ತೇರದಾಳ: ವಾಯವ್ಯ ಶಿಕ್ಷಕರ, ಪದವೀಧರ ವಿಧಾನ ಪರಿಷಿತ್ ಚುನಾವಣೆ ಸೇರಿದಂತೆ 2023ರ ವಿಧಾನಸಭೆ ಚುನಾವಣೆ ಎದುರಿಸಲು ಕಾರ್ಯಕರ್ತರು ಸಜ್ಜಾಗಬೇಕೆಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಹೇಳಿದರು.
ಇಲ್ಲಿನ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಕಷ್ಟು ಸವಾಲ್‌ಗಳನ್ನು ಎದುರಿಸುವುದರೊಂದಿಗೆ ರಾಜ್ಯದ ಹಿತ ಕಾಪಾಡುವ ಕೆಲಸ ಬಿಜೆಪಿ ಸರಕಾರ ಮಾಡಿದೆ. ರೈತರ, ನೇಕಾರರ, ಬಡವರ, ಹಿಂದುಳಿದವರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆ ಅನುಷ್ಠಾನಗೊಳಿಸಿದೆ. ಹಲವು ಮಹತ್ವಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ಭದ್ರತೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ದೇಶದ ಪ್ರತಿಯೊಬ್ಬ ಮತದಾರರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಬರುವ ಚುನಾವಣೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಮತಕ್ಷೇತ್ರದ ಅಧ್ಯಕ್ಷ ಸುರೇಶ ಅಕ್ಕಿವಾಟ, ಯುವಮೋರ್ಚಾ ಅಧ್ಯಕ್ಷ ಲಕ್ಕಪ್ಪ ಪಾಟೀಲ, ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಅಲ್ಲಪ್ಪ ಬಾಬಗೊಂಡ, ಆನಂದ ಕಂಪು, ಪ್ರವೀಣ ತುಬಚಿ, ಆಕಾಶ ತೇಲಿ, ಬಸಪ್ಪ ಮುಕರಿ, ಸುರೇಶ ರೇಣಕೆ, ದಶರಥ ಅಕ್ಕೆನ್ನವರ ಪಾಲ್ಗೊಂಡಿದ್ದರು.