ಕಾರವಾರ: ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ಯಲ್ಲಾಪುರ, ಮುಂಡಗೋಡ ತಾಲೂಕು ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿವೆ. ಈ ಕ್ಷೇತ್ರದಲ್ಲಿ ಒಟ್ಟು 1.72 ಲಕ್ಷ ಮತದಾರರಿದ್ದು, 87,899 ಪುರುಷ ಹಾಗೂ 84,647 ಮಹಿಳಾ ಮತದಾರರು ಇದ್ದಾರೆ.
ಚುನಾವಣೆಯಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ಷೇತ್ರಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಂಗವಿಕಲರು, ಹಿರಿಯರೂ ಸೇರಿದಂತೆ ಯುವ ಮತದಾರರು ಕೂಡ ಆಸಕ್ತಿಯಿಂದ ಬಂದು ಮತದಾನ ಮಾಡುತ್ತಿದ್ದಾರೆ.
ವಿಕಲಚೇತನ ಮತದಾರರಿಗೆ ಹಾಗೂ ಹಿರಿಯ ಮತದಾರರ ಸಹಾಯಕ್ಕಾಗಿ ಚುನಾವಣಾ ಆಯೋಗದಿಂದ ಗಾಲಿಕುರ್ಚಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದ್ದು ವಿಕಲಚೇತನರಿಗೆ ಗಾಲಿಕುರ್ಚಿಯ ಮೂಲಕ ನೆರವಾಗುತ್ತಿದ್ದು ಕಂಡುಬಂತು.
ಯಲ್ಲಾಪುರ ಕ್ಷೇತ್ರದ ದೂರಸಂಪರ್ಕ ಇಲ್ಲದ ಸ್ಥಳಗಳಲ್ಲಿ ರನ್ನರ್ ಗಳನ್ನು ನೇಮಿಸಲಾಗಿದೆ. ರನ್ನರ್ ಗಳು ಎರಡು ಗಂಟೆಗೆ ಒಮ್ಮೆ ನೆಟ್ ವರ್ಕ್ ಇರುವ ಸ್ಥಳಕ್ಕೆ ಬಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬೆಳಿಗ್ಗೆ 7ರಿಂದ ಆರಂಭವಾದ ಮತದಾನವು ಬೆಳಿಗ್ಗೆ 9 ಗಂಟೆ ಸುಮಾರಿಗೆ 7.54℅ ಹಾಗೂ 11 ಗಂಟೆಯ ಸುಮಾರಿಗೆ 23.87℅ ಮತದಾನವಾಗಿದೆ. 1ಗಂಟೆಗೆ 41.72% ಮತದಾನವಾಗಿದ್ದು, ಇತರ ಕ್ಷೇತ್ರಗಳಿಗಿಂತ ಉತ್ತಮ ಮತದಾನವಾಗು್ತತಿದೆ.