Advertisement

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಸಿ.ವಿ.ಶಿವಶಂಕರ್‌ ನಿಧನ

11:46 AM Jun 28, 2023 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ಗೀತ ಸಾಹಿತಿ ಸಿ.ವಿ. ಶಿವಶಂಕರ್‌ (90) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು.

Advertisement

ಹೃದಯಾ ಘಾತವಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೇ ಕೊನೆ ಯುಸಿರೆಳೆದಿದ್ದಾರೆ.

ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ ಸಿ.ವಿ.ಶಿವಶಂಕರ್‌ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಗೀತ ಸಾಹಿತಿ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದರು. “ಸ್ಕೂಲ್‌ ಮಾಸ್ಟರ್‌’, “ಕೃಷ್ಣ ಗಾರುಡಿ’, “ರತ್ನಮಂಜರಿ’, “ರತ್ನಗಿರಿ ರಹಸ್ಯ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅನೇಕ ನಿರ್ದೇಶಕರ ಜೊತೆ ಸಹಾಯಕರಾಗಿ ದುಡಿದು ಬಳಿಕ “ಮನೆ ಕಟ್ಟಿ ನೋಡು’ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು. ಬಳಿಕ “ನಮ್ಮ ಊರು’, “ಪದವೀಧರ’, “ಮಹಡಿಮನೆ’, “ಮಹಾತಪಸ್ವಿ’,”ನಮ್ಮ ಊರ ರಸಿಕರು’, “ಕನ್ನಡಕುವರ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಬಹುಮುಖ ಪ್ರತಿಭೆ: ಕನ್ನಡದ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾಗಿದ್ದ ಲಕ್ಷ್ಮಣ ರಾವ್‌ ಹೊಯ್ಸಳ ಅವರ ಅಳಿಯ ಶಿವಶಂಕರ್‌. ಆಗ ಮದರಾಸಿನಲ್ಲಿದ್ದ ಕನ್ನಡ ಚಿತ್ರರಂಗದಲ್ಲಿ ತಮಿಳು ನಟ ನಟಿಯರಿಗೆ ಕನ್ನಡ ಕಲಿಸಲು ಶಿವಶಂಕರ ಅವರನ್ನು ಅಂದಿನ ನಿರ್ದೇಶಕ, ನಿರ್ಮಾಪಕರು ನೇಮಿಸುತ್ತಿದ್ದರಂತೆ. ಅಂದಿನ ಕಾಲದ ಕನ್ನಡದ ಅನೇಕ ನಟ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಶಿವಶಂಕರ್‌ ಅವರದು.

ಸಿನಿಮಾದ ಜೊತೆಗೆ ಅವರು ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದರು. ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸುವ ಜೊತೆಗೆ ರೇಡಿಯೋ, ದೂರದರ್ಶನಕ್ಕೂ ಕಾರ್ಯಕ್ರಮಗಳನ್ನು ಮಾಡಿದ್ದರು.

Advertisement

ಕನ್ನಡಾಭಿಮಾನದ ಸಾಹಿತಿ:
ಸಿ.ವಿ.ಶಿವಶಂಕರ್‌ ಅವರ ಕನ್ನಡಾಭಿಮಾನ ದೊಡ್ಡದು. ತಮ್ಮ ಪ್ರತಿಯೊಂದು ಚಿತ್ರಗಳಲ್ಲೂ ಕನ್ನಡ ನಾಡಿನ ಹಿರಿಮೆ ಸಾರುವ ಗೀತೆಗಳನ್ನು ರಚಿಸುತ್ತಿದ್ದರು. ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ… , ಕನ್ನಡದಾ ರವಿ ಮೂಡಿ ಬಂದಾ… ನಾಡಚರಿತೆ ನೆನಪಿಸುವಾ ವೀರಗೀತೆಯಾ… ಬೆಳೆದಿದೆ ನೋಡಾ ಬೆಂಗಳೂರು ನಗರ… ನಾನೋಡಿ ನಲಿಯುವ ಕಾರವಾರ… ಇವೆಲ್ಲಾ ಅವರ ರಚನೆಯ ಗೀತೆಗಳೇ. ಮದ್ರಾಸಿನಲ್ಲಿದ್ದಾಗ ಮಾತಿನ ಮಧ್ಯೆ ಅನ್ಯ ಭಾಷೆಯ ಯಾರಾದರೂ ನಿಮ್ಮ ಕನ್ನಡದಲ್ಲಿ ಏನಿದೆ ಮಹಾ ಅಂದರೆ, ಆ ವಿಷಯವಾಗಿ ಜಗಳಕ್ಕೇ ಹೋಗಿಬಿಡುತ್ತಿದ್ದರಂತೆ ಶಿವಶಂಕರ್‌.ಮಾತ್ರವಲ್ಲ, ನಮ್ಮ ಕನ್ನಡದಲ್ಲಿ ಎಲ್ಲಾ ಇದೆ ಎಂದು ವಾದಿಸಿ ಗೆಲ್ಲುತ್ತಿದ್ದರಂತೆ. ಕರ್ನಾಟಕದ ಜನ ಉದ್ಯೋಗ ಅರಸಿ ವಲಸೆ ಹೊರಟಾಗ  ಹೋಗದಿರಿ, ಸೋದರರೇ, ಹೋಗದಿರಿ ಬಂಧುಗಳೇ…ಎಂದು ಬರೆದವರು ಅವರು.

Advertisement

Udayavani is now on Telegram. Click here to join our channel and stay updated with the latest news.

Next