Advertisement

ಹೊರೆ ಇಳಿಕೆಗೆ ಹೊಂಬೆಳಕು

12:00 AM Sep 17, 2021 | Team Udayavani |

ಹೊಸದಿಲ್ಲಿ: ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗೆ ತಲೆನೋವಾಗಿರುವ ಅನುತ್ಪಾದಕ ಆಸ್ತಿ ನಿಯಂತ್ರಿಸಲು ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಬುಧವಾರ ನಡೆದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ನೀಡಲಾಗಿದ್ದರೂ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಅದರ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

Advertisement

ರಾಷ್ಟ್ರೀಯ ಆಸ್ತಿ ಪುನರ್‌ಚನೆ ಕಂಪೆನಿ (ಎನ್‌ಎ ಆರ್‌ಸಿಎಲ್‌) ಅಥವಾ ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖೀಸಲಾಗಿತ್ತು. ಅದರ ರಚನೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ ಹಣಕಾಸು ಸಚಿವೆ. ಎನ್‌ಎಆರ್‌ಸಿಎಲ್‌ ಬ್ಯಾಂಕ್‌ಗಳಲ್ಲಿರುವ ವಸೂ ಲಾಗದ ಸಾಲಗಳಿಗೆ ಸಂಬಂಧಿಸಿದಂತೆ 30,600 ಕೋಟಿ ರೂ. ಮೊತ್ತವನ್ನು (ಶೇ.15) ಪಾವತಿ ಮಾಡಲಿದೆ. ಉಳಿದ ಶೇ.85 ಭಾಗವನ್ನು ಸರಕಾರಿ ಬಾಂಡ್‌ಗಳ ಮೂಲಕ ಪಾವತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ನಿರ್ಮಲಾ ಸೀತಾರಾಮನ್‌.

90 ಸಾವಿರ ಕೋಟಿ ರೂ.: ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗೆ ಸಮಸ್ಯೆ ಮತ್ತು ಸವಾಲಾಗಿ ಉಳಿದಿರುವ 2 ಟ್ರಿಲಿಯನ್‌ ಅನುತ್ಪಾದಕ ಆಸ್ತಿಯಾಗಿ ಪರಿವರ್ತನೆ­ಯಾಗಿರುವ ಸಾಲಗಳನ್ನು ಸ್ವೀಕರಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ 30,600 ಕೋಟಿ ರೂ.ಗಳನ್ನು ಮೊದಲ ಹಂತದಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಮೊದಲ ಹಂತದಲ್ಲಿ 90 ಸಾವಿರ ಕೋಟಿ ರೂ. ಮೌಲ್ಯದ ಸಾಲದ ಮೊತ್ತವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಬ್ಯಾಂಕ್‌ಗಳು ತಮಗೆ ಹೊರೆಯಾಗಿರುವ ವಸೂಲಾಗದೇ ಇರುವ ಸಾಲಗಳನ್ನು ಆಸ್ತಿ ಪುನರ್‌ ರಚನಾ ಕಂಪೆನಿಗಳಿಗೆ (ಎಆರ್‌ಸಿ) ಹಸ್ತಾಂತರಿಸಲಿವೆ ಎಂದರು. ಇದರ ಜತೆಗೆ ಅನುತ್ಪಾದಕ ಆಸ್ತಿ ನಿರ್ವಹಿಸಲು ಭಾರತದ ಸಾಲ ಪರಿಹಾರ ಕಂಪೆನಿ ಲಿ. ಅನ್ನೂ ಸ್ಥಾಪಿಸಲಾಗುತ್ತದೆ ಎಂದರು.

4 ಆರ್‌ ಸೂತ್ರ: ಸಮಸ್ಯೆ ಪರಿಹಾರಕ್ಕಾಗಿ ಗುರುತಿಸು­ವಿಕೆ (ರೆಕಗ್ನಿಷನ್‌), ಸಂಕಲ್ಪ (ರೆಸೊಲ್ಯೂಷನ್‌), ರಿ ಕ್ಯಾಪಿ­ಟ­ಲೈಸೇಷನ್‌ (ಮತ್ತೂಮ್ಮೆ ಬಂಡವಾಳ ಹೂಡಿಕೆ) ಮತ್ತು ಸುಧಾರಣೆ (ರಿಫಾಮ್ಸ್‌ì) ಎಂಬ ಸೂತ್ರಗಳನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌. ಐದು ವರ್ಷಗಳ ಅವಧಿಯಲ್ಲಿ 5.01 ಲಕ್ಷ ಕೋಟಿ ರೂ. ಮೊತ್ತವನ್ನು ವಸೂಲು ಮಾಡಿದ್ದೇವೆ ಎಂದರು. ಈ ಪೈಕಿ 3.1 ಲಕ್ಷ ಕೋಟಿ ರೂ.ಮೊತ್ತವನ್ನು 2018ರ ಮಾರ್ಚ್‌ನಿಂದ ಈಚೆಗೆ ಪಡೆದುಕೊಂಡಿದ್ದೇವೆ ಎಂದಿದ್ದಾರೆ.

Advertisement

ರಚನೆ ಹೇಗೆ?:

ಕಂಪೆನಿಗಳ ಕಾಯ್ದೆಯ ಅನ್ವಯ ಎನ್‌ಎಆರ್‌ಸಿಎಲ್‌ ಅನ್ನು ಸ್ಥಾಪಿಸಲಾಗಿದೆ ಮತ್ತು ಈಗಾಗಲೇ ಅದರ ಕಾರ್ಯಾ­ರಂಭಕ್ಕೆ ಪರವಾನಿಗೆ ನೀಡುವಂತೆ ಆರ್‌ಬಿಐಗೆ ಅರ್ಜಿ ಸಲ್ಲಿಸಲಾಗಿದೆ. ಆಸ್ತಿ ಪುನರ್‌ ರಚನ ಕಂಪೆನಿ ಎಂಬ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ಕೋರಲಾಗಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹೊಸ ಸಂಸ್ಥೆಯ ಶೇ.51ರಷ್ಟು ಮಾಲಕತ್ವವನ್ನು ಹೊಂದಿವೆ.

ಬ್ಯಾಡ್‌ ಬ್ಯಾಂಕ್‌?:

ಬ್ಯಾಂಕ್‌ಗಳು ಮತ್ತು ವಿತ್ತೀಯ ಸಂಸ್ಥೆಗಳಲ್ಲಿರುವ ವಸೂಲಾಗದ ಸಾಲಗಳನ್ನು ಹೊಸ ಸಂಸ್ಥೆ ಖರೀದಿಸುತ್ತದೆ. ಈ ಮೂಲಕ ಅವುಗಳ ಬ್ಯಾಲೆನ್ಸ್‌ ಶೀಟ್‌ ಅನ್ನು ಕ್ರಮಬದ್ಧಗೊಳಿಸಲು ನೆರವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಎನ್‌ಪಿಎ ಹೊಂದಿರುವ ಬ್ಯಾಂಕ್‌ಗಳೇ ಅದರ ಮಾಲಕತ್ವ ಹೊಂದಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next