ಗದಗ: ಮುದ್ರಣ ಕ್ಷೇತ್ರದ ಕಾಶಿ ಎಂದೇ ಖ್ಯಾತಿ ಪಡೆದ ಗದಗ-ಬೆಟಗೇರಿ ಅವಳಿ ನಗರದಲ್ಲಿ 2025ರ ಪಂಚಾಂಗ, ಕ್ಯಾಲೆಂಡರ್, ಡಿಕ್ಷನರಿ ಮುದ್ರಣ ಜತೆಗೆ ಮಾರಾಟವೂ ಭರದಿಂದ ಸಾಗಿದೆ. ಮುದ್ರಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಪಿ.ಸಿ. ಶಾಬಾದಿಮಠ ಆಫ್ಸೆಟ್ ಪ್ರಿಂಟರ್ಸ್, ಎಂ.ಎಸ್. ಶಾಬಾದಿಮಠ ಆಫ್ಸೆಟ್ ಪ್ರಿಂಟರ್ಸ್, ಸಂಕೇಶ್ವರ ಪ್ರಿಂಟರ್ಸ್ ಪ್ರೈ ಲಿ. ಸಂಸ್ಥೆ, ವಿದ್ಯಾನಿಧಿ ಪ್ರಕಾಶನ ಸೇರಿ 70ಕ್ಕೂ ಹೆಚ್ಚು ಮುದ್ರಣ ಸಂಸ್ಥೆಗಳು ನವನವೀನ ಪಂಚಾಂಗ, ಪಾಕೆಟ್ ಕ್ಯಾಲೆಂಡರ್, ಮಿನಿ
ಪಂಚಾಂಗ ಮುದ್ರಿಸುತ್ತ ಹೆಸರುವಾಸಿಗಿದ್ದು, ಗ್ರಾಹಕರಿಂದ ಸೈ ಎನಿಸಿವೆ.
Advertisement
ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ ಸೇರಿ ರಾಜ್ಯಾದ್ಯಂತ ಹಾಗೂ ಪಕ್ಕದ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಭಾಗಗಳಲ್ಲಿ ಕ್ಯಾಲೆಂಡರ್, ತೂಗು ಪಂಚಾಂಗಗಳು ಮಾರಾಟವಾಗುತ್ತಿವೆ.
Related Articles
Advertisement
ತಗ್ಗಿದ ಮುದ್ರಣಗಳ ಸಂಖ್ಯೆ: ಪ್ರತಿಯೊಂದು ಮುದ್ರಣ ಸಂಸ್ಥೆಗಳಲ್ಲಿ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕ್ಯಾಲೆಂಡರ್, ಪಂಚಾಂಗ ಮುದ್ರಣ ಕಾರ್ಯ ಹಗಲಿರುಳು ನಡೆಯುತ್ತಿದೆ. ತಲಾ ಒಂದೊಂದು ಸಂಸ್ಥೆಗಳು ಪ್ರತಿ ವರ್ಷ 8ರಿಂದ 10 ಲಕ್ಷ ಪಂಚಾಂಗಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದವು. ಕೋವಿಡ್ ನಂತರದ ವರ್ಷಗಳಲ್ಲಿ ಪ್ರತಿ ಸಂಸ್ಥೆಗಳಲ್ಲಿ ಅಂದಾಜು 2 ಲಕ್ಷ ಪ್ರತಿಗಳ ಸಂಖ್ಯೆ ಕ್ಷೀಣಿಸಿದೆ.
ಕ್ಷೀಣಿಸಿದ ಮುದ್ರಕರ ಸಂಖ್ಯೆ: ಕಳೆದ ಎರಡು ದಶಕಗಳ ಹಿಂದೆ 140ಕ್ಕೂ ಹೆಚ್ಚು ಮುದ್ರಣ ಸಂಸ್ಥೆಗಳು ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ತದನಂತರ ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನ ಆಗಮಿಸಿದ್ದರಿಂದ ಕೆಲ ಮುದ್ರಣ ಸಂಸ್ಥೆಗಳು ಬಂದ್ ಆಗಿ ಸದು 70 ಮುದ್ರಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.
ಗದಗ-ಬೆಟಗೇರಿಯ ಜರ್ಮನ್ ಪಾದ್ರಿಗಳ ಸಮೂಹದಲ್ಲಿ ಒಬ್ಬರಾಗಿದ್ದ ಸ್ಯಾಮುವೆಲ್ ಎಂಬುವರು ಗದಗಿನಲ್ಲಿ ಮೊದಲುಮುದ್ರಣಾಲಯ ಆರಂಭಿಸಿದರು. ನಂತರ 1900ರಲ್ಲಿ ಶಂಕರನಾರಾಯಣ ಮುದ್ರಣಾಲಯ, 1919ರಲ್ಲಿ ಎಂ.ಎಸ್. ಮಡಿವಾಳಪ್ಪನವರು ಶಂಕರ ಪ್ರಿಂಟಿಂಗ್ ಪ್ರೆಸ್ ಎಂಬ ಹೆಸರಿನಲ್ಲಿ ಮುದ್ರಣಾಲಯ ಸ್ಥಾಪಿಸಿದರು. ಹೀಗೆ ಮುಂದುವರಿಯುತ್ತ
ಗದಗ ಮುದ್ರಣ ಕಾಶೀ ಎಂದೇ ಪ್ರಖ್ಯಾತಿ ಪಡೆಯಿತು. 1921ರಲ್ಲಿ ಆರಂಭವಾದ ಪಿ.ಸಿ. ಶಾಬಾದಿಮಠ ಆಫ್ಸೆಟ್ ಪ್ರಿಂಟರ್ಸ್ ಶತಕ ಬಾರಿಸಿ ನಾಲ್ಕು ವರ್ಷಗಳು ಕಳೆದಿವೆ. ನಮ್ಮಲ್ಲಿ ಮುದ್ರಿಸಲಾದ ಜಗಜ್ಯೋತಿ ಬಸವೇಶ್ವರ, ಜಯಲಕ್ಷ್ಮಿ ತೂಗು ಪಂಚಾಂಗಗಳು ರಾಜ್ಯಾದ್ಯಂತ ಹೆಸರಾಗಿವೆ. ಕಳೆದ 101 ವರ್ಷಗಳಿಂದ ಯಾವುದೇ ಲೋಪ ಇಲ್ಲದೇ ಅಚ್ಚುಕಟ್ಟುತನ ಜತೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪಂಚಾಂಗ ಮತ್ತು ಕ್ಯಾಲೆಂಡರ್ಗಳನ್ನು ತಯಾರಿಸಲಾಗುತ್ತಿದೆ.
*ಮೃತ್ಯುಂಜಯ ಹಿರೇಮಠ, ಪಿ.ಸಿ. ಶಾಬಾದಿಮಠ
ಆಫ್ಸೆಟ್ ಪ್ರಿಂಟರ್ಸ್ ವ್ಯವಸ್ಥಾಪಕ *ಅರುಣಕುಮಾರ ಹಿರೇಮಠ