Advertisement

ಬ್ಯಾಡಗಿ ಮಾರುಕಟ್ಟೆಗೆ 1,97,796 ಮೆಣಸಿನಕಾಯಿ ಚೀಲ ಆವಕ

07:02 PM Feb 09, 2021 | Team Udayavani |

ಬ್ಯಾಡಗಿ: ಮಾರುಕಟ್ಟೆ ದಿನವಾದ ಸೋಮವಾರ ಮೆಣಸಿನಕಾಯಿ ಆವಕ 2 ಲಕ್ಷ ಚೀಲ ಸಮೀಪಿಸಿದ್ದು  ಪ್ರಸಕ್ತ ವರ್ಷ ಅತ್ಯಂತ ಗರಿಷ್ಠ ಎನಿಸಿದೆ. ಆದರೆ ಆವಕಿನಲ್ಲಿ ಹೆಚ್ಚಳವಾಗಿದ್ದರೂ ಮೂರು ತಳಿಗಳ ದರದಲ್ಲಿ ಸ್ಥಿರತೆ ಕಂಡು ಬಂದಿದೆ.

Advertisement

ಸೋಮವಾರದ ಮಾರುಕಟ್ಟೆಗೆ ರವಿವಾರ ಮಧ್ಯಾಹ್ನದಿಂದಲೇ ರಾಜ್ಯವೂ ಸೇರಿದಂತೆ ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳಿಂದ ಮೆಣಸಿನಕಾಯಿ ಹೊತ್ತು ಸಾವಿರಾರು ಲಾರಿಗಳು ಪಟ್ಟಣಕ್ಕೆ ಆಗಮಿಸಿದವು. ಮೊದಲೇ ಆವಕದಲ್ಲಿ ಹೆಚ್ಚಳ ನಿರೀಕ್ಷಿಸಿದ್ದ ಎಪಿಎಂಸಿ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಸಹಕಾರದೊಂದಿಗೆ ಪ್ರಾಂಗಣದಲ್ಲಿ ಟ್ರ್ಯಾಕ್‌ ಆಗದಂತೆ ನೋಡಿಕೊಂಡರು.

ನಿರೀಕ್ಷೆಯಂತೆ ಸೋಮವಾರ ಒಟ್ಟು 1,97,796 ಚೀಲಗಳು ಆವಕವಾಗಿದ್ದರೂ ಕೆಲ ಅಂಗಡಿಗಳಲ್ಲಿ ಕಾಲಿಡಲು ಸ್ಥಳವಿಲ್ಲದಂತಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಚೀಲಗಳನ್ನು ಮಾರಾಟಕ್ಕಿಟ್ಟಿದ್ದ ದೃಶ್ಯಗಳು ಕಂಡು ಬಂದವು.

ಖರೀದಿಗೆ ಮುಗಿಬಿದ್ದ ವ್ಯಾಪಾರಸ್ಥರು: ದರದಲ್ಲಿ ಹೆಚ್ಚಳ ಸೇರಿದಂತೆ ನಿರೀಕ್ಷಿತ ಸಮಯಕ್ಕೆ ಮೆಣಸಿನಕಾಯಿ ಪರ ಪ್ರಾಂತಗಳಿಗೆ ರವಾನೆ ಆಗದಿದ್ದರೂ ಸ್ಥಳೀಯ ವ್ಯಾಪಾರಸ್ಥರಲ್ಲಿ ಮೆಣಸಿನಕಾಯಿ ಖರೀದಿಸುವ ಉತ್ಸಾಹಕ್ಕೇನೂ ಕೊರತೆಯಿರಲಿಲ್ಲ. ಟೆಂಡರ್‌ ಹಾಕುವ ಅವಧಿ  ಹೆಚ್ಚಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆವರೆಗೂ ಪ್ರಾಂಗಣದಲ್ಲಿ ವ್ಯಾಪಾರಸ್ಥರು ಟೆಂಡರ್‌ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು.

ಇದನ್ನೂ ಓದಿ :ಮೃತಪಟ್ಟ ಕೊಬ್ಬರಿ ಹೋರಿಗೆ ಕಂಬನಿ

Advertisement

ಸೋಮವಾರದ ಮಾರುಕಟ್ಟೆ ದರ: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬ್ಯಾಡಗಿ ಕಡ್ಡಿತಳಿ ಪ್ರತಿ ಕ್ವಿಂಟಲ್‌ಗೆ ಕನಿಷ್ಟ 1250, ಗರಿಷ್ಠ 26269 ಮಾದರಿ 12109 ರೂ.ಗೆ ಮಾರಾಟವಾದರೆ, ಡಬ್ಬಿ ತಳಿ ಕನಿಷ್ಟ 2089, ಗರಿಷ್ಠ 66,666, ಸರಾಸರಿ 15429 ಹಾಗೂ ಗುಂಟೂರ ತಳಿ ಕನಿಷ್ಟ 700, ಗರಿಷ್ಠ 10569, ಮಾದರಿ 5310 ರೂ.ಗಳಿಗೆ ಮಾರಾಟವಾಯಿತು. ಉಳಿದಂತೆ ಗುಣಮಟ್ಟವಿಲ್ಲದಿರುವ ಪಟ್ಟು 458 ಲಾಟ್‌ ಗಳಿಗೆ  ವ್ಯಾಪಾರಸ್ಥರು ಯಾವುದೇ ಟೆಂಡರ್‌ ಹಾಕಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next