Advertisement
ಹರೀಶ್ ಶೆಟ್ಟಿ ಹಾಗೂ ಆಶಾಲತಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದ ಈಕೆ ಮಂಗಳೂರಿನ ಕಾಲೇಜಿನಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿಯಾಗಿದ್ದರು.ಪ್ರತಿಭಾವಂತೆಯಾಗಿದ್ದರು.
ಈ ಘಟನೆಗೆ ಸಂಬಂಧಿಸಿ ಅವರ ಮನೆಗೆ ಸಹಾಯಕ ಆಯುಕ್ತ ಹರ್ಷವರ್ಧನ, ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
Related Articles
ವಿದ್ಯುತ್ ತಂತಿ ಶಿಥಿಲಗೊಂಡಿದ್ದ ಬಗ್ಗೆ ಮತ್ತು ಕೆಲವೊಮ್ಮೆ ಅದರಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಳ್ಳುತ್ತಿದ್ದ ಬಗ್ಗೆ ಹರೀಶ್ ಶೆಟ್ಟಿ ಈ ಮೊದಲೇ ಮೆಸ್ಕಾಂಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
Advertisement
ವಿದ್ಯುತ್ ಸ್ಪರ್ಶ: 22 ದಿನಗಳಲ್ಲಿ ಮೂರನೇ ದುರ್ಘಟನೆ !ಮಂಗಳೂರು: ದ.ಕ ಜಿಲ್ಲೆಯಲ್ಲಿ ಕಳೆದ 22 ದಿನಗಳಲ್ಲಿ ವಿದ್ಯುತ್ ಸ್ಪರ್ಶದಿಂದ ನಡೆದಿರುವ ಮೂರನೇ ದುರ್ಘಟನೆ, ನಾಲ್ಕನೇ ಸಾವು ಇದಾಗಿದೆ. ಜೂ.26ರಂದು ರಾತ್ರಿ ನಗರದ ಸ್ಟೇಟ್‌ಬ್ಯಾಂಕ್ ಬಳಿ ರೊಸಾರಿಯೋ ಶಾಲೆಯ ಹಿಂಭಾಗದಲ್ಲಿ ಆಟೋ ಚಾಲಕರಿಬ್ಬರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ಜೂ.27ರಂದು ಬೆಳ್ತಂಗಡಿ ಬರ್ಗುಳದಲ್ಲಿ ಯುವತಿ ಯೋರ್ವಳು ತೋಡು ದಾಟುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು.