ಬೆಂಗಳೂರು: ಸಂಪುಟದಲ್ಲಿ ಖಾಲಿ ಇರುವ 3 ಸ್ಥಾನಗಳನ್ನು ಭರ್ತಿ ಮಾಡುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಲೆಕ್ಕಾಚಾರ ಹೊಂದಾಣಿಕೆ ಯಾಗದ ಹಿನ್ನೆಲೆಯಲ್ಲಿ ಇನ್ನೂ ಗೊಂದಲ ಮುಂದುವರಿದಿದೆ. ಮೂರು ಸ್ಥಾನಗಳನ್ನು ಭರ್ತಿ ಮಾಡುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೀಡಿದ್ದ ಪಟ್ಟಿಗೆ ಹೈಕಮಾಂಡ್ ಬಹುತೇಕ ಒಪ್ಪಿಗೆ ನೀಡಿತ್ತು ಎಂದು ಹೇಳಲಾಗಿತ್ತು.
ಎಡ-ಬಲದ ಗೊಂದಲ ನಿವಾರಣೆಯಾಗಿ ಈಗ ಸಿಎಂ ತಮ್ಮ ಪರಮಾಪ್ತ ಸಿ.ಎಂ. ಇಬ್ರಾಹಿಂರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳಲು ಕಸರತ್ತು ನಡೆಸಿದ್ದಾರೆನ್ನಲಾಗಿದೆ. ಅದಕ್ಕಾಗಿ ಲಿಂಗಾಯತರಿಗಿದ್ದ ಅವಕಾಶ ತಪ್ಪಿಸಲು ಕಾರ್ಯತಂತ್ರ ಹೆಣೆದಿದ್ದು, ಅದಕ್ಕೆ ಆಪ್ತ ಸಚಿವರಿಂದಲೇ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
ಹೈಕಮಾಂಡ್ ಮುಂದೆ ನೀಡಿರುವ ಪಟ್ಟಿಯ ಪ್ರಕಾರ ಕುರುಬ ಸಮುದಾಯದ ಎಚ್.ಎಂ. ರೇವಣ್ಣ, ದಲಿತ ಸಮುದಾಯದ ಆರ್.ಬಿ. ತಿಮ್ಮಾಪುರ ಅಥವಾ ನರೇಂದ್ರ ಸ್ವಾಮಿ ಹಾಗೂ ಲಿಂಗಾಯತ ಸಮು ದಾಯದ ಷಡಕ್ಷರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಹೈಕ ಮಾಂಡ್‌ನಿಂದ ಒಪ್ಪಿಗೆ ಪಡೆದುಕೊಂಡಿದ್ದರು. ಎಡ- ಬಲದ ಗೊಂದಲ ನಿವಾರಿಸಿ ದಲಿತ ಸಮುದಾಯದ ಎಡ ಪಂಗಡಕ್ಕೆ ಸೇರಿರುವ ಆರ್.ಬಿ. ತಿಮ್ಮಾಪುರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ತೀರ್ಮಾನಿಸಿದ್ದು, ಈಗ ಲಿಂಗಾಯತ ಸಮುದಾಯದ ಷಡಕ್ಷರಿ ಅವರಿಗೆ ಕೈ ತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಿ.ಎಂ. ಇಬ್ರಾಹಿಂಗೆ ಸ್ಥಾನ ಕಲ್ಪಿಸಲು ಲಿಂಗಾಯತ ಶಾಸಕರಿಗೆ ಸ್ಥಾನ ತಪ್ಪಿಸುತ್ತಿರುವ ಬಗ್ಗೆ ಲಿಂಗಾಯತ ಸಚಿವರು ವಿರೋಧ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಇರುವುದರಿಂದ ಸಂಪುಟ ವಿಸ್ತರಣೆ ಮುಂದೂಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದುವರೆಗೂ ಯಾವ ಸಮುದಾಯದಿಂದ ಸಚಿವ ಸ್ಥಾನ ಖಾಲಿಯಾಗಿದೆ ಅದೇ ಸಮುದಾ ಯದವ ರಿಗೆ ಸಚಿವ ಸ್ಥಾನ ನೀಡುವು ದಾಗಿ ಹೇಳಿಕೊಂಡು ಬಂದಿದ್ದ ಸಿಎಂ ಸಿದ್ದರಾಮಯ್ಯ, ಈಗ ತಮ್ಮ ಆಪ್ತ ಇಬ್ರಾಹಿಂಗಾಗಿ ಷಡಕ್ಷರಿಗೆ ತಪ್ಪಿ ಸುತ್ತಿರುವುದು ಲಿಂಗಾಯತ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.
ಚುನಾವಣೆ ವರ್ಷದಲ್ಲಿ ಲಿಂಗಾಯತ ರಿಗೆ ಸಚಿವ ಸ್ಥಾನ ತಪ್ಪಿಸಿದರೆ, ಅದೆ ದೊಡ್ಡ ವಿಷಯವಾಗಿ ಲಿಂಗಾಯತ ಸಮುದಾಯದ ಮುನಿಸಿಗೆ ಕಾರಣವಾ ಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಸಿ.ಎಂ. ಇಬ್ರಾಹಿಂಗೆ ಸ್ಥಾನ ಕಲ್ಪಿಸಲು ಕುರುಬ ಸಮುದಾಯದ ಎಚ್.ಎಂ. ರೇವಣ್ಣ ಅವರನ್ನು ಕೈ ಬಿಡುವ ಆಲೋಚನೆಯನ್ನೂ ಮುಖ್ಯಮಂತ್ರಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈಗಾಗಲೇ ಎಚ್. ವಿಶ್ವನಾಥ ಪಕ್ಷದಿಂದ ಹೊರ ಹೋಗಿರುವುದರಿಂದ ಎಚ್.ಎಂ. ರೇವಣ್ಣಗೆ ಭರವಸೆ ನೀಡಿದಂತೆ ಸಚಿವ ಸ್ಥಾನ ನೀಡದಿದ್ದರೆ, ಕುರುಬ ಸಮುದಾಯದ ಮುನಿಸಿಗೆ ಕಾರಣವಾಗುವ ಆತಂಕ ಇರು ವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಿಗೆ ಸ್ಥಾನ ಕಲ್ಪಿಸಲು ಸಂಪುಟ ವಿಸ್ತರಣೆ ಮುಂದೂಡುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ.