Advertisement

ಬೈಪಾಸ್‌ ರೋಡ್‌ ನಲ್ಲಿ ಥ್ರಿಲ್ಲರ್‌ ಜರ್ನಿ

11:44 AM Jul 20, 2022 | Team Udayavani |

ಯುವನಟ ಭರತ್‌ ಕುಮಾರ್‌, ತಿಲಕ್‌, ನೀತೂ ಗೌಡ, ನೇಹಾ ಸಕ್ಸೇನಾ, ಉದಯ್‌, ಮಾಸ್ಟರ್‌ ಆನಂದ್‌, ತಬಲನಾಣಿ, ಉಗ್ರಂ ಮಂಜು ಮೊದಲಾದ ಕಲಾವಿದರ ಬಹುತಾರಾಗಣವಿರುವ “ಬೈಪಾಸ್‌ ರೋಡ್‌’ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಇದೇ ಜು. 29ಕ್ಕೆ ಬಿಡುಗಡೆಯಾಗುತ್ತಿದೆ.

Advertisement

ಇನ್ನು “ಬೈಪಾಸ್‌ ರೋಡ್‌’ ಔಟ್‌ ಆ್ಯಂಡ್‌ ಔಟ್‌ ಸಸ್ಪೆನ್ಸ್‌ – ಥ್ರಿಲ್ಲರ್‌ ಸಬ್ಜೆಕ್ಟ್ ಸಿನಿಮಾವಾಗಿದ್ದು, ಜೋಡಿಯೊಂದು ಹನಿಮೂನ್‌ಗೆ ಟ್ರಾವೆಲ್‌ ಮಾಡುತ್ತಿರುವಾಗ ನಡೆಯುವ ಅನಿರೀಕ್ಷಿತ ಘಟನೆಗಳು, ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತದೆ ಅನ್ನೋದರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ.

ಈಗಾಗಲೇ ಬಿಡುಗಡೆಯಾಗಿರುವ “ಬೈಪಾಸ್‌ ರೋಡ್‌’ ಸಿನಿಮಾದ ಫ‌ಸ್ಟ್‌ ಲುಕ್‌ ಪೋಸ್ಟರ್‌, ಟೀಸರ್‌ ಮತ್ತು ಹಾಡುಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇನ್ನಷ್ಟು ಭರದಿಂದ “ಬೈಪಾಸ್‌ ರೋಡ್‌’ನ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದು, ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

ಸದ್ಯ ಪ್ರಚಾರ ವೇಳೆಯಲ್ಲಿ “ಬೈಪಾಸ್‌ ರೋಡ್‌’ಗೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ಚಿತ್ರತಂಡ, “ಇದೊಂದು ಕಂಪ್ಲೀಟ್‌ ಜರ್ನಿ ಸಬ್ಜೆಕ್ಟ್ ಸಿನಿಮಾ. ಸಿನಿಮಾದ ಕಥೆಯಲ್ಲಿ ಬರುವ ಅನಿರೀಕ್ಷಿತ ಟರ್ನ್ಸ್, ಟ್ವಿಸ್ಟ್‌ಗಳು, ಕಲಾವಿದರ ಅಭಿನಯ, ಕ್ವಾಲಿಟಿ ಮೇಕಿಂಗ್‌ ಸಿನಿಮಾ ಹೈಲೈಟ್ಸ್‌. ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಇಂಥದ್ದೊಂದು ಸಬ್ಜೆಕ್ಟ್ ಮೇಲೆ ಯಾವುದೇ ಸಿನಿಮಾಗಳು ಬಂದಿಲ್ಲ. ”

“ಬೈಪಾಸ್‌ ರೋಡ್‌’ ಜರ್ನಿ ಥಿಯೇಟರ್‌ನಲ್ಲೂ ಆಡಿಯನ್ಸ್‌ಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಅನುಭವ ನೀಡಲಿದೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತದೆ.”ಎಂ.ಬಿ ಪ್ರೊಡಕ್ಷನ್ಸ್‌’ ಬ್ಯಾನರ್‌ ಅಡಿಯಲ್ಲಿ ಭರತ್‌ ರಾಜ್‌ ಎಂ, ಮಹೇಶ್‌ ಬಿ.ಎನ್‌ ಜಂಟಿಯಾಗಿ ನಿರ್ಮಿಸಿರುವ “ಬೈಪಾಸ್‌ ರೋಡ್‌’ ಚಿತ್ರಕ್ಕೆ ಶ್ರೀನಿವಾಸ್‌ ಎಸ್‌. ಬಿ ನಿರ್ದೇಶನವಿದೆ.

Advertisement

“ಬೈಪಾಸ್‌ ರೋಡ್‌’ ಚಿತ್ರಕ್ಕೆ ನಿರಂಜನ್‌ ಬಾಬು ಛಾಯಾ ಗ್ರಹಣ, ಶ್ರೀಕಾಂತ್‌ ಎಸ್‌.ಹೆಚ್‌ ಸಂಕಲನವಿದೆ. ಚಿತ್ರದ ಮೂರು ಹಾಡುಗಳಿಗೆ ವಿಜಯ್‌ ಕೃಷ್ಣ ಡಿ. ಸಂಗೀತ ಸಂಯೋಜಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next