Advertisement

ಬೈಂದೂರಿನಲ್ಲಿ ಮಿನಿ ವಿಧಾನಸೌಧಕ್ಕೆ ಮೊದಲ ಹೆಜ್ಜೆ : 2022ರ ಒಳಗೆ ಕಾಮಗಾರಿ ಪೂರ್ಣ

10:04 PM Mar 06, 2021 | Team Udayavani |

ಬೈಂದೂರು: ತಾಲೂಕಿನ ಬಹು ನಿರೀಕ್ಷಿತ ಮಿನಿ ವಿಧಾನಸೌಧ ಕಾಮಗಾರಿ ಆರಂಭಗೊಂಡಿದೆ. ಮುಂದಿನ ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣ ಗೊಳ್ಳಲಿದ್ದು, ಈ ಮೂಲಕ ತಾಲೂಕು ಆಡಳಿತ ಸೇವೆ ಒಂದೆ ಸೂರಿನಡಿಯಲ್ಲಿ ದೊರೆಯಲಿದೆ.

Advertisement

ವ್ಯವಸ್ಥೆಗಳೇನಿರಲಿವೆ?
ನೆಲಮಹಡಿ ಜತೆ ಎರಡು ಮಹಡಿಯಲ್ಲಿ ಒಟ್ಟು 2920 ಚ.ಮೀ ವಿಸ್ತಿರ್ಣ ಸುಮಾರು 8.58 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ. ಕರ್ನಾಟಕ ಗೃಹ ಮಂಡಳಿ ಯೋಜನೆಯಡಿ ಎಸ್‌.ಕೆ.ಎಸ್‌ ಕಾರ್ಕಳ ಕಟ್ಟಡ ನಿರ್ಮಾಣ ಮಾಡಲಿದ್ದಾರೆ. 8 ಜನ ಸಾಮರ್ಥ್ಯದ ಲಿಫ್ಟ್‌, 25 ಸಾವಿರ ಲೀಟರ್‌ ಸಾಮರ್ಥ್ಯದ ಸಂಪ್‌ ಟ್ಯಾಂಕ್‌, ಡಿಸೇಲ್‌ ಜನರೇಟರ್‌, ಕಾರಿಡಾರ್‌, ವಿವಿಧ ಕಚೇರಿಗಳು, ಕೋರ್ಟ್‌ ಹಾಲ್‌ ಹಾಗೂ ಆಕರ್ಷಕ ವಿನ್ಯಾಸಗಳು ಇರಲಿವೆ.

ಸಿಬಂದಿ ಕೊರತೆ ನೀಗಬೇಕು
ವಿಧಾನಸೌಧ ಕಾಮಗಾರಿಯೊಂದಿಗೆ ಸಿಬಂದಿ ಕೊರತೆಯೂ ನೀಗಬೇಕಿದೆ. ಜನ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಈಗಿರುವ ಕಚೇರಿಯಲ್ಲಿ ವ್ಯಾಪಕ ಸಿಬಂದಿ ಕೊರತೆ ಇದೆ. ಕೆಲವು ಸಿಬಂದಿಗಳು ನಾಲ್ಕರಿಂದ ಹೆಚ್ಚು ವಿಭಾಗದ ಜವಾಬ್ದಾರಿ ಹೊಂದಿರುವುದರಿಂದ ಸಮರ್ಪಕ ಸೇವೆ ದೊರೆಯುತ್ತಿಲ್ಲವಾಗಿದೆ. ಖಾಯಂ ತಹಶೀಲ್ದಾರರ ನೇಮಕವಾಗಬೇಕಿದೆ.

ವರ್ಷದಲ್ಲಿ ಪೂರ್ಣ
ಮುಂದಿನ ಒಂದು ವರ್ಷದಲ್ಲಿ ಮಿನಿ ವಿಧಾನಸೌಧದ ಕಾಮಗಾರಿ ಪೂರ್ಣಗೊಳ್ಳಲಿದೆ.ಅತ್ಯಂತ ಗುಣಮಟ್ಟದ ಕಾಮಗಾರಿ ನಡೆಸಲು ತಿಳಿಸಿದ್ದು ಸಾರ್ವಜನಿಕರಿಗೆ ಎಲ್ಲ ಸೇವೆ ಒಂದೆ ಕಡೆ ದೊರೆಯಲಿದೆ.
-ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next