Advertisement

ವಿರೋಧ ಕಟ್ಕೋಳ್ಳೋದು ನಾವು, ಅಧಿಕಾರ ಅನುಭವಿಸುವುದು ಬೇರೆಯವರು : ಸಿಎಂ ಇಬ್ರಾಹಿಂ

09:57 AM Dec 18, 2019 | keerthan |

ಬೆಂಗಳೂರು: ವಿರೋಧ ಮಾಡುವುದು ನಾವು, ಭಾಷಣ ಮಾಡುವುದು ನಾವು, ವಿರೋಧ ಕಟ್ಕೊಳ್ಳೋದು ನಾವು. ಆದರೆ ಅಧಿಕಾರ ಅನುಭವಿಸೋದಕ್ಕೆ ಖುರ್ಚಿ ಮೇಲೆ ಕೂರುವುದಕ್ಕೆ ಬೇರೆಯವರಾ? ಹೀಗೆಂದು ಪ್ರಶ್ನಿಸಿದವರು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ.

Advertisement

ಪಕ್ಷದ ನಾಯಕರ ವಿರುದ್ಧ ಹರಿಹಾಯ್ದ ಅವರು, ಸತ್ತಿದ್ದೀವಿ ಅಂದಮೇಲೆ ಶವ ಸಂಸ್ಕಾರನಾದರೂ ಮಾಡಬೇಕಲ್ಲ, ಶವ ಸಂಸ್ಕಾರವೂ ಮಾಡದೇ ಸರ್ಕಲ್ ನಲ್ಲಿ ಶವ ಬಿಸಾಡಿ ಹೋದರೆ? ಅದಕ್ಕಿಂತ ಮನೆ ಸಾವೇ ಬೆಸ್ಟು ಅನಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹೈಕಮಾಂಡ್ ಅಲ್ಪ ಸಂಖ್ಯಾತ ಸಮುದಾಯದ ಕೈ ಹಿಡಿಲಿಲ್ಲ. ವೇಣುಗೋಪಾಲ್ ನಮ್ಮ ಪರವಾಗಿ ಮಾತನಾಡಬಹುದಿತ್ತು. ಕಾಂಗ್ರೆಸ್ ನಾಯಕರೂ ಯಾರೂ ಮಾತನಾಡಲೇ ಇಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ವಿರುದ್ದ ನನ್ನ ಸಿಟ್ಟಲ್ಲ, ಕಾಂಗ್ರೆಸ್ ಪಕ್ಷದ ವಿರುದ್ದ ನನ್ನ ಸಿಟ್ಟು ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದರು.

ಅಲ್ಪ ಸಂಖ್ಯಾತ ಸಮಾಜ 15% -16% ಇದೆ. ಆದರೆ ಅಲ್ಪ ಸಂಖ್ಯಾತ ಸಮಾಜ ಬೇರೆಯವರ ಜೊತೆಗೆ ಗುರುತಿಸಿಕೊಂಡಿದೆ. ಅನೇಕ ಕಡೆ ಯಡಿಯೂರಪ್ಪ ಗೆ ಅಲ್ಪ ಸಂಖ್ಯಾತ ಸಮಾಜ ಓಟು ಹಾಕಿದೆ. ಹಳೆ ಮೈಸೂರು ಭಾಗದಲ್ಲೂ ಕೂಡ ಏನಾಗಿದೆ ನೋಡಬಹುದು ಎಂದರು.

ಪಕ್ಷ ಕಟ್ಟುವಂಥದ್ದು ಕಷ್ಟ ಅಂತಲ್ಲ, ಆದರೆ ಮನಸ್ಸು ಮಾಡಬೇಕಷ್ಟೇ. ಪಕ್ಷ ಬಿಟ್ಟು ನಾವೆಲ್ಲಿ ಹೋಗಿದ್ದೇವೆ, ಎಷ್ಟು ದಿನ ಅಂತ ದುಡಿಯುವುದು, ಅದಕ್ಕೊಂದು ಲಿಮಿಟ್ ಇಲ್ಲವೇನ್ರಿ ಎಂದು ಹತಾಶೆಯಿಂದ ಪ್ರಶ್ನಿಸಿದರು.

Advertisement

ಚುನಾವಣೆಯಲ್ಲಿ ಕೆಲಸ ಮಾಡೋದಿಲ್ಲ ಅಂದು ನಾನು ಮೊದಲೇ ಹೇಳಿದ್ದೆ. ನನ್ನ ಕೈಲಾದಂತೆ ದೇವರು ಕೊಟ್ಟಂತಹ ಶಕ್ತಿ ಪ್ರಕಾರ ಮೊದಲೆಲ್ಲ ಕೆಲಸ ಮಾಡಿದ್ದೆ ಎಂದ ಹಿರಿಯ ಕಾಂಗ್ರೆಸ್ ನಾಯಕ, ವೀರಶೈವ ಸಮುದಾಯ ಯಡಿಯೂರಪ್ಪ ಕೈ ಹಿಡಿದಿದೆ, ಗೆದ್ದಿದ್ದಾರೆ. ಅವರಿಲ್ಲದೆ ಯಡಿಯೂರಪ್ಪ ಬಿಜೆಪಿ ಏನೂ ಅಲ್ಲ. ಜೆಡಿಎಸ್ ನವರಿಗೆ ಒಕ್ಕಲಿಗ ಶಕ್ತಿ ಇತ್ತು, ಆದರೆ ಈಗ ಕೈ ಹಿಡಿಲಿಲ್ಲ. ಎರಡು ಪ್ರಬಲ ಸಮುದಾಯಗಳು ಬಿಜೆಪಿ ಪರ ನಿಂತವು ಎಂದರು.

ವಾಸ್ತವಾಂಶ, ಸತ್ಯಾಂತ ಹೇಳುವುದಕ್ಕೆ ನಮ್ಮಲ್ಲಿ ಯಾರೂ ತಯಾರಿಲ್ಲ. ನಾವು ದುಡಿದು ಓಟು ಹಾಕಿಸಬೇಕು, ಆದರೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಾವಿಲ್ಲ. ಈ ಪದ್ದತಿ ಸರಿಯಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next