ಅಂಕೋಲಾ : ಉತ್ತರ ಕನ್ನಡದ ನೆರೆ ಪಿಡೀತ ಪ್ರದೇಶಕ್ಕೆ ಇಂದು(ಗುರುವಾರ, ಜುಲೈ 29) ಬೇಟಿ ನೀಡಿದ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಗಾವಳಿ ನದಿಯ ನೆರೆಯಿಂದ ಹಾನಿಗೋಳಗಾದ ಕಲ್ಲೇಶ್ವರ ಸೇತುವೆಯ ಪರಿಶೀಲನೆ ನಡೆಸಿದ್ದಾರೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭೂ ಕೂಸಿತ ಕಳೆದ ಹಲವು ವರ್ಷಗಳಿಂದ ಆಗುತ್ತದೆ. ತಜ್ಞರ ತಂಡ ಕಳುಹಿಸಿ ಅದ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಬರವಸೆ ನೀಡಿದರು. ತುರ್ತಾಗಿ ಈ ಬಾಗದ ಅಗತ್ಯ ವಸ್ತುಗಳ ಸಾಗಾಟಕ್ಕೆ ಮತ್ತು ಅನಾರೋಗ್ಯ ಪಿಡೀತರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಇದನ್ನೂ ಓದಿ : ಬೊಮ್ಮಾಯಿ ರಾಜ್ಯ‘ಭಾರ’..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?
ಗಂಗಾವಳಿ ಕಲ್ಲೇಶ್ವರ ಸೆತುವೆಯ ಹಾನಿ ಪರಿಶೀಲನೆ ಬಳಿಕ ಅಂಕೋಲಾ ಶಿರೂರು ನೆರೆ ಪಿಡೀತ ಪ್ರದೇಶವನ್ನು ಬೇಟಿ ನೀಡಿ ಅಲ್ಲಿಯ ಖಾಳಜಿ ಕೇಂದ್ರಕ್ಕೆ ಬೇಟಿ ನಿಡಿದರು. ಅಲ್ಲಿಯ ಸಂತ್ರಸ್ತರಿಗೆ ಸಾಂತ್ವಾನ ಹೇಳಿದ್ದಾರೆ.
ಗಂಗಾವಳಿ ನೆರೆ ಹಾವಳಿಯಿಂದ ಬಹಳಷ್ಟು ಹಾನಿ ಉಂಟಾಗಿದೆ. ಕೃಷಿ, ಮನೆ, ಸಾರ್ವಜನಿಕರ ಆಸ್ತಿ ಹಾನಿಗೊಳಗಾಗಿದ್ದು ಪರಿವಾರಕ್ಕೆ ಎನ್ ಡಿ ಆರ್ ಎಪ್ ಬಳಿ ಹಣ ಅಬಾವವಿದೆ ಜಿಲ್ಲಾಡಳಿತ ಬಳಿ ಹಣವಿದೆ. ಸರಕಾರವು ನೆರವು ನಿಡಿ ಎಲ್ಲಾ ಸಂತ್ತಸ್ಥರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ಜಿಯೋ ನೀಡುತ್ತಿದೆ ಗ್ರಾಹಕ ಸ್ನೇಹಿ ಪ್ರೀಪೇಯ್ಡ್ ಪ್ಲ್ಯಾನ್ಸ್..! ಇಲ್ಲಿದೆ ಸಂಪೂರ್ಣ ಮಾಹಿತಿ