Advertisement
ಮತಗಟ್ಟೆಗಳಲ್ಲಿ 75 ಸೂಕ್ಷ್ಮ ಮತ್ತು 171 ಸಾಮಾನ್ಯ ಎಂದು ಗುರುತಿಸಲಾಗಿದೆ. ಹೆಮ್ಮಾಡಿಯಲ್ಲಿ 2 ಮತ್ತು ತಲ್ಲೂರಿನಲ್ಲಿ 3 ಸಖೀ ಮತಗಟ್ಟೆಗಳಿರುತ್ತವೆ. ಎಲ್ಲ ಕೇಂದ್ರಗಳಲ್ಲೂ ವಿಶೇಷ ಚೇತನರಿಗೆ, ಅಶಕ್ತರಿಗೆ, ಗರ್ಭಿಣಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. 1088 ಮತಗಟ್ಟೆ ಸಿಬಂದಿ ಮತ್ತು 246 ಸಹಾಯಕ ಸಿಬಂದಿ ಚುನಾವಣೆಯ ಕರ್ತವ್ಯ ನಿರ್ವಹಿಸುವರು. ಸುರಕ್ಷತೆಯ ಹೊಣೆಯನ್ನು ಮೂವರು ಡಿವೈಎಸ್‌ಪಿ ನೇತೃತ್ವದಲ್ಲಿ 103 ಇನ್‌ಸ್ಪೆಕ್ಟರ್, 33 ಎಸ್‌ಐ, 149 ಎಎಸ್‌ಐ ಹಾಗೂ 523 ಸಿಬಂದಿ ನೋಡಿಕೊಳ್ಳಲಿದ್ದಾರೆ.
ಈ ಕ್ಷೇತ್ರದಲ್ಲಿ ಬೈಂದೂರು ತಾಲೂಕಿನ 26, ಕುಂದಾಪುರ ತಾಲೂಕಿನ 39 ಸೇರಿ 65 ಗ್ರಾಮಗಳು ಇವೆ. 1,10,237 ಪುರುಷ, 1,16,349 ಮಹಿಳಾ ಮತ್ತು 1 ಅನ್ಯ ಸೇರಿ ಒಟ್ಟು 2,26,587 ಮತದಾರರು 246 ಮತದಾನ ಕೇಂದ್ರಗಳಲ್ಲಿ ಹಕ್ಕು ಚಲಾಯಿಸಲಿದ್ದಾರೆ.
Related Articles
ಕುಂದಾಪುರ: ಶಿವಮೊಗ್ಗ ಲೋಕಸಭಾ ಚುನಾವಣೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಮತದಾನ ಕೆಲಸ ನಿರ್ವಹಿಸಲು ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಧಿಕಾರಿ, ಸಿಬಂದಿ, ಪಿಆರ್‌ಒ, ಎಪಿಆರ್‌ಒ, ಪಿಒಗಳನ್ನು ನಿಯೋಜಿಸ ಲಾಗಿದ್ದು, ನಿಯೋಜಿತ ಮತಗಟ್ಟೆ ಅ ಧಿಕಾರಿ, ಸಿಬಂದಿಯು ಮಸ್ಟರಿಂಗ್ ಕೇಂದ್ರವಾದ ಬೈಂದೂರಿನ ಸರಕಾರಿ ಪ.ಪೂ. ಕಾಲೇಜಿಗೆ ಎ. 22 ರಂದು ಹಾಜರಾಗಲು ವಾಹನ ವ್ಯವಸ್ಥೆ ಮಾಡಲಾಗಿದೆ.
ವಿವಿಧ ತಾಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ಹೊರಡುವ ಸಿಬಂದಿಗೆ ತಾಲೂಕು ಕೇಂದ್ರಗಳಿಂದ ಬೈಂದೂರಿನ ಮಸ್ಟರಿಂಗ್ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಉಡುಪಿ , ಕಾಪು, ಕಾರ್ಕಳ, ಕುಂದಾಪುರ ತಾಲೂಕು ಕೇಂದ್ರಗಳಲ್ಲಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಎ. 22 ರಂದು ಬೆಳಗ್ಗೆ 6.30 ಕ್ಕೆ ಬಸ್ ಹೊರಡಲಿದ್ದು, ಅನಂತರ ಬಸ್ ವ್ಯವಸ್ಥೆ ಇರುವುದಿಲ್ಲ. ಚುನಾವಣೆ ಮುಗಿದು ಡಿ ಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ ಮತಯಂತ್ರಗಳನ್ನು ಹಸ್ತಾಂತರಿಸಿದ ಅನಂತರ ವಾಪಸ್ ಕೇಂದ್ರ ಸ್ಥಾನಗಳಿಗೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ.
Advertisement
ಹೊರಡುವ ಸ್ಥಳಕುಂದಾಪುರದಲ್ಲಿ ತಾಲೂಕು ಕಚೇರಿ ಬಳಿ, ಉಡುಪಿಯಲ್ಲಿ ತಾಲೂಕು ಕಚೇರಿ ಮತ್ತು ಸಿಟಿ ಬಸ್ ನಿಲ್ದಾಣ, ಕಾಪುವಿನಲ್ಲಿ ತಾಲೂಕು ಕಚೇರಿ ಮತ್ತು ಬಸ್ ನಿಲ್ದಾಣ, ಕಾರ್ಕಳದಲ್ಲಿ ತಾಲೂಕು ಕಚೇರಿ ಮತ್ತು ಬಂಡಿಮಠದ ಬಸ್ ನಿಲ್ದಾಣದಿಂದ ಬಸ್ ಹೊರಡಲಿದೆ. ನಿಯೋಜಿತ ಅಧಿಕಾರಿ/ಸಿಬಂದಿ ಪ್ರಯೋಜನ ಪಡೆಯುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.