Advertisement
ಜಿಲ್ಲಾ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕೊರೊನಾ ರಕ್ಷಣೆಗಾಗಿ ಮಾಸ್ಕ್ ಧರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ. ಕೊರೊನಾ ವೈರಸ್ ಭೀತಿಯ ನಡುವೆಯೂ ಮರಾಠಿ ಸಮುದಾಯ, ಮಣಿಪಾಲ ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಕಡೆಗಳಲ್ಲಿ ಬಣ್ಣ ಹಂಚಿಕೊಂಡು ಹೋಳಿ ಆಚರಿಸಿದರು. ಕೊರೊನಾ ಭೀತಿಯಿಂದ ಅದ್ದೂರಿ ಆಚರಣೆಗೆ ಕೆಲವೆಡೆ ಪೊಲೀಸರು ಅವಕಾಶ ನೀಡಲಿಲ್ಲ.
ಕಾರ್ಕಳದ ಪಳ್ಳಿ ಗ್ರಾಮದಲ್ಲಿ ನಡೆದ ತುಳು ಯಕ್ಷಗಾನದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಸಿಹಿತ್ಲು ಮೇಳದ ಯಕ್ಷಗಾನದಲ್ಲಿ ಹಾಸ್ಯ ಪಾತ್ರಧಾರಿ ಪ್ರಸನ್ನ ಶೆಟ್ಟಿ ಬೈಲೂರು ಅವರು ಕೊರೊನಾ ಬಗ್ಗೆ ಚರ್ಚೆ ನಡೆಸಿ ಗಮನ ಸೆಳೆದರು. ಯಕ್ಷಗಾನದಲ್ಲಿ ಆಂಗ್ಲ ಭಾಷೆ ಬಳಕೆಗೆ ಅವಕಾಶ ಇಲ್ಲದ ಕಾರಣ “ಕೊರಂಬು ಬೈರಸ್’ ಎಂದು ಹೇಳುವ ಮೂಲಕ ಪ್ರೇಕ್ಷಕರನ್ನು ನಗಿಸುವ ಜತೆಗೆ ಜಾಗೃತಿ ಮೂಡಿಸಿದರು.