ಬೆಂಗಳೂರು: ಆನ್ಲೈನ್ ಶಿಕ್ಷಣ ಕಂಪೆನಿಯಾದ ಬೈಜು(Byju’s) ಈ ವರ್ಷದ ಮೊದಲ ಫಂಡ್ ರೈಸಿಂಗ್ ರೌಂಡ್ ನಲ್ಲಿ 600 ರಿಂದ 700 ಮಿಲಿಯನ್ ಪಡೆಯಲು ಪೂರ್ವ ಭಾವಿ ಮಾತುಕತೆ ನಡೆಸುತ್ತಿದೆ, ಇದು ಎಜುಕೇಶನ್ ಟೆಕ್ (edTech) ಯುನಿಕಾರ್ನ್ ಅನ್ನು 15 ಬಿಲಿಯನ್ ರಷ್ಟು ಮೌಲ್ಯೀಕರಿಸಲಿದೆ ಎಂದು ಕಂಪೆನಿಯ ಆಂತರಿಕ ವಿಚಾರಗಳ ಬಗ್ಗೆ ತಿಳಿದಿರುವ ಹೆಸರು ಹೇಳಲು ಇಚ್ಛಿಸದ ಒಬ್ಬರು ಮಾಹಿತಿ ನೀಡಿದ್ದಾರೆ.
ಮುಂದಿನ ವಾರದಲ್ಲಿಯೇ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ” ಎಂದು ಅವರು ತಿಳಿಸಿದ್ದಾರೆ . ಬೈಜು(Byju’s) ಕಂಪೆನಿಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ನ್ಯೂಸ್ ಪೋರ್ಟಲ್ ಎಂಟ್ರಾಕ್ರ್ ಇ ವರದಿ ಮಾಡಿದೆ.
ಓದಿ : ಸದಸ್ಯರು ಸಮಾಜಪರ ಕಾರ್ಯಗಳಿಗೆ ಕೈ ಜೋಡಿಸಿ: ಆರ್. ಕೆ. ಸುವರ್ಣ
ಬೈಜು 2020 ರಲ್ಲಿ 25 1.25 ಶತಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿತ್ತು ಮತ್ತು ಕಳೆದ ನವೆಂಬರ್ ನಲ್ಲಿ ಬ್ಲ್ಯಾಕ್ ರಾಕ್ ಮತ್ತು ಟಿ ರೋವ್ ಪ್ರೈಸ್ ನಿಂದ ಸುಮಾರು 200 ಮಿಲಿಯನ್ ಸಂಗ್ರಹಿಸಿದ ನಂತರ ಇದರ ಮೌಲ್ಯ 12 ಬಿಲಿಯನ್ ಆಗಿತ್ತು.
ಮುಖ್ಯವಾಗಿ “ಆಕಾಶ್ ಎಜುಕೇಶನಲ್ ಸರ್ವೀಸ್ ನನ್ನು ಖರೀದಿಗೆ ಬಂಡವಾಳವನ್ನು ಬಳಸಲಾಗುತ್ತದೆ” ಎಂದು ಮತ್ತೊಬ್ಬ ಹೆಸರು ಹೇಳಲು ಇಚ್ಛಿಸದ ವ್ಯಕ್ತಿ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ, ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಆನ್ ಲೈನ್ ಕಲಿಕಾ ಕ್ಷೇತ್ರದಲ್ಲಿ ಬಲವರ್ಧನೆ ಮುಂದುವರಿದಿರುವ ಕಾರಣ ಬೈಜು ಸಂಸ್ಥೆ ಈ ಬಗ್ಗೆ ಪೂರ್ವ ಭಾವಿ ಮಾತುಕತೆ ನಡೆಸುತ್ತಿದೆ ಎಂಬ ವರದಿಯಾಗಿದೆ.
ಓದಿ : ‘ಈಗೋ’ ಒಳ್ಳೆಯದೇ… ಎಲ್ಲಿಯ ತನಕವೆಂದರೇ..