Advertisement
ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಗುರುವಾರ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖೀಸಿರುವ 6 ಸಮುದಾಯಗಳಿಗೆ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಕೈಬಿಟ್ಟಿರುವುದನ್ನು ವಿರೋಧಿಸುತ್ತೇವೆ. ಅಕ್ರಮವಾಗಿ ದೇಶದೊಳಗೆ ನುಸುಳಿ ವಾಸಿಸುತ್ತಿದ್ದರೆ ಅವರನ್ನು ಹೊರಹಾಕಿ. ಆದರೆ ಈ ದೇಶದಲ್ಲಿ ಬದುಕು ಕಟ್ಟಿಕೊಂಡು ನ್ಯಾಯ ಬದ್ಧವಾಗಿ ವಾಸಿಸುತ್ತಿರುವವರ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ನಮ್ಮ ವಿರೋಧ ವಿದೆ ಎಂದು ಹೇಳಿದರು.
ಪ್ರಿಯದರ್ಶಿನಿ ಯವ ಮಹಿಳಾ ಘಟಕದ ಅಧ್ಯಕ್ಷೆ ಭವ್ಯಾ ನರಸಿಂಹ ಮೂರ್ತಿ ಅವರು ಮಾತನಾಡಿ, ವಿಭಾಜಕ ನೀತಿಯ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಸಮಯ ಬಂದೊದಗಿದೆ. ಈ ಹೋರಾಟ ದೇಶಕೋಸ್ಕರ ನಡೆಯುವ ಹೋರಾಟ ಎಂದರು. ದೇಶದಲ್ಲಿ ಸರಕಾರದ ವಿರುದ್ಧ ಧ್ವನಿಯೆತ್ತುತ್ತಿರುವರಲ್ಲಿ ಭಯವನ್ನು ಮೂಡಿಸುವ ಕಾರ್ಯ ನಡೆಯುತ್ತಿದೆ. ನಾಗರಿಕರ ಹಕ್ಕನ್ನು ಧಮನಿಸುವ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಯುವಕರನ್ನು ಪ್ರಚೋದಿಸಿ ಹಾದಿ ತಪ್ಪಿಸುವ ಕಾರ್ಯವನ್ನು ಬಿಜೆಪಿ ಮಾಡು ತ್ತಿದೆ ಎಂದು ಆರೋಪಿಸಿದರು.
Related Articles
Advertisement
ಬಿಜೆಪಿಯಿಂದ ಇನ್ನೊಂದು ಆಧ್ವಾನನರೇಂದ್ರ ಮೋದಿ ಸರಕಾರ ಆರ್‌ಬಿಐ, ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ಧಿಕ್ಕರಿಸಿ ದಿಢೀರ್ ಆಗಿ ರೂಪಾಯಿ ಅಪನಗದೀಕರಣ ಕ್ರಮವನ್ನು ಜಾರಿಗೆ ತಂದು ದೇಶದ 130 ಕೋಟಿ ಜನರನ್ನು ಸರತಿಸಾಲಿನಲ್ಲಿ ನಿಲ್ಲುವಂತೆ ಮಾಡಿ ಅಧ್ವಾನ ಸೃಷ್ಟಿಸಿತು.ಇದರಲ್ಲಿ ಕಪ್ಪು ಹಣ ಬಯಲಿಗೆ ಬರಲಿಲ್ಲ. ಇದೀಗ ನುಸುಳುಕೋರರಾಗಿ ದೇಶಕ್ಕೆ ಬಂದ ಕೆಲವೇ ಜನರನ್ನು ಹುಡುಕುವುದಕ್ಕೋಸ್ಕರ ದೇಶದಲ್ಲಿರುವ 130 ಕೋಟಿ ಜನರನ್ನು ತೊಂದರೆ ಸಿಲುಕಿಸುವ ಇನ್ನೊಂದು ಆಧ್ವಾನ ಮಾಡಹೊರಟಿದ್ದು ಇನ್ನೊಂದು ವ್ಯರ್ಥ ಕಸರತ್ತು ಆಗಲಿದೆ ಎಂದು ಬಿ.ಎಲ್. ಶಂಕರ್ ಹೇಳಿದರು.