Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಂದರೆ ಕನಿಷ್ಠ ಈ ಭಾಗದಲ್ಲಿ 20 ಶಾಸಕರು ಹೆಚ್ಚಿಗೆ ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, 20 ಜನ ಅಭ್ಯರ್ಥಿಗಳು ಸೋತರು. ಸಿದ್ದರಾಮಯ್ಯ ಜತೆಗೆ ಸದ್ಯ ಯಾರೂ ಇಲ್ಲ. ನಾನೊಬ್ಬನೆ ಮಾತನಾಡುತ್ತೇನೆ. ನನ್ನ ಪರ ಯಾರೂ ಮಾತನಾಡಲ್ಲ ಎಂದು ಸ್ವತಃ ಸಿದ್ದರಾಮಯ್ಯ ಹೇಳಿದ್ದರು ಎಂದರು.
ನಮ್ಮ ವಿರುದ್ಧ ಪ್ರಸಾರ ಮಾಡದಂತೆ ರಾಜ್ಯದ ಸುಮಾರು 12 ಜನ ಸಚಿವರು, ಕೆಲ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಸಿಡಿಯಲ್ಲಿ ಏನಿದೆ ಎಂದು ನೋಡಿ ಎಂದು ಸಭಾಪತಿಗಳಿಗೆ ಹೇಳಿದ್ದೆ. ವಿಧಾನಸೌಧದಲ್ಲಿ ಬಹಳ ಗೌರವಾನ್ವಿತರಂತೆ ಮಾತನಾಡುತ್ತಾರೆ. ಆದರೆ, ಅವರ ಹುಳುಕೆಲ್ಲ ಸಿಡಿಯಲ್ಲಿದೆ. ಆ ಸಿಡಿಗಳು ಚುನಾವಣೆ ವೇಳೆ ಹೊರ ಬರುತ್ತವೆ. ಸುಮಾರು 17ರಿಂದ 18 ಸಿಡಿ ಇವೆ. ಅದರಲ್ಲಿ ಒಬ್ಬ ಗೋಪಾಲ ನಾನು ತಡೆಯಾಜ್ಞೆ ತೆಗೆದುಕೊಂಡಿಲ್ಲ ಎಂದಿದ್ದಾರೆ. ಆದರೆ, ಅವರ ಹೈಟ್, ವೇಟ್‌ಗೆ ಏನೂ ಮಾಡಲು ಆಗಲ್ಲ ಎಂದರು.