Advertisement

ಲಕ್ನೋ: ಗೋದಾಮಿನಿಂದ 17 ಲಕ್ಷ ರೂ. ಮೌಲ್ಯದ ಚಾಕೋಲೇಟ್‌ ಕದ್ದ ಖದೀಮರು!

09:32 PM Aug 17, 2022 | Team Udayavani |

ಲಕ್ನೋ: ಚಿನ್ನಾಭರಣ ಕಳ್ಳತನವಾಗುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಲಕ್ನೋದಲ್ಲಿ 17 ಲಕ್ಷ ರೂ. ಮೌಲ್ಯದ ಕ್ಯಾಡ್‌ಬೆರಿ ಚಾಕೋಲೇಟ್‌ ಅನ್ನೇ ಕಳ್ಳರು ಕದ್ದಿದ್ದಾರೆ!.

Advertisement

ಚಿನ್ಹಾಟ್‌ ಪ್ರದೇಶದಲ್ಲಿ ಮನೆಯೊಂದನ್ನು ಚಾಕೋಲೇಟ್‌ ಶೇಖರಿಸಿ ಇರಿಸಲು ಬಳಕೆ ಮಾಡಲಾಗುತ್ತಿತ್ತು.

ಕಳ್ಳರು ಸೋಮವಾರ ರಾತ್ರಿ ಅಲ್ಲಿಗೆ ನುಗ್ಗಿ  ಚಾಕೋಲೇಟ್‌ ಕದ್ದಿದ್ದಾರೆ. ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿದ ನೆರೆ ಮನೆಯವರು ಮಾರನೇ ದಿನ ಬೆಳಗ್ಗೆ ಈ ವಿಚಾರವನ್ನು ಆ ಮನೆಯ ಮಾಲೀಕರಿಗೆ ತಿಳಿಸಿದ್ದಾರೆ.

ಮನೆಯಲ್ಲಿದ್ದ ಸಿಸಿಟಿವಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಸಾಧನಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next