Advertisement

ಐಟಿಬಿಪಿಗೆ ಹೆಚ್ಚಿನ ಸಿಬಂದಿ: ಕೇಂದ್ರ ಸಂಪುಟ ನಿರ್ಣಯ

09:37 AM Oct 24, 2019 | Hari Prasad |

ಹೊಸದಿಲ್ಲಿ: ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಗೆ
(ಐಟಿಬಿಪಿ) ಹೆಚ್ಚಿನ ಸಿಬಂದಿ ನಿಯೋ ಜನೆ, ಚೀನಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಅವರನ್ನು ನಿಯೋಜನೆ ಮಾಡುವ ಉದ್ದೇಶದಿಂದ 2 ಹೊಸ ಘಟಕ ಸ್ಥಾಪನೆಗಳ ನಿಟ್ಟಿನಲ್ಲಿ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.

Advertisement

ಸಂಪುಟ ಸಭೆಯ ಬಳಿಕ ಮಾತನಾಡಿದ ಕೇಂದ್ರ ಅರಣ್ಯ ಸಚಿವ ಪ್ರಕಾಶ್‌ ಜಾವಡೇಕರ್‌ 2001ರ ಬಳಿಕ ಇದೇ ಮೊದಲ ಬಾರಿಗೆ ಸಿಬಂದಿ ಪರಿಷ್ಕರಣೆ ಮಾಡುವ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ. ಗ್ರೂಪ್‌ ಎ ಸಾಮಾನ್ಯ ಕರ್ತವ್ಯ ವಿಭಾಗದಲ್ಲಿ ಸಿಬಂದಿ ಸಂಖ್ಯೆ ಹೆಚ್ಚು ಮಾಡುವ ನಿರ್ಧಾರದಿಂದಾಗಿ 3 ಸಾವಿರ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ.

ಚೀನಕ್ಕೆ ಹೊಂದಿಕೊಂಡು ಇರುವ 3, 488 ಕಿಮೀ ದೂರದ ಗಡಿ ಪ್ರದೇಶದಲ್ಲಿ ಕಾವಲು ಮತ್ತು ಭದ್ರತೆ ನೀಡುವ ನಿಟ್ಟಿನಲ್ಲಿ 2 ಹೆಚ್ಚುವರಿ ಘಟಕಗಳನ್ನು ತೆರೆಯಲು ನಿರ್ಧರಿಸಲಾಗಿದೆ.  ಚಂಡೀಗಢ ಮತ್ತು ಗುವಾಹಟಿಯಲ್ಲಿ ಅವುಗಳ ಕೇಂದ್ರ ಕಚೇರಿ ಇರಲಿದೆ. ಒಂದೂವರೆ ವರ್ಷಗಳಿಂದ ಈ ಪ್ರಸ್ತಾವ ಅನುಮೋದನೆಗಾಗಿ ಕೇಂದ್ರ ಸಂಪುಟದ ಮುಂದೆ ಇತ್ತು.

ಗೃಹ ಉಸ್ತುವಾರಿ ಬೇಡ: ಅಸ್ಸಾಂ ರೈಫ‌ಲ್ಸ್‌ ಅತೃಪ್ತಿ
185 ವರ್ಷಗಳಷ್ಟು ಇತಿಹಾಸ ಹೊಂದಿರುವ ಅರೆಸೇನಾ ಪಡೆಯಾದ ಅಸ್ಸಾಂ ರೈಫ‌ಲ್ಸ್‌ ಅನ್ನು ಕೇಂದ್ರ ಗೃಹ ಇಲಾಖೆಯ ಸುಪರ್ದಿಗೆ ತರಲು ನಡೆಸಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಆ ಪಡೆಯ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ರೈಫ‌ಲ್ಸ್‌, ಈಗಿರುವಂತೆ ಭಾರತೀಯ ಸೇನೆಯ ಅಧೀನದಲ್ಲೇ ಮುಂದುವರಿಯಬೇಕು. ಹಾಗೊಂದು ವೇಳೆ ಈ ಪಡೆಯನ್ನು ಗೃಹ ಇಲಾಖೆಯ ವ್ಯಾಪ್ತಿಗೆ ತಂದರೆ, ಭಾರತ-ಚೀನ ಗಡಿಯಲ್ಲಿ ಆ ಪಡೆ ನಿರ್ವಹಿಸುತ್ತಿರುವ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ವಿಚಾರವನ್ನು ಮುಂದಿನವಾರ ಗೃಹ ಇಲಾಖೆಗೆ ಮನವಿ ಮಾಡಿಕೊಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next