Advertisement
ಬೆಳಗ್ಗೆ 4 ಗಂಟೆಗೆ ಎದ್ದು ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಕುಂಭಾಸಿ ಆನೆಗುಡ್ಡೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಬೆಳಗ್ಗೆ ಗಂಟೆ 6.30ಕ್ಕೆ ಮನೆಗೆ ಬಂದ ಅವರು, ಮತ್ತೆ ಮನೆಯಲ್ಲಿ ಒಂದು ಗಂಟೆಗಳ ಕಾಲ ಪೂಜೆಯಲ್ಲಿ ತೊಡಗಿಸಿಕೊಂಡರು.ಗೋವುಗಳಿಗೆ ಆಹಾರವನ್ನು ನೀಡಿದ ಬಳಿಕ ಉಪಾಹಾರ ಸೇವಿಸಿ, ಪತ್ರಿಕೆ ಓದಿದ ಅನಂತರ ಪಕ್ಷದ ಪ್ರಮುಖರ ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
ಮೈಸೂರಿನಿಂದ ಕೊಲ್ಲೂರಿಗೆ ಆಗಮಿಸಿದ ಸಾಧುಸಂತರು ಬಿ.ಎಂ.ಸುಕುಮಾರ ಶೆಟ್ಟಿ ಅವರನ್ನು ಭೇಟಿ ಮಾಡಿದರು. ಕುಶಲೋಪರಿ ವಿಚಾರಿಸಿದ ಬಳಿಕ ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು. ಕಾರ್ಯಕರ್ತರು ಹಾಗೂ ಪಕ್ಷದ ಪ್ರಮುಖರು ಓಟಿನ ಲೆಕ್ಕಾಚಾರದ ತಲೆಬಿಸಿಯಲ್ಲಿ ಇದ್ದರೆ ಅವರು ಮಾತ್ರ ನಿರಾಳತೆಯಿಂದ ಮನೆಯ ಹೊರಗಡೆ ಸಮಯ ಕಳೆಯುತ್ತಿರುವುದು ಕಂಡುಬಂತು. ಸಂಭ್ರಮಾಚರಣೆ
ಹೆಚ್ಚು ಅಂತರದ ಮುನ್ನಡೆ ಪಡೆಯುತ್ತಿದ್ದಂತೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ನೂರಾರು ಬೆಂಬಲಿಗರು, ಪಕ್ಷದ ಪ್ರಮುಖರು ಮನೆಗೆ ಆಗಮಿಸುತ್ತಿರುವುದು ಈ ಸಂದರ್ಭ ಕಂಡುಬಂತು. ಬೆಂಬಲಿಗರ ಖಷಿಯ ಕೂಗ್ಗು ಜೋರಾಗಿಯೇ ಕೇಳಿಬಂತು. ಈ ನಡುವೆ ಅವರು ಪಕ್ಷದ ಪ್ರಮುಖರೊಂದಿಗೆ ಉಡುಪಿಗೆ ತೆರಳಿದರು.