Advertisement

Byndoor:ಹೆಣ್ಣು ಮಗು ಜನಿಸಿದ್ದಕ್ಕೆ ಸೊಸೆಗೆ ಅತ್ತೆ, ಮಾವ,ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ

01:38 PM Sep 10, 2024 | Team Udayavani |

ಉಡುಪಿ: ಬೈಂದೂರಿನ ಯಡ್ತರೆ ಗ್ರಾಮದ ಜೀವನ (33ವರ್ಷ) ಎಂಬಾಕೆ 2018ರಲ್ಲಿ ಯೋಗೇಂದ್ರ ಕುಮಾರ್‌ ಎಂಬವರ ಜೊತೆ ವಿವಾಹವಾಗಿದ್ದು, ದಂಪತಿಗೆ ಹೆಣ್ಣು ಮಗು ಜನಿಸಿದ್ದಕ್ಕೆ ಅತ್ತಿಗೆ, ಅತ್ತೆ ವರದಕ್ಷಿಣೆ ಕಿರುಕುಳ ನೀಡಿರುವ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.

Advertisement

ಏನಿದು ಪ್ರಕರಣ:

ಜೀವನ, ಯೋಗೇಂದ್ರ ಕುಮಾರ್‌ ದಂಪತಿಗೆ 2021ರಲ್ಲಿ ಹೆಣ್ಣು ಮಗು ಜನಿಸಿತ್ತು. ಬಳಿಕ ಅತ್ತಿಗೆಗೆ ಗಂಡು ಮಗುವಾಗಿತ್ತು. ಇದರ ಪರಿಣಾಮ ಅತ್ತೆ ನಿರ್ಮಲಾ ಮಂಜುನಾಥ್‌, ಅತ್ತಿಗೆ ಪೂಜಾ ಜೀವನಳಿಗೆ ಕಿರುಕುಳ ನೀಡಲು ಆರಂಭಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:Kolkata Case: ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಿ-ಮಮತಾ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಜೀವನ ವರದಕ್ಷಿಣೆ ಹಾಗೂ ಚಿನ್ನಾಭರಣ ತರಲಿಲ್ಲ ಎಂದು ಅತ್ತಿಗೆ ಪೂಜಾ ಹಂಗಿಸಿ ಮಾತನಾಡಿ, ಮನೆಯಿಂದ ಹೊರ ಹೋಗುವಂತೆ ಕಿರುಕುಳ ನೀಡುತ್ತಿದ್ದರು. ಜೀವನಳ ಮಾವ ಮಂಜುನಾಥ್‌ ಬೈಂದೂರು ಗಂಡನಿಗೆ ಕರೆ ಮಾಡದಂತೆ  ತಾಕೀತು ಮಾಡಿದ್ದರು. ಪೂಜಾಳ ಗಂಡ ಲೋಹಿತ್‌ ಉಪ್ಪುಂದ ಕೂಡಾ ತನ್ನ ಹೆಂಡತಿ ಪೂಜಾ ನೀಡುತ್ತಿದ್ದ ಕಿರುಕುಳಕ್ಕೆ ಕುಮ್ಮಕ್ಕು ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Advertisement

ಆರೋಪಿತರು ಎಲ್ಲಾ ಸೇರಿ ಜೀವನಳಿಗೆ ಅಡುಗೆ ಮಾಡಲು ಮನೆ ಒಳಗೆ ಹೋಗಲು ಬಿಡದೆ, ಹಿಯಾಳಿಸಿ ಮನೆಯಿಂದ ವರದಕ್ಷಿಣೆ ಹಣ ಮತ್ತು ಚಿನ್ನಾಭರಣ ತರುವಂತೆ ಕಿರುಕುಳ ನೀಡಿರುವುದಾಗಿ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next