Advertisement

ಕಾಂಬೋಡಿಯಾದಲ್ಲಿ ತೀರ್ಥಹಳ್ಳಿ ಟೆಕ್ಕಿ ಒತ್ತೆ

09:24 PM Feb 19, 2023 | Shreeram Nayak |

ತೀರ್ಥಹಳ್ಳಿ: ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತೀರ್ಥಹಳ್ಳಿಯ ಟೆಕ್ಕಿಯೊಬ್ಬರನ್ನು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ಇರಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ವಿಷಯ ಕೇಂದ್ರ ಸರಕಾರದ ಅಂಗಳಕ್ಕೆ ತಲುಪಿದೆ.

Advertisement

ತೀರ್ಥಹಳ್ಳಿಯ ಕಿರಣ್‌ ಶೆಟ್ಟಿ ಅವರಿಗೆ ಥಾçಲ್ಯಾಂಡ್‌ನ‌ ಕಂಪೆನಿಯಲ್ಲಿ ಉದ್ಯೋಗ ಹಾಗೂ ಒಳ್ಳೆಯ ಸಂಬಳದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಕಿರಣ್‌ ಕಾಂಬೋಡಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಬಳಿಕ ಅವರನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಕಿರಣ್‌ ಶೆಟ್ಟಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಚಿಕ್ಕ ಮಗು ಕೂಡ ಇದೆ. ಈಗ ಕಿರಣ್‌ ಕುಟುಂಬ ಆತಂಕಕ್ಕೊಳಗಾಗಿದೆ. ಅವರನ್ನು ಸುರಕ್ಷಿತವಾಗಿ ಕರೆತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿದ್ದು, ವಾಪಸ್‌ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next