಹೆಚ್ಚೆಚ್ಚು ಓಡಾಡುತ್ತಿವೆ. ಈ ಕಾರಣಕ್ಕೆ ಮೊಬೈಲ್‌ನಲ್ಲಿರುವ ಕೆಮೆರಾ ಬಹು ಆದ್ಯತೆಯ ವಸ್ತು.

Advertisement

ಸಣ್ಣ ಮಗುವಿನಿಂದ ಹಿಡಿದು ಹಿರಿಯಜ್ಜನ ತನಕ ಎಲ್ಲರ ಕಿಸೆಯಲ್ಲಿ, ಕೈಯಲ್ಲಿ ಈಗ ಮೊಬೈಲ್‌ಗ‌ಳದ್ದೇ ಆಟ. ಮೊಬೈಲ್‌ ಸೃಷ್ಟಿಸಿದ ಮಾಯಾಲೋಕವೇ ಅಂತಹುದು. ಪ್ರತಿ ದಿನವೂ, ಪ್ರತಿ ಕ್ಷಣವೂ ಬದಲಾಗುತ್ತಿರುವ ಜಾಗತಿಕ ಯುಗದಲ್ಲಿ ಮೊಬೈಲ್‌ ನಲ್ಲಿಯೂ ಹೊಸತುಗಳದ್ದೇ ಕಾರುಬಾರು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮೊಬೈಲ್‌ ಕಂಪೆನಿಗಳೂ ಹೊಸತುಗಳನ್ನು ಮಾರುಕಟ್ಟೆಗೆ ತರುತ್ತಿವೆ.

ಕೆಮರಾದ ಪ್ರಾಮುಖ್ಯ
ಯಾವುದೇ ಬ್ರ್ಯಾಂಡ್‌ನ‌ ಮೊಬೈಲ್‌ ಕೊಳ್ಳುವ ಮುನ್ನ ಗ್ರಾಹಕರು ಮೊದಲು ನೋಡುವುದೇ ಅದರಲ್ಲಿರುವ ಕೆಮರಾ ಗುಣಮಟ್ಟದ ಬಗ್ಗೆ. ಫ್ರಂಟ್‌ ಹಾಗೂ ಬ್ಯಾಕ್‌ ಕೆಮರಾ ಹೊಂದಿರುವ ಮೊಬೈಲ್‌ಗ‌ಳು ಸರಿಯಾಗಿ ಫೋಟೋ ತೆಗೆಯಲು ಅರ್ಹವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡೇ ಮೊಬೈಲ್‌ ಖರೀದಿಗೆ ಮುಂದಾಗುತ್ತಾರೆ. ಸಾಮಾನ್ಯವಾಗಿ ಮೊದಲು ಒಂದಿದ್ದ ಕೆಮರಾಗಳು, ಬಳಿಕ ಎರಡಾಯಿತು. ಆಗೆಲ್ಲ ಗ್ರಾಹಕರಿಗೆ ಸಂಭ್ರಮವೂ. ಮೊಬೈಲ್‌ನಲ್ಲಿ ಕೆಮ ರಾವೇ ಮುಖ್ಯ ಎಂಬ ವಾತಾವರಣವಿರುವಾಗ ಇನ್ನು ಮೂರು, ಐದು, ಏಳು ಕೆಮರಾ ಹೊಂದಿರುವ ಮೊಬೈಲ್‌ ಮಾರುಕಟ್ಟೆಗೆ ಬರುತ್ತದೆ ಎಂದಾದರೆ ಕುತೂಹಲ ಸಹಜ.

ಐದು ಕೆಮರಾ: ತಿಂಗಳಾಂತ್ಯಕ್ಕೆ ಮಾರುಕಟ್ಟೆಗೆ
ಮೊಬೈಲ್‌ ಜನರಿಗೆ ಪರಿಚಯವಾದ ಹೊಸತರಲ್ಲಿ ಸಣ್ಣ ಗಾತ್ರದ ನೋಕಿಯಾ ಮೊಬೈಲ್‌ನದ್ದೇ ಕಾರುಬಾರು. ಸ್ಮಾರ್ಟ್‌ಫೋನ್‌ಗಳ ಯುಗ ಆರಂಭವಾದ ಮೇಲಂತೂ ನೋಕಿಯಾ ಸೆಟ್‌ ಇನ್ನೇನೋ ಜನರಿಂದ ಮರೆಯಾಗುತ್ತದೆಯೋ ಎಂಬಷ್ಟು ತೆರೆ ಮರೆಗೆ ಸರಿಯಿತು. ಆದರೆ ಅದೇ ನೋಕಿಯಾ ಈಗ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದೆ. ಕಾರಣ ತನ್ನ ಸ್ಮಾರ್ಟ್‌ ಫೋನ್‌ಗಳಲ್ಲಿ ವಿಶಿಷ್ಟವಾದ ಐದು ಕೆಮರಾಗಳನ್ನು ಪರಿಚಯಿಸುತ್ತಿರುವುದಕ್ಕಾಗಿ. ಆ್ಯಂಡ್ರ್ಯಾಡ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಅಲೆ ಹುಟ್ಟು ಹಾಕುತ್ತಿರುವ ನೋಕಿಯಾ ಬ್ರ್ಯಾಂಡ್‌ ವಿಶ್ವದಲ್ಲೇ ಮೊದಲ ಬಾರಿಗೆ ನೋಕಿಯಾ 9 ಫ್ಯೂರ್‌ ವೀವ್‌ ಐದು ಕೆಮರಾಗಳುಳ್ಳ 5ಗX12ಎಂಪಿ/20 ಎಂಪಿ ಸ್ಮಾರ್ಟ್‌ ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಭಾರತದ ಮಾರುಕಟ್ಟೆಗೆ ಇನ್ನಷ್ಟೇ ಬರಬೇಕಿದೆ. ಮೊಬೈಲ್‌ ಶೋರೂಂಗಳ ಪ್ರಮುಖರು ಹೇಳುವ ಪ್ರಕಾರ ಮಾರ್ಚ್‌ ಅಂತ್ಯದೊಳಗೆ ಐದು ಕೆಮರಾದ ಫೋನ್‌ ಗ್ರಾಹಕರ ಕೈ ಸೇರಬಹುದು. ಜತೆಗೆ ಡ್ಯುಯೆಲ್‌ ಫ್ರಂಟ್‌ ಕೆಮ ರಾ ಸಹಿತ ಒಟ್ಟು ಏಳು ಕೆಮರಾ ಹೊಂದಿರುವ ಸ್ಮಾರ್ಟ್‌ಫೋನ್‌ ಕೂಡ ತಯಾರಾಗುತ್ತಿದೆ ಎಂಬ ಸುದ್ದಿಯೂ ಅಂತರ್ಜಾಲ ತಾಣಗಳಲ್ಲಿ ಕುತೂಹಲ ಸೃಷ್ಟಿಸಿದೆ.

ನಾಲ್ಕು ಕೆಮರಾ ಹೊಂದಿರುವ ರೆಡ್‌ ಮೀ ನೋಟ್‌ ಸಿಕ್ಸ್‌ ಪ್ರೊ ಕೂಡ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ಮಂಗಳೂರಿಗೆ ಇನ್ನಷ್ಟೆ ಕಾಲಿಡಬೇಕಿದೆ. ಇದರಲ್ಲಿ 2 ಎಂಪಿ + 5 ಎಂಪಿ ಹಿಂಬದಿ ಕೆಮ ರಾ, 20 ಎಂಪಿ + 2 ಎಂಪಿ ಸೆಲ್ಫಿà ಕೆಮ ರಾಗಳಿವೆ. ಪ್ರಮುಖ ಮೊಬೈಲ್‌ ಕಂಪೆನಿ ವಿವೋ ಕೂಡ ಹಿಂಬದಿ 3 ಕೆಮರಾ ಹೊಂದಿರುವ ಐಕ್ಯೂಓಓ ವನ್ನು ಬಿಡುಗಡೆಗೊಳಿಸುವುದಾಗಿ ಹೇಳಿದೆ. ಎಲ್‌ಜಿ ವಿ40 ಥಿಂಕ್‌ ಟ್ರಿಪಲ್‌ ಕೆಮ ರಾ ಸೆಟಪ್‌ ಕೂಡ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಮೂರೂ ಕೆಮರಾಗಳು ಕ್ರಮವಾಗಿ 12, 16, 12 ಮೆಗಾ ಪಿಕ್ಸೆಲ್‌ ಸಾಮರ್ಥ್ಯ ಹೊಂದಿದಾಗಿವೆ. ಹೀಗೆ ವಿವಿಧ ಮೊಬೈಲ್‌ ಕಂಪೆನಿಗಳು ಗ್ರಾಹಕರ ಬೇಡಿಕೆಗನುಗುಣವಾಗಿ ಮೂರು, ನಾಲ್ಕು, ಐದು, ಏಳು ಕೆಮ ರಾಗಳನ್ನು ಹೊಂದಿರುವ ಮೊಬೈಲ್‌ಗ‌ಳನ್ನು ಮಾರುಕಟ್ಟೆಗೆ ಬಿಡಲು ಸಿದ್ಧವಾಗಿ ನಿಂತಿವೆ.

Advertisement

ಮಂಗಳೂರಿನಲ್ಲಿ ಕುತೂಹಲ
ಈ ಬಗ್ಗೆ ಎಲ್ಲೆಡೆಯೂ ಕಾತರ ಮತ್ತು ಕುತೂಹಲವೂ ಇದೆ. ಮಂಗಳೂರಿನಲ್ಲಿಯೂ ಐದು ಕೆಮ ರಾ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಗೆ ಗ್ರಾಹಕರು ಉತ್ಸುಕರಾಗಿದ್ದಾರೆ. ಕಳೆದ ಜನವರಿ ತಿಂಗಳಿನಿಂದಲೇ ಏಳು ಕೆಮರಾ ಮೊಬೈಲ್‌ ಬಗ್ಗೆ ಮಾಹಿತಿಗಳು ಹರಡಲು ಶುರುವಾಗಿದ್ದು, ಮಾರುಕಟ್ಟೆಗೆ ಯಾವಾಗ ಬರುವುದೆಂಬ ಕಾತರ ಜನರದ್ದು. ವೆಬ್‌ಸೈಟ್‌ ಮುಂತಾದವುಗಳಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮೊಬೈಲ್‌ ಫೋನ್‌ ಅಂಗಡಿಗಳಿಗೆ ತೆರಳಿ ವಿಚಾರಿಸುತ್ತಿರುವ ಯುವಕ, ಯುವತಿಯರ ಸಂಖ್ಯೆ ಹೆಚ್ಚಿದೆ. ಆದರೆ ಈ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಖಾಸ ಗಿ ಮೊಬೈಲ್‌ ಶಾಪ್‌ ಸಿಬಂದಿಗಳು ಹೇಳುತ್ತಾರೆ.

ನಗರದ ಖಾಸಗಿ ಫೋನ್‌ ಮಳಿಗೆಯ ಸಿಬಂದಿ ಹೇಳುವ ಪ್ರಕಾರ, ಗ್ರಾಹಕರು ಈಗಾಗಲೇ ಎರಡಕ್ಕಿಂತ ಹೆಚ್ಚು ಕೆಮರಾ ಹೊಂದಿರುವ ಮೊಬೈಲ್‌ ಬಗ್ಗೆ ವಿಚಾರಿಸುತ್ತಿದ್ದಾರೆ. ಈ ತಿಂಗಳಾಂತ್ಯದಲ್ಲಿ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ.

ಬಿಡುಗಡೆಗೆ ನಿರೀಕ್ಷೆ
ಐದು ಕೆಮರಾ ಹೊಂದಿರುವ ಮೊಬೈಲ್‌ ನಮಗೆಲ್ಲ ಹೊಸದು. ಹೇಗಿರಬಹುದು, ಗುಣಮಟ್ಟ ಯಾವ ರೀತಿ ಇರಬಹುದು ಎಂಬ ಕುತೂಹಲವೆಲ್ಲ ಸಹಜ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆಗೆ ಕಾಯುತ್ತಿದ್ದೇವೆ.
ಹೇಮನಾಥ್‌, ಗ್ರಾಹಕ

ಹೆಚ್ಚಿದ ಕೂತೂಹಲ
ಮೊಬೈಲ್‌ ಜಗತ್ತಿನಲ್ಲೇ ಐದು ಕೆಮರಾವುಳ್ಳ ಸ್ಮಾರ್ಟ್‌ಫೋನ್‌ ಪ್ರಥಮ ಬಾರಿ ಮಾರುಕಟ್ಟೆಗೆ ಬರುತ್ತಿದೆ. ಈ ತಿಂಗಳಾಂತ್ಯದೊಳಗೆ ಈ ಫೋನ್‌ ಗ್ರಾಹಕರ ಕೈ ಸೇರುವ ನಿರೀಕ್ಷೆ ಇದೆ. ಇದಲ್ಲದೆ, ಇತರ ಎರಡಕ್ಕಿಂತ ಹೆಚ್ಚು ಕೆಮರಾ ಹೊಂದಿರುವ ಫೋನ್‌ಗಳ ಬಗ್ಗೆಯೂ ಗ್ರಾಹಕರು ಶೋರೂಂಗೆ ಬಂದಾಗ ವಿಚಾರಿಸುತ್ತಿರುತ್ತಾರೆ. ಗ್ರಾಹಕರಲ್ಲಿ ಕುತೂಹಲವೂ ಹೆಚ್ಚಿದೆ.
– ವಿಘ್ನೇಶ್‌, ಮೊಬೈಲ್‌ ಕೇರ್‌ ಸಿಬಂದಿ

ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next