Advertisement
ಮಾಜಿ ರೋಟರಿ ಜಿಲ್ಲಾ ಗವರ್ನರ್ ಎಚ್.ಎಲ್. ರವಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಅವರಿಗೆ ಪದಪ್ರದಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ರೋಟರಿ ಕುಟುಂಬ ಮತ್ತು ವೃತ್ತಿಯ ನಡುವೆ ಉತ್ತಮ ಪ್ರಗತಿಯಿದ್ದರೆ ರೋಟರಿ ಸರಿಯಾದ ದಾರಿಯಲ್ಲಿ ನಡೆ ಯುತ್ತದೆ. ಸಮಾಜಮುಖೀ ಕಾರ್ಯದ ಮೂಲಕ ಜನಸೇವೆ ಮಾಡುವುದರಿಂದ ಆತ್ಮ ಸಂತೃಪ್ತಿ ದೊರೆಯುತ್ತದೆ ಎಂದರು. ಮಾಜಿ ರೋಟರಿ ಗವರ್ನರ್ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಎಚ್. ಕೃಷ್ಣಪ್ಪ ಶೆಟ್ಟಿ ನೂತನ ಕಾರ್ಯದರ್ಶಿ ಪ್ರವೀಣ ಕುಮಾರ್ ಶೆಟ್ಟಿ ಅಧಿಕಾರ ಪಡೆದರು. ವಲಯ 1ರ ಸಹಾಯಕ ಗವರ್ನರ್ ಕೃಷ್ಣ ಕೆ.ಕಾಂಚನ್ ಬಿಂದುವಾಣಿ ಬುಲೆಟಿನ್ ಬಿಡುಗಡೆಗೊಳಿಸಿದರು.
ನಿಕಟಪೂರ್ವ ಕಾರ್ಯದರ್ಶಿ ಸುಧಾಕರ ಪಿ. ಬೈಂದೂರು ವರದಿ ವಾಚಿಸಿದರು. ರೋಟರಿ ಬೈಂದೂರು ನಿಕಟಪೂರ್ವಾ ಧ್ಯಕ್ಷ ಮಂಜುನಾಥ ಶೆಟ್ಟಿ ಸ್ವಾಗತಿಸಿದರು.ಕಾರ್ಯದರ್ಶಿ ಪ್ರವೀಣ ಕುಮಾರ್ ಶಟ್ಟಿ ವಂದಿಸಿದರು.