Advertisement

ಶಕ್ತಿಯುತ ಯುವಜನತೆ ದೇಶದ ಭವಿಷ್ಯ : ಸಿಎಂ

09:49 PM Nov 20, 2021 | Team Udayavani |

ಬೆಂಗಳೂರು: ಶಕ್ತಿಯುತ ಯುವಜನತೆ  ದೇಶದ ಭವಿಷ್ಯ . ಹುರುಪು ಹುಮ್ಮಸ್ಸು ಶಕ್ತಿಯನ್ನು ಕ್ರೀಡಾಪಟುಗಳಲ್ಲಿ ಕಾಣುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Advertisement

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಇಂಡಿಯನ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಲೀಗ್ ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರೀಡೆ ಯುವಕರಲ್ಲಿ ಚಾರಿತ್ರ್ಯವನ್ನು ಬೆಳೆಸುತ್ತದೆ :

ಯಾವುದೇ ಕ್ರೀಡೆಯಲ್ಲಿ ಗೆಲ್ಲಬೆಕೆನ್ನುವ ಹಂಬಲ ಇರಬೇಕು. ಗೆಲವು ಸಾಧಿಸಲು ಕಠಿಣ ಪರಿಶ್ರಮ, ಶಿಸ್ತು  ಬೇಕಾಗುತ್ತದೆ. ಕ್ರೀಡೆ ಯುವಕರಲ್ಲಿ ಚಾರಿತ್ರ್ಯವನ್ನು ಬೆಳೆಸುತ್ತದೆ. ಆಟವನ್ನು ರಕ್ಷಣಾತ್ಮಕವಾಗಿ ಹಾಗೂ ಆಕ್ರಮಕಾರಿಯಾಗಿ ಆಡಬಹುದು. ಆದರೆ ಆಟದಲ್ಲಿ ಗೆಲವು ಸಾಧಿಸಲು ಆಕ್ರಮಣಕಾರಿಯಾಗಿ ಆಡಬೇಕಾಗುತ್ತದೆ.  ನಿಜವಾದ ಕ್ರೀಡಾಪಟು ಗೆಲ್ಲುವ ಛಲ,ಗುರಿ ಇದ್ದರೂ ಮಾನಸಿಕವಾಗಿ ಸೋಲು, ಗೆಲವನ್ನು ಸಮನಾಗಿ ತೆಗೆದುಕೊಳ್ಳುವುದು ಒಬ್ಬ ಕ್ರೀಡಾಪಟುವಿನ ಗುಣವಾಗಿರಬೇಕು ಎಂದು ನುಡಿದರು.

ಕ್ರಿಕೆಟ್, ಕಬ್ಬಡಿ, ಹಾಕಿ, ಫುಟ್ಬಾಲ್ ನಂತೆ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಅವರು ಬ್ಯಾಸ್ಕೆಟ್ ಬಾಲ್  ಲೀಗ್ ಪ್ರಾರಂಭಿಸಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಮುಖ್ಯಮಂತ್ರಿಗಳು,  ಲೀಗ್ ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು.

Advertisement

ಮುಂದಿನ ಆಯವ್ಯಯದಲ್ಲಿ ಕ್ರೀಡೆಗೆ ಹೆಚ್ಚಿನ ಅನುದಾನ:

ಅಮೃತ ಕ್ರೀಡಾ ದತ್ತು ಯೋಜನೆ ಯಡಿ 75 ಕ್ರೀಡಾಪಟುಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಉತ್ತಮ ಹಾಗೂ ಅನುಭವಿ ತರಬೇತುದಾರರಿಂದ ತರಬೇತಿ ಕೊಡಿಸಿ 75 ಮಂದಿಯಲ್ಲಿ ಕನಿಷ್ಟ 5 ಮಂದಿಯಾದರು ಪದಕ ಗೆಲ್ಲುವ ಗುರಿಯನ್ನು ಸರ್ಕಾರ ಹೊಂದಿದೆ.  ಮುಂಬರುವ ಆಯವ್ಯಯದಲ್ಲಿ ಕ್ರಿಡಾ ಇಲಾಖೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲಾಗುವುದು. ಖೇಲೋ ಇಂಡಿಯಾ, ಜೀತೋ ಇಂಡಿಯಾದ ಸ್ಪೂರ್ತಿಯಾದ ನಮ್ಮ ಪ್ರಧಾನಮಂತ್ರಿಯವರನ್ನು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಉದ್ಘಾಟನೆಗೆ ಆಹ್ವಾನಿಸಲಾಗುವುದು.ಪ್ರಧಾನಿಯವರು ನೀಡಿದ ಕ್ರೀಡಾ ಪ್ರೋತ್ಸಾಹದಿಂದ ಒಲಂಪಿಕ್ಸಸ್ 2021 ರಲ್ಲಿ ಭಾರತ ಗರಿಷ್ಠ ಪದಕಗಳನ್ನು ಗೆಲ್ಲುವಂತಾಯಿತು. ಈ ಪರಂಪರೆ ಮುಂದುವರೆಸಲು ರಾಜ್ಯ ಸರ್ಕಾರ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಬಲಿಷ್ಟ ಕರ್ನಾಟಕ ನಿರ್ಮಾಣ:

ಕನ್ನಡದ ಖ್ಯಾತ ನಟ ಯಶ್ ಎಂದರೆ ಯಶಸ್ಸು. ಯಶ್ ಇರುವಲ್ಲಿ ಆತ್ಮ ವಿಶ್ವಾಸ ತುಂಬಿರುತ್ತದೆ. ಅವರ ಉಪಸ್ಥಿತಿ ಎಲ್ಲ ಕ್ರೀಡಾಪಟುಗಳಲ್ಲಿ, ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ‘ಜೈಹೋ’ಗೀತೆ  ಪ್ರಸ್ತುತಪಡಿಸಿದ ಸುಪ್ರಸಿದ್ಧ ಗಾಯಕ ಶ್ರೀ ವಿಜಯ ಪ್ರಕಾಶ್ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು , ಈ ಗೀತೆ ಇಡೀ ದೇಶದಲ್ಲಿ ಸ್ಪೂರ್ತಿ ತುಂಬುತ್ತಾ ಬಂದಿದೆ. ಈ ಕಾರ್ಯಕ್ರಮದಿಂದ ಹಾಗೂ ನೆರೆದಿರುವ ಗಣ್ಯರಿಂದ  ಬಹಳಷ್ಟು ಶಕ್ತಿ , ಪ್ರೋತ್ಸಾಹ ಹಾಗೂ ಆತ್ಮವಿಶ್ವಾಸವನ್ನು ಪಡೆದಿದ್ದು, ರಾಜ್ಯವನ್ನು ಬಲಿಷ್ಠ ಕರ್ನಾಟಕ ನಿರ್ಮಿಸುವುದಾಗಿ ಅವರು ತಿಳಿಸಿದರು.

ಸಮಾರಂಭದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಐ.ಎನ್.ಬಿ.ಎಲ್ ಅಧ್ಯಕ್ಷರು   ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್, ಚಿತ್ರನಟ ಯಶ್, ಗಾಯಕ ವಿಜಯ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next