Advertisement

ಹಸಿರು ಮಿಷನ್‌ಗೆ ಸಂಪುಟ ಒಪ್ಪಿಗೆ

09:12 PM Jan 04, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಇಂಗಾಲದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ರಾಷ್ಟ್ರೀಯ ಹಸಿರು ಜಲಜನಕ ಮಿಷನ್‌ಗೆ ಒಪ್ಪಿಗೆ ನೀಡಿದೆ.

Advertisement

ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ  ಜರಗಿದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಾಗಿ 19,744 ಕೋಟಿ ರೂ. ನೀಡಲು ಒಪ್ಪಿಗೆ ನೀಡಲಾಗಿದೆ.

ಕ್ಯಾಬಿನೆಟ್‌ ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಭಾರತವನ್ನು ಗ್ರೀನ್‌ ಎನರ್ಜಿಯ ಉತ್ಪಾದನಾ ಹಬ್‌ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಈ ಹಣದಲ್ಲಿ ಹಸಿರು ಜಲಜನಕ ಪರಿವರ್ತನೆ ಕಾರ್ಯಕ್ರಮಕ್ಕಾಗಿ ಕಾರ್ಯತಂತ್ರಾತ್ಮಕ ಮಧ್ಯಸ್ಥಿಕೆ(ಎಸ್‌ಐಜಿಎಚ್‌ಟಿ)ಗಾಗಿ 17,490 ಕೋಟಿ ರೂ., ಪ್ರಯೋಗಾತ್ಮಕ ಯೋಜನೆಗಾಗಿ 1,466 ಕೋಟಿ ರೂ., ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 400 ಕೋಟಿ ರೂ. ಮತ್ತು ಯೋಜನೆಯ ಇತರ ವೆಚ್ಚಗಳಾಗಿ 388 ಕೋಟಿ ರೂ.ಗಳನ್ನು ವಿನಿಯೋಗಿಸಲು ನಿರ್ಧರಿಸಲಾಗಿದೆ. ಕೇಂದ್ರ ನವ ಮತ್ತು ಪುನರ್ಬಳಕೆ ಶಕ್ತಿ ಸಚಿವಾಲಯವು ಯೋಜನೆಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಿದೆ ಎಂದು ಠಾಕೂರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next