Advertisement
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಜುಲ್ಫಾದಿ ಜುಲ್ಕಿಫ್ಲಿ (25) ಅವರಿಗೆ 20 ವರ್ಷ ನಿಷೇಧ ಹಾಗೂ 25 ಸಾವಿರ ಡಾಲರ್ ಜುಲ್ಮಾನೆ ವಿಧಿಸಲಾಗಿದೆ. ಮತ್ತೂಬ್ಬ ಆಟಗಾರ, 31ರ ಹರೆಯದ ಟಾನ್ ಚುನ್ ಅವರಿಗೆ 15 ವರ್ಷ ನಿಷೇಧದ ಜತೆಗೆ 15 ಸಾವಿರ ಡಾಲರ್ ಮೊತ್ತದ ದಂಡ ಹೇರಲಾಗಿದೆ. ಇದರೊಂದಿಗೆ ಇವರಿಬ್ಬರ ಬ್ಯಾಡ್ಮಿಂಟನ್ ಕ್ರೀಡಾ ಬಾಳ್ವೆ ಬಹುತೇಕ ಕೊನೆಗೊಂಡಂತಾಗಿದೆ. ಕಳೆದ ಜ. 12ರಿಂದ ಈ ನಿಷೇಧ ಜಾರಿಗೆ ಬರಲಿದೆ.
ನಿಷೇಧಿತ ಆಟಗಾರರಿಬ್ಬರೂ ಈಗ ಮಲೇಶ್ಯ ಬ್ಯಾಡ್ಮಿಂಟನ್ ಸಂಸ್ಥೆಯ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದರೆ ಟಾನ್ ಚುನ್ 2010ರ ಥಾಮಸ್ ಕಪ್ ಪಂದ್ಯಾವಳಿಗಾಗಿ ಮಲೇಶ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಜುಲ್ಫಾದಿ 2011ರಲ್ಲಿ ಈಗಿನ ವಿಶ್ವ ಚಾಂಪಿಯನ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಮಣಿಸಿ ಜೂನಿಯರ್ ವರ್ಲ್ಡ್ ಚಾಂಪಿಯನ್ ಕಿರೀಟ ಏರಿಸಿಕೊಂಡಿದ್ದರು.