Advertisement

ಪ್ರವಾಸೋದ್ಯಮಕ್ಕೆ ಪ್ರತಿಭಟನೆ ಬಿಸಿ ಸಿಎಎ

10:10 AM Mar 02, 2020 | Team Udayavani |

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ. ಸಿಎಎ ಜಾರಿಯಾಗಿ ಎರಡು ತಿಂಗಳುಗಳು ಕಳೆದರೂ ಅದರ ಪ್ರತಿಭಟನೆಯ ಬಿಸಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈ ಹಿಂಸಾತ್ಮಕ ಪ್ರತಿಭಟನೆ ದೇಶದ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿದೆ. ಲಕ್ಷಾಂತರ ಪ್ರವಾಸಿಗರು ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿದರೆ ಕೆಲವರು ಮುಂದೂಡಿದ್ದಾರೆ. ಇಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ ಹಿನ್ನಡೆಯನ್ನು ವಿವರಿಸಲಾಗಿದೆ.

Advertisement

ಕೆಲವೆಡೆ ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಾಳಿದ್ದವು. ಕಾನೂನು ಸುವ್ಯವಸ್ಥೆಗಳು ಹದಗೆಟ್ಟಿದ್ದು ಅಸುರಕ್ಷಿತರೆಂಬ ಭಾವನೆ ಪ್ರವಾಸಿಗರಲ್ಲಿ ಮೂಡುತ್ತಿದೆ. ಇನ್ನು ಸರಕಾರಗಳು ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿದ್ದವು. ಸಂಪರ್ಕ ಸೌಲಭ್ಯಗಳು ಇಲ್ಲದೆ ಇರುವುದರಿಂದ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.

ಪೀಕ್‌ ಪಿರಿಯಡ್‌
ಭಾರತೀಯ ಪ್ರವಾಸೋದ್ಯಮದಲ್ಲಿ ಡಿಸೆಂಬರ್‌ನಿಂದ ಫೆಬ್ರವರಿ ವರೆಗಿನ ತಿಂಗಳನ್ನು “ಪೀಕ್‌ ಪಿರಿಯಡ್‌’ ಎಂದು ಕರೆಯಲಾಗುತ್ತದೆ. ಅತೀ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಪ್ರಮುಖ ಪ್ರವಾಸಿಗಳು ಇದರ ಬಿಸಿ ಎದುರಿಸಿದ್ದಾರೆ. ಇನ್ನು ಥಾಮಸ್‌ ಕುಕ್‌ನಂತಹ ಪ್ರವಾಸಿ ಏಜೆನ್ಸಿಗಳು ನೋಂದಣಿಗೊಂಡ ಸ್ಥಳಗಳ ಬದಲು ಬೇರೆ ಸ್ಥಳಗಳತ್ತ ತನ್ನ ಗ್ರಾಹಕರನ್ನು ಕರೆದೊಯ್ಯುತ್ತಿವೆ.

ಟಿಕೆಟ್‌ ಬುಕ್ಕಿಂಗ್‌ ಕ್ಯಾನ್ಸಲ್‌
ಡಿಸೆಂಬರ್‌ ತಿಂಗಳಿನಿಂದ ಮಾರ್ಚ್‌ ತನಕ ವಿಶೇಷವಾಗಿ ಈಶಾನ್ಯ ರಾಜ್ಯಗಳಿಗೆ ಪ್ರವಾಸಿಗರು ಹೆಚ್ಚು ಬರುತ್ತಾರೆ. ಈ ಪ್ರತಿಭಟನೆ ಬಿಸಿ ಆರಂಭವಾದ ಬಳಿಕ ಮುಂಗಡವಾಗಿ ಕಾಯ್ದಿರಿಸಲಾದ ಹೊಟೇಲ್‌, ರೆಸಾರ್ಟ್‌, ರೆಸ್ಟೋರೆಂಟ್‌ಗಳನ್ನು ರದ್ದುಗೊಳಿಸಲಾಗಿದೆ.

2000 ಕಾರುಗಳು
ಅಸ್ಸಾಂನ ಗುವಾಹಾಟಿಯಲ್ಲಿ ಸುಮಾರು 2 ಸಾವಿರ ಕಾರುಗಳನ್ನು ಅಲ್ಲಿನ ಪ್ರವಾಸೋದ್ಯಮದ ಜತೆ ಒಪ್ಪಂದ ವಾಗಿರಿಸಿಕೊಳ್ಳಲಾಗಿವೆ. ಆದರೆ ಇವುಗಳು ಈಗ ಈ ಹಿಂದಿನಂತೆ ಕೆಲಸ ಮಾಡುತ್ತಿಲ್ಲ. ಇದರಿಂದ ಸುಮಾರು 5ರಿಂದ 6 ಸಾವಿರ ಕುಟುಂಬಗಳು ಸಮಸ್ಯೆಗೀಡಾಗಿವೆ.

Advertisement

ತಾಜ್‌ಮಹಲ್‌
ಡಿಸೆಂಬರ್‌ ಮತ್ತು ಜನವರಿ ತಿಂಗಳಿನಲ್ಲಿ ಐತಿಹಾಸಿಕ ತಾಜ್‌ಮಹಲ್‌ ವೀಕ್ಷಿಸಲು ನೋಂದಾಯಿಸಿದ್ದ ಜನರು ತಮ್ಮ ಪ್ರಯಾಣವನ್ನು ಮುಂದೂಡಿದ್ದಾರೆ. ಈ ಸಂಖ್ಯೆ ಸುಮಾರು 2 ಲಕ್ಷ ಎಂದು ಅಂದಾಜಿಸಲಾಗಿದೆ. ಅಂದರೆ ಶೇ. 60ರಷ್ಟು ಕಡಿಮೆ.

ಇಂಟರ್‌ನೆಟ್‌
ಉತ್ತರ ಭಾರತದ ಬಹುತೇಕ ಪ್ರವಾಸಿ ಕೇಂದ್ರಗಳ ಆಸುಪಾಸಿನ ಹೊಟೇಲ್‌ಗ‌ಳು 6 ವರ್ಷಗಳಲ್ಲೇ ಪ್ರಥಮ ಬಾರಿಗೆ ಶೇ. 14ರಷ್ಟು ಕಡಿಮೆ ಟಿಕೇಟ್‌ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿವೆ. ಇಂಟರ್‌ನೆಟ್‌ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿಯೂ ರೂಂ ಗಳು ಬುಕ್‌ ಆಗುತ್ತಿಲ್ಲ.

1,500ಕೋ. ರೂ. ಆದಾಯ
2018-19ನೇ ಸಾಲಿನಲ್ಲಿ 4,504 ವಿದೇಶಿ ಮತ್ತು 4.25 ಲಕ್ಷ ದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ ಇಲಾಖೆಗೆ 1,200ರಿಂದ 1,500 ಕೋಟಿ ರೂ. ಆದಾಯ ದೊರಕಿತ್ತು. ಈ ಬಾರಿ 1 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ.

ಅಸ್ಸಾಂಗೆ 1,000 ಕೋಟಿ ರೂ. ನಷ್ಟ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಆರಂಭವಾಗಿದ್ದು ಅಸ್ಸಾಂನಲ್ಲಿ. ಈ ಹಿಂಸಾತ್ಮಕ ಪ್ರತಿಭಟನೆ ರಾಜ್ಯದ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ನೀಡಿದೆ. ಇದರಿಂದಾಗಿ ಸುಮಾರು 1,000 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಅಸ್ಸಾಂನಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ.ವಿದೇಶಗಳ ಸೂಚನೆ ಸದ್ಯ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ, ಕೆನಡ, ಸಿಂಗಾಪುರ, ಬ್ರಿಟನ್‌ ದೇಶಗಳು ತಮ್ಮ ಪ್ರಜೆಗಳಿಗೆ ಭಾರತ ಪ್ರವಾಸ ಮುಂದೂ ಡುವಂತೆ ಸೂಚಿಸಿವೆ.

ವಿದೇಶಗಳ ಸೂಚನೆ
ಸದ್ಯ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ, ಕೆನಡ, ಸಿಂಗಾಪುರ, ಬ್ರಿಟನ್‌ ದೇಶಗಳು ತಮ್ಮ ಪ್ರಜೆಗಳಿಗೆ ಭಾರತ ಪ್ರವಾಸ ಮುಂದೂ ಡುವಂತೆ ಸೂಚಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next