Advertisement

ಬೊಮ್ಮಾಯಿ ಅವರಿಗೆ ಈಗ ಯೋಗ ಕೂಡಿ ಬಂದಿದೆ : ಸಿ. ಟಿ ರವಿ

03:55 PM Aug 01, 2021 | Team Udayavani |

ಚಿಕ್ಕಮಗಳೂರು : ಹದಿನೈದು ದಿನ ರಾಜ್ಯದ ಮುಖ್ಯಮಂತ್ರಿ ಸಿಎಂ ಸ್ಥಾನದ ರೇಸ್  ವಿಚಾರದಲ್ಲಿ ಮಾಧ್ಯಮಗಳಲ್ಲಿ ನನ್ನ ಹೆಸರು ಬರುತ್ತಿತ್ತು. ನನ್ನದೊಬ್ಬನ ಹೆಸರಲ್ಲ ಹಲವು ಪ್ರಭಾವಿ ನಾಯಕರ ಹೆಸರುಗಳು ಕೇಳಿ ಬರುತ್ತಿತ್ತು. ಮುಖ್ಯಮಂತ್ರಿ ಹುದ್ದೆ ಅಲಂಕರಿಸುವುದಕ್ಕೆ ಯೋಗ ಕೂಡ ಇರಬೇಕಲ್ವೇ..? ಈಗ ಬೊಮ್ಮಾಯಿ ಅವರಿಗೆ ಯೋಗ ಕೂಡಿ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಹೇಳಿದ್ದಾರೆ.

Advertisement

ಮಲ್ಲೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಎಲ್ಲಾ ರೀತಿಯ ಸಹಕಾರವನ್ನು ಕೊಡುತ್ತೇವೆ. ಬೊಮ್ಮಾಯಿ ಅವರು ನಮ್ಮ ಸ್ನೇಹಿತರು. ರಾಜ್ಯದ ಹಿತಕ್ಕೆ ಅವರು ಮಾಡುವ ಕೆಲಸಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :   “ಈ” ಕೆಲಸಕ್ಕೆ ಭಯಪಟ್ಟು ಹಿಂದೆ ಉಳಿಯುವುದು ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು..!

ರಾಜ್ಯ ಸಚಿವ ಸಂಪುಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಹಿತದ ಆದ್ಯತೆ ಮುಂದಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಿ. ಸಾಮಾಜಿಕ, ಪ್ರಾದೇಶಿಕ ಸಮತೋಲನ ಎರಡನ್ನು ಕಾಪಾಡಿಕೊಂಡು ವಿಸ್ತರಣೆ ಮಾಡುತ್ತಾರೆ. ಉತ್ತಮ ಸಚಿವ ಸಂಪುಟ ರಚನೆ ಮಾಡಿ ಅವರ ನೇತೃತ್ವದಲ್ಲೇ ಮತ್ತೆ ಚುನಾವಣೆ ಗೆದ್ದು ಬರಬೇಕು. ಆ ರೀತಿ ವಿಸ್ತರಣೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಇನ್ನು, ಮೇಕೆದಾಟು ಯೋಜನೆಯ ವಿರುದ್ಧವಾಗಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರ ಉಪವಾಸ ವಿಚಾರಕ್ಕೆ ಸಂಬಂಧಿಸದಂತೆ ಪ್ರತಿಕ್ರಿಯಿಸಿದ ರವಿ,  ಬೆಂಗಳೂರಿನಲ್ಲಿ ಶೇಕಡಾ 30 ರಷ್ಟು ತಮಿಳು ನಾಡಿನವರೇ ಇದ್ದಾರೆ. ದೇಶದ ಎಲ್ಲಾ ರಾಜ್ಯದ ಜನ ಬೆಂಗಳೂರಿನಲ್ಲಿದ್ದಾರೆ. ಎರಡೂ ರಾಜ್ಯಕ್ಕೂ ಅನುಕೂಲವಾಗುವಂತೆ ಮಧ್ಯಮ ಮಾರ್ಗದಲ್ಲಿ ಮೇಕೆದಾಟು ಯೋಜನೆ ಮಾಡಬೇಕು. ಎರಡು ರಾಜ್ಯದ ಮುಖ್ಯಮಂತ್ರಿಗಳು ರಾಜಕಾರಣ ಮಾಡದೆ ವಾಸ್ತವಿಕ ನೆಲೆಯಲ್ಲಿ ಯೋಚನೆ ಮಾಡಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಇದನ್ನೂ ಓದಿ :  ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

Advertisement

Udayavani is now on Telegram. Click here to join our channel and stay updated with the latest news.

Next