ಹೊಸಬೆಟ್ಟು: ರಾಯರ ಪ್ರತೀಕವಾದ, ಎಲ್ಲ ಭಕ್ತರ ಸಂಕೇತ ರೂಪ ಗೋಪುರ. ದೇವರ ಆರಾಧನೆಯಿಂದ ಮನುಷ್ಯ ಜನ್ಮ ಸಾರ್ಥಕ ಎಂದು ಉಡುಪಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥರು ನುಡಿದರು.
ನವವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು, ಶ್ರೀಗುರು ರಾಘವೇಂದ್ರ ಸ್ವಾಮಿ ಮಠ, ಹೊಸಬೆಟ್ಟು ಇಲ್ಲಿ ಬ್ರಹ್ಮಕಲ ಶೋತ್ಸವ ಸಮಿತಿ ಇದರ ಸಹಕಾರದಿಂದ ನಿರ್ಮಾಣಗೊಂಡ ರಾಜಗೋಪುರ (ಮುಖಮಂಟಪ) ಅನಾವರಣಗೊಳಿಸಿ ಅವರು ಆಶೀರ್ವಚನ ನೀಡಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ದೇವರ ದಾರಿಯ ಪಥ ತೋರಿಸುವುದು ಗುರುಗಳು. ಈಗಿನ ಕಾಲದಲ್ಲಿ ಸಾತ್ವಿಕತೆಯ ಕಾಲ ಕಡಿಮೆಯಾಗಿದೆ. ತಾಮಸ ಕಾಲ ಹೆಚ್ಚಾಗಿದೆ. ಇಷ್ಟ ರಹಿತ ಕಾಲದಲ್ಲಿ ನಾವೇನು ಮಾಡುತ್ತೇವೆ ಎನ್ನುವುದು ಬಹು ಮುಖ್ಯ. ದೇವರ ನಾಮಸ್ಮರಣೆಯ ಮೂಲಕ ಸಕಲ ಕಾರ್ಯಗಳು ಸಾಂಗವಾಗಿ ನೆರವೇರಲಿ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಬದವಿದೆ, ಕಗ್ಗಿ ಗೋಪಾಲ ಕೃಷ್ಣ ಆಚಾರ್ಯ, ಉದ್ಯಮಿ ಪ್ರಮೋದ್ ಶೆಟ್ಟಿ ಹೊಸಬೆಟ್ಟು, ಎನ್.ಎಂ.ಪಿ.ಟಿ. ಸಿವಿಲ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ. ಶೇಖರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪಿ.ಎಚ್. ಆನಂದ್, ಕೆ. ಮೋನಪ್ಪ ಕುಳಾಯಿ, ಕಗ್ಗಿ ಶ್ರೀನಿವಾಸ ಆಚಾರ್ಯ, ಶ್ರೀ ರಾಘವೇಂದ್ರ ಭಜನ ಮಂಡಳಿ ಹೊಸಬೆಟ್ಟು ಅಧ್ಯಕ್ಷ ಬಿ.ಜಿ. ರಾವ್, ಸುರತ್ಕಲ್ ವಲಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ವಿ. ಸುಬ್ರಹ್ಮಣ್ಯ, ಹಿಂದೂ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಜಯಚಂದ್ರ ಹತ್ವಾರ್, ಸುರತ್ಕಲ್ ಶಶಿ ಮಂಗಳಾ ಗ್ಯಾಸ್ ಏಜೆನ್ಸಿಸ್ ಮಾಲಕ ಶಶಿಧರ ತಂತ್ರಿ, ಹೊಸಬೆಟ್ಟು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರಿಕೃಷ್ಣ ಸಾಲ್ಯಾನ್, ಟಿ. ಕೃಷ್ಣಮೂರ್ತಿ ರಾವ್, ನಿವೃತ್ತ ಅಧ್ಯಾಪಿಕೆ ಭಾನುಮತಿ ಸುಮಂತ್ ಕುಮಾರ್, ಸಮಿತಿಯ ಪದಾ ಧಿಕಾರಿಗಳು, ಭಕ್ತರು, ಉಪಸ್ಥಿತರಿದ್ದರು. ರಾಜಗೋಪುರ ಶಿಲ್ಪಿ ಡಿ. ಮಂಜುನಾಥ ಶಿವಮೊಗ್ಗ, ಪಿ.ಎಸ್. ಶರ್ಮ ಅವರನ್ನು ಸಮ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿ ಕಾರಿ ಎಚ್.ವಿ. ರಾಘವೇಂದ್ರ ರಾವ್ ಸ್ವಾಗತಿಸಿದರು. ಶ್ರೀನಿವಾಸ್ ಕುಳಾಯಿ ಪ್ರಾಸ್ತಾವಿಸಿದರು. ಮಾತೃಮಂಡಳಿ ಕಾರ್ಯ ದರ್ಶಿ ಕೆ. ಕಲಾವತಿ ವಂದಿಸಿದರು. ಹರಿಣಿ ಜಯಶಂಕರ್ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಎಲ್ಲರ ಸಹಕಾರ ಅಗತ್ಯ
ಬ್ರಹ್ಮಕಲಶೋತ್ಸವ ಸಮಿತಿ, ವ್ಯವಸ್ಥಾಪನ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು ಅಧ್ಯಕ್ಷತೆ ವಹಿಸಿ, ಇಂದು ವಾದೀಶಾಚಾರ್ಯರ ಬಹುದಿನದ ಕನಸು ನನಸಾಗಿದೆ. ಭಕ್ತರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಸಹಿತ ಸಮಿತಿಯ ಸಂಪೂರ್ಣ ಸಹಕಾರದಲ್ಲಿ ರಾಜಗೋಪುರ ಎದ್ದು ನಿಂತಿದೆ. ಇದಕ್ಕೆ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು. ಇದೇ ರೀತಿ ಮೇ 26ರಂದು ನಡೆಯುವ ಬ್ರಹ್ಮಕಲಶೋತ್ಸವಕ್ಕೂ ಎಲ್ಲರ ಸಹಕಾರವಿರಲಿ. ಶ್ರೀ ಗುರುಗಳ ಆಶೀರ್ವಾದಿಂದ ಆ ಕಾರ್ಯವು ಯಶಸ್ವಿಯಾಗಿ ನೆರವೇರಲಿದೆ ಎಂದರು.