Advertisement

ಸಂಪುಟ ವಿಸ್ತರಣೆ: ಸಿಎಂ ಪರಮಾಧಿಕಾರ- ಪಾಟೀಲ

11:01 PM Jan 12, 2020 | Team Udayavani |

ವಿಜಯಪುರ: ಸಂಪುಟ ವಿಸ್ತರಣೆ ಬಗ್ಗೆ ಸಿಎಂಗೆ ಪರಮಾಧಿ ಕಾರವಿದ್ದು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಈ ಕುರಿತು ಕ್ರಮ ಕೈಗೊಳ್ಳುತ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಸಚಿವ ಸ್ಥಾನಕ್ಕಾಗಿ ಸ್ವಾಮೀಜಿ ಆಗ್ರಹಿಸಿರುವುದು, ಸಮಾಜದ ಗುರುಗಳಾಗಿ ಬೇಡಿಕೆ ಸಲ್ಲಿಸುವುದು ಸಹಜ. ಈ ವಿಷಯ ದಲ್ಲಿ ನಾನೇನೂ ಹೇಳುವುದಿಲ್ಲ.

Advertisement

ಎಲ್ಲರಿಗೂ ಸಚಿವರಾಗ ಬೇಕು ಅನ್ನೋ ಆಸೆ ಇರುತ್ತದೆ. ಆದರೆ ಸಚಿವರನ್ನಾಗಿ ಮಾಡೋದು ಬಿಡೋದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೆ ಬಿಟ್ಟದ್ದು ಎಂದರು. ವಿಜಯಪುರ ಜಿಲ್ಲಾ ಬಿಜೆಪಿ ಬಣ ರಾಜಕೀಯ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಎಲ್ಲರೂ ಸ್ನೇಹಿತರೇ, ಕಾಂಗ್ರೆಸ್‌ ಪಕ್ಷದ ಶಾಸಕರು ಸಹ ನನಗೆ ಸ್ನೇಹಿತರಿದ್ದಾರೆ. ಮುಖ್ಯಮಂತ್ರಿಗಳು ಜ.16ರಂದು ವಿಜಯಪುರಕ್ಕೆ ಬರುತ್ತಿರುವ ಕಾರಣ ಅಧಿಕಾರಿಗಳ ಜತೆ ಸಭೆ ಮಾಡಿ ಸಿದ್ಧತೆಗಳ ಪರಿಶೀಲನೆ ಮಾಡುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next