Advertisement

ಬೈ 1 ಗೆಟ್‌ 1 ಫ್ರೀ ಅಂತಿದ್ದಾರೆ ಸಹೋದರರು

12:06 PM May 02, 2020 | Suhan S |

ಕನ್ನಡದಲ್ಲಿ ಒಂದು ವಿಭಿನ್ನ ಶೀರ್ಷಿಕೆಯ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಬೈ 1 ಗೆಟ್‌ 1 ಫ್ರೀ’. ಚಿತ್ರೀಕರಣ ಮುಗಿಸಿಕೊಂಡು ಪ್ರಚಾರ ಕೆಲಸ ಶುರು ಮಾಡಬೇಕು ಅನ್ನುವಷ್ಟರಲ್ಲಿ ಕೋವಿಡ್ 19  ಆವರಿಸಿದೆ. ಆದರೆ ಈ ಚಿತ್ರದ ಪೋಸ್ಟರ್‌ ಅನ್ನು ಆನಂದ್‌ ಆಡಿಯೋ ಯುಟ್ಯೂಬ್‌ ಅಲ್ಲಿ ಬಿಡುಗಡೆ ಮಾಡಲಾಗಿದೆ.

Advertisement

ಈ ಚಿತ್ರದ ಮತ್ತೂಂದು ಆಕರ್ಷಣೆ ಅಂದರೆ ಅವಳಿ ಸಹೋದರರು ಮಧು ಮಿಥುನ್‌ ಹಾಗೂ ಮನು ಮಿಲನ್‌ ಮುಖ್ಯ ಪಾತ್ರ ನಿರ್ವಹಿಸಿರುವುದು. ಜನಪ್ರಿಯ ನಟ ಕಿಶೋರ್‌ ಇಲ್ಲಿ ಕೇಂದ್ರ ಬಿಂದು. ರಿಷಿತಾ ಮಲ್ನಾಡ್‌, ಉಷ ಭಂಡಾರಿ, ಗೌರೀಶ್‌ ಅಕ್ಕಿ, ರೋಷಿಣಿ ತೆಲ್ಕರ್‌, ಬಲರಜವಾಡಿ ಹಾಗೂ ಇತರರು ತಾರಗಣದಲ್ಲಿದ್ದಾರೆ.

ಮೂಲತಃ ಮೈಸೂರಿನವರಾದ ಮಧು ಹಾಗೂ ಮಿಥುನ್‌ ಅವಳಿ ಸಹೋದರರಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಕಿರಿ ವಯಸ್ಸಿನ ಕೆಲವು ಘಟನೆಗಳು ಈ ಚಿತ್ರದಲ್ಲಿ ಅಡಕವಾಗಿದೆ. ಅವಳಿ ಸಹೋದರರು ಏನೇನು ಅನುಭವಿಸಬೇಕಾಗುತ್ತದೆ ಎಂಬುದನ್ನೂ ಈ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾದಲ್ಲಿ ಹೇಳಲಾಗಿದೆ. ಎಸ್‌ಬಿಎಸ್‌ಸಿ ಕ್ರಿಯೇಷನ್ಸ್‌ ಅಡಿಯಲ್ಲಿ ಮದುರಾಜ್‌ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹರೀಶ್‌ ಅನಿಲ್ಗೋಡ್‌ ಚಿತ್ರದಲ್ಲಿ ಅವಳಿ ಜವಳಿ ಮಕ್ಕಳು ಹುಟ್ಟಿದರೆ ಜರುಗುವ ಪ್ಲಸ್‌ ಹಾಗೂ ಮೈನಸ್‌ ವಿಚಾರ ಇಟ್ಟುಕೊಂಡಿದ್ದಾರೆ ಚಿತ್ರಕತೆಯಲ್ಲಿ. ಚಿತ್ರದ ನಾಲ್ಕು ಹಾಡುಗಳಿಗೆ ದಿನೇಶ್‌ ಕುಮಾರ್‌ ರಾಗ ಸಂಯೋಜನೆ ಮಾಡಿದ್ದು ವಿಜಯಪ್ರಕಾಶ್‌, ಅನನ್ಯ ಭಟ್‌, ಶರತ್‌ ಹಾಗೂ ಇತರರು ಹಾಡು ಹೇಳಿದ್ದಾರೆ. ಈ ಚಿತ್ರಕ್ಕೆ ಅಭಿಷೇಕ್‌ ಪಾಂಡೆ ಹಾಗೂ ವಿಶ್ವಜಿತ್‌ ರಾವ್‌ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನವನ್ನು ಸುರೇಶ್‌ ಅರ್ಮೂಗಮ್‌ ನಿರ್ವಹಿಸಿದ್ದಾರೆ. ಕೊರೊನಾ ಮುಗಿದ ಬಳಿಕ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next