Advertisement

ಗ್ರಾಹಕರಿಗೆ ವಿಧಿಸುವ ದರ ಪಟ್ಟಿ ವಿವರ ಕೊಡಿ: ಕೇಂದ್ರ ಸರಕಾರ

01:25 AM May 03, 2022 | Team Udayavani |

ಹೊಸದಿಲ್ಲಿ: ಕ್ಯಾಬ್‌ ಸೇವೆ ಪೂರೈಸುವ ಓಲಾ, ಉಬರ್‌, ಮೇರು ಕ್ಯಾಬ್ಸ್ ಹಾಗೂ ಜಗ್ನು ಕಂಪನಿಗಳು ಗ್ರಾಹಕರಿಗೆ ವಿಧಿಸುವ ಶುಲ್ಕಗಳ ಪಟ್ಟಿ ಹಾಗೂ ಶುಲ್ಕ ವಿಧಿಸಲು ಅನುಸರಿಸುವ ಕ್ರಮಗಳ ಪಟ್ಟಿ ಸಲ್ಲಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ಹೆಚ್ಚುವರಿ ದರ ವಿಧಿಸುವ ಬಗ್ಗೆ ಅನೇಕ ಗ್ರಾಹಕರು ದೂರು ಸಲ್ಲಿಸಿರುವುದರಿಂದ ಈ ಸಮಸ್ಯೆಗೆ ಪರಿಹಾರ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಮುಂದಿನ ವಾರ, ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್‌ ಸಿಂಗ್‌ ಅವರು, ಕ್ಯಾಬ್‌ ಸೇವೆ ನೀಡುವ ಕಂಪೆನಿಗಳ ಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಈಗಾಗಲೇ ಈ ಕಂಪೆ‌ನಿಗಳಿಗೆ ಪತ್ರ ಬರೆದಿರುವ ಸಿಂಗ್‌, ಕ್ಯಾಬ್‌ ಸಂಸ್ಥೆಗಳ ಸೇವಾ ಧೋರಣೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಈ ಸಭೆ ಮಹತ್ವದ್ದೆನಿಸಿದೆ.

ಸಭೆಯಲ್ಲಿ ಚರ್ಚೆಗೆ ಒಳಪಡುವ ವಿಚಾರ
-ನಿರ್ದಿಷ್ಟ ಜಾಗಕ್ಕೆ ಬರಲು ಚಾಲಕರು ನಿರಾಕರಿಸುವುದು.
-ಗ್ರಾಹಕರು ವಿನಂತಿಸಿದರೂ ಕ್ಯಾಬ್‌ಗಳಲ್ಲಿ ಎ.ಸಿ. ಚಾಲನೆ ಮಾಡದಿರುವುದು.
-ಪೀಕ್‌ ಅವರ್‌ಗಳಲ್ಲಿ ಬೇಕಾಬಿಟ್ಟಿ ಶುಲ್ಕ ಹೇರುವುದು
-ಎರಡು ಜಾಗಗಳ ನಡುವೆ ಪ್ರತಿನಿತ್ಯ ಸಂಚರಿಸುವ ಗ್ರಾಹಕರಿಗೆ ರಿಯಾಯಿತಿ ನೀಡುವುದು.

Advertisement

Udayavani is now on Telegram. Click here to join our channel and stay updated with the latest news.

Next