Advertisement

650 ಬಸ್‌ಗಳ ಖರೀದಿಗೆ ಸಂಪುಟ ಅಸ್ತು : ತೇಲ್ಕೂರ

01:45 PM Aug 14, 2022 | Team Udayavani |

ಕಲಬುರಗಿ: ಬಹು ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಕ್ಕೆ 650 ಬಸ್‌ ಗಳ ಖರೀದಿಗೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕ ಭಾಗದ ಮೇಲೆ ಹೊಂದಿರುವ ಅಭಿವೃದ್ಧಿ ಕಾಳಜಿಗೆ ಹಿಡಿದ ಕನ್ನಡಿ ಎಂದು ಕೆಕೆಆರ್‌ಟಿಸಿ ಅಧ್ಯಕ್ಷರಾಗಿರುವ          ತಿಳಿಸಿದ್ದಾರೆ.

Advertisement

ಮುಖ್ಯಮಂತ್ರಿ ಬೊಮ್ಮಾಯಿ, ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಸಾರಿಗೆ ಸಚಿವ ಶ್ರೀ ರಾಮುಲು ಅವರಿಗೆ ಅಭಿನಂದನೆ ಸಲ್ಲಿಸಿರುವ ತೇಲ್ಕೂರ, ಸರ್ಕಾರದ ನಿರ್ಧಾರ ಸಂಸ್ಥೆ ಬಲವರ್ಧನೆಗೆ ಪೂರಕವಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ನ‌ ತೀವ್ರ ನಷ್ಟದಿಂದ ಹೊರಗೆ ಬರಲು ಸಂಸ್ಥೆ ಹಲವಾರು ನಿಟ್ಟಿನಲ್ಲಿ ಹೊಸ ಕಾರ್ಯಕ್ಕೆ ಮುಂದಾಗಿದ್ದು, ಅದರಲ್ಲಿ ಹೊಸ ಬಸ್‌ಗಳ ಖರೀದಿ ಪ್ರಮುಖವಾಗಿದೆ. ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 650 ಬಸ್‌ಗಳನ್ನು 199.40ಕೋಟಿ ರೂ. ವೆಚ್ಚದಲ್ಲಿ ಬಸ್‌ ಖರೀದಿಗೆ ಅಸ್ತು ನೀಡಿ ಹಣ ಬಿಡುಗಡೆಗೆ ಕ್ರಮ ಕೈಗೊಂಡಿರುವುದು ಐತಿಹಾಸಿಕವಾಗಿದೆ ಎಂದಿದ್ದಾರೆ. 650 ಹೊಸ ಬಸ್‌ ಗಳು ಸಂಸ್ಥೆಗೆ ಸೇರ್ಪಡೆಯಾದ ನಂತರ ಸಂಸ್ಥೆ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಪ್ರಮುಖವಾಗಿ ಸಾರ್ವಜನಿಕವಾಗಿ ಸಾರಿಗೆ ಸೇವೆ ಸುಧಾರಣೆಗೆ ಕ್ರಮ ಕೈಗೊಳ್ಳಲು ಪೂರಕವಾಗುತ್ತದೆ. ಅದಲ್ಲದೇ ಇನ್ನೂ ಸಾರಿಗೆ ಸೇವೆ ಕಾಣದ ಹಳ್ಳಿಗಳಿಗೆ ಸಾರಿಗೆ ಸಂಚಾರದ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತೇಲ್ಕೂರ ಹೇಳಿಕೆಯಲ್ಲಿ ವಿವರಿಸಿದ್ದಾರೆ.

650ಹೊಸ ಬಸ್‌ ಗಳ ಜತೆಗೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚಾಲಕ ಕಂ ನಿರ್ವಾಹಕ ಹುದ್ದೆಗಳು ಭರ್ತಿಯಾದಲ್ಲಿ ಸಂಸ್ಥೆ ಕಾಯಕಲ್ಪಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. 1619 ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಈಗಾಗಲೇ ದೃಢ ಹೆಜ್ಜೆ ಇಡಲಾಗಿದ್ದು, ಪ್ರಸಕ್ತ ಆಗಸ್ಟ್‌ ಅಂತ್ಯದೊಳಗೆ ಅರ್ಜಿಗಳ ಪ್ರಗತಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ ಮುಂದಿನ ನಾಲ್ಕೈದು ತಿಂಗಳೊಳಗೆ 1619 ಚಾಲಕ ಕಂ ನಿರ್ವಾಹಕರು ಸೇವೆಗೆ ಸೇರಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ್‌ ತೇಲ್ಕೂರ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next