Advertisement

ಒಂಟೆ- ಕುದುರೆ ರೇಸ್‌

12:30 AM Jan 31, 2019 | |

ಕುದುರೆ ಮತ್ತು ಒಂಟೆ ಒಳ್ಳೆಯ ಗೆಳೆಯರಾಗಿದ್ದವು. ಜೊತೆಯಾಗಿ ಆಹಾರ ಹುಡುಕಿ ತಿನ್ನುತ್ತಿದ್ದವು. ಒಮ್ಮೆ ಕುದುರೆಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. “ನಮ್ಮಿಬ್ಬರಲ್ಲಿ ಯಾರು ಹೆಚ್ಚು?’ ಎಂದು ಅದು ಒಂಟೆಯನ್ನ ಕೇಳಿತು. ಅದಕ್ಕೆ ಒಂಟೆ “ಕುದುರೆಯಣ್ಣ, ನಾವಿಬ್ಬರೂ ಸಮಾನರಲ್ಲವೇ?’ ಎಂದು ಹೇಳಿತು. ಆ ಮಾತಿನಿಂದ ಕುದುರೆಗೆ ಸಮಾಧಾನವಾಗಲಿಲ್ಲ. ಆನೆಯನ್ನು ಕೇಲೋಣವೆಂದು ಕುದುರೆ ಒತ್ತಾಯ ಮಾಡಿತು. 

Advertisement

ಆನೆಯು ಸ್ವಲ್ಪ ಹೊತ್ತು ಯೋಚಿಸಿ “ತಮ್ಮಂದಿರಾ, ಯಾರು ಹೆಚ್ಚು ಎಂದು ಸುಮ್ಮನೆ ಹೇಳುವುದು ಸರಿಯಲ್ಲ. ನಿಮ್ಮಿಬ್ಬರಿಗೆಎರಡು ಬಾರಿ ಓಟದ ಸ್ಪರ್ಧೆ ಏರ್ಪಡಿಸೋಣ. ನಂತರ ತೀರ್ಮಾನಿಸೋಣ’ ಎಂದು ಸಲಹೆ ನೀಡಿತು. ಸ್ನೇಹಿತರಿಬ್ಬರೂ ಒಪ್ಪಿಕೊಂಡರು. 

ಗದ್ದೆಯಲ್ಲಿ ಓಟ ಶುರುವಾಯಿತು. ಕುದುರೆ ವೇಗವಾಗಿ ಓಡಿ ಮೊದಲು ಗುರಿ ಮುಟ್ಟಿತು. ಓಟದ ಸ್ಪರ್ಧೆಯಲ್ಲಿ ಗೆದ್ದ ಕುದುರೆಯು ಜಂಭದಿಂದ “ನೋಡಿದಿರಾ? ನಾನೇ ಗೆದ್ದೆ. ಈಗ ಗೊತ್ತಾಯಿತೇ, ಯಾರು ಹೆಚ್ಚು ಶಕ್ತಿವಂತರೆಂದು’ ಎಂದು ಬೀಗಿತು. ಆಗ ಆನೆಯು “ಕುದುರೆಯಣ್ಣ ಇನ್ನೂ ಒಂದು ಪಂದ್ಯ ಬಾಕಿ ಇದೆ. ನಂತರ ಹೇಳಬಹುದು ಯಾರು ಶಕ್ತಿವಂತರೆಂದು’ ಎಂದಿತು. 

ಎರಡನೇ ಓಟದ ಸ್ಪರ್ಧೆಯನ್ನು ಆನೆ ಮರಳಿನಲ್ಲಿ ಆಯೋಜಿಸಿತು. ಈ ಬಾರಿ ಕುದುರೆಗೆ ಮಿಳಿನ ಮೇಲೆ ಓಡಲಾಗಲೇ ಇಲ್ಲ. ಒಂಟೆಯೇ ಸರಾಗವಾಗಿ ಓಡಿ ಗೆದ್ದುಬಿಟ್ಟಿತು. ಸೋತ ಕುದುರೆಗೆ ತನ್ನ ತಪ್ಪಿನ ಅರಿವಾಯಿತು. ಅದು ಆನೆ ಮತ್ತು ಒಂಟೆಯ ಹತ್ತಿರ ಕ್ಷಮೆ ಕೇಳಿತು. ಆನೆ “ನಿಮ್ಮಲ್ಲಿ ಯಾರೂ, ಹೆಚ್ಚು ಶಕ್ತಿವಂತರಲ್ಲ ಯಾರೂ ಬಲಹೀನರೂ ಅಲ್ಲ. ಪ್ರತಿಯೊಬ್ಬರಲ್ಲೂ ಅವರದೇ ಆದ ವಿಶೇಷತೆಯಿರುತ್ತದೆ. ಗೆಳೆತನದ ಆನಂದವನ್ನು ಹಂಚಿಕೊಂಡು ಬಾಳಿರಿ’ ಎಂದು ಹೇಳಿತು. ಕುದುರೆ ಮತ್ತು ಒಂಟೆ ಆನೆಗೆ ಧನ್ಯವಾದಗಳನ್ನು ತಿಳಿಸಿದವು.  

ಉಮ್ಮೆ ಕೆ. ಅಸ್ಮಾ

Advertisement
Advertisement

Udayavani is now on Telegram. Click here to join our channel and stay updated with the latest news.

Next